-->
Bookmark

Gadag : ಮಲಗಿದ್ದ ರೈತನ‌ ತಲೆ ಕತ್ತರಿಸಿ ಕೊಲೆ - ಗದಗದಲ್ಲೊಂದು ಭೀಕರ ಘಟನೆ

Gadag : ಮಲಗಿದ್ದ ರೈತನ‌ ತಲೆ ಕತ್ತರಿಸಿ ಕೊಲೆ - ಗದಗದಲ್ಲೊಂದು ಭೀಕರ ಘಟನೆ 

ಗದಗ : (Dec_09_2023)

ಮೆಣಸಿನಕಾಯಿ ಜಮೀನಿನಲ್ಲಿ ಕಾವಲು ಕಾಯುತ್ತಿದ್ದ ರೈತನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಜಮೀನಲ್ಲಿ ಮಲಗಿದ್ದ ವ್ಯಕ್ತಿಯ ತಲೆಯನ್ನೆ ಕತ್ತರಿಸಿದ್ದಾರೆ. ಹತ್ಯೆಯಾದ ವ್ಯಕ್ತಿಯನ್ನ ಕೊಪ್ಪಳ ಜಿಲ್ಲೆಯ ಮಾಳೆಕೊಪ್ಪ ಗ್ರಾಮದ ನಿವಾಸಿ ಸಣ್ಣ ಹನಂತಪ್ಪ ವಜ್ರದ್ (60) ಎಂದು ಗುರುತಿಸಲಾಗಿದೆ. 

ಸಣ್ಣಹನಂತಪ್ಪರ ಮುಂಡವನ್ನು ಜಮೀನಿನಲ್ಲೇ ಬಿಟ್ಟು, ರುಂಡ ಸಮೇತ ಪರಾರಿ ಆಗಿದ್ದಾರೆ ಕೊಲೆಗಾರರು. ಗದಗ ತಾಲೂಕಿನ ತಿಮ್ಮಾಪೂರ ಗ್ರಾಮದ ಜಮೀನೊಂದರಲ್ಲಿ ಈ ದುರ್ಘಟನೆ ನಡೆದಿದೆ.  ಮೆಣಸಿನಕಾಯಿ ಕಾವಲಿಗಾಗಿ ಸಣ್ಣದೊಂದು ಗುಡಿಸಲು ನಿರ್ಮಿಸಿಕೊಂಡು ಮಲಗಿದ್ದರು. ಈ ವೇಳೆ ಕೊಲೆಗಡುಕರು ಸಣ್ಣಹನಂತಪ್ಪರ ತಲೆಯನ್ನೇ ಕತ್ತರಿಸಿದ್ದಾರೆ. 

ಈ ಭೀಕರ ಹತ್ಯೆ ಕಂಡು ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಗದಗ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದು, ಕೊಲೆಗಾರರಿಗಾಗಿ ಜಾಲ ಬೀಸಿದ್ದಾರೆ.
Post a Comment

Post a Comment