-->
Bookmark

Bengaluru :ಹಿರಿಯ ನಟಿ ಲೀಲಾವತಿ ಅಗಲಿಕೆ : ಡಾ. ಪ್ರಭು ಗಂಜಿಹಾಳ್, ಡಾ. ವೀರೇಶ್ ಹಂಡಿಗಿ ಸಂತಾಪ

Bengaluru : ಹಿರಿಯ ನಟಿ ಲೀಲಾವತಿ ಅಗಲಿಕೆ : ಡಾ. ಪ್ರಭು ಗಂಜಿಹಾಳ್, ಡಾ. ವೀರೇಶ್ ಹಂಡಿಗಿ ಸಂತಾಪ 
ಬೆಂಗಳೂರು : (Dec_08_2023)

ಹಿರಿಯ ನಟಿ ಲೀಲಾವತಿ ಅಗಲಿಕೆಗೆ ಸಿನಿಮಾ ಪತ್ರಕರ್ತರಾದ ಡಾ. ಪ್ರಭು ಗಂಜಿಹಾಳ್,ಡಾ.ವೀರೇಶ ಹಂಡಿಗಿ ಸಂತಾಪ ಸೂಚಿಸಿದ್ದಾರೆ. ಹಲವು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಲೀಲಾವತಿ ಅವರು, ನಟನೆಗೆ  ಬಂದ ಅದೆಷ್ಟೋ ಕಲಾವಿದರಿಗೆ ತಾಯಿಯಾಗಿದ್ರು. ಅತ್ತ್ಯುತ್ತಮ 
ನಟನಾ ಕೌಶಲ್ಯ ಹೊಂದಿದ್ದ ಅವರು, ಹಲವರಿಗೆ ದಾರಿ ದೀಪವಾಗಿದ್ರು. ಅವರ ಅಗಲಿಗೆ ನೋವು ತಂದಿದೆ. ಅವರ ಸ್ಥಾನ ತುಂಬಲು ಯಾರಿಂದಲೂ ಸಾಧ್ಯವಿಲ್ಲ. ನಟ ವಿನೋದ್ ರಾಜ್ ಅವರು ಸಹ, ಲೀಲಾವತಿ ಅವರನ್ನ ಅಕ್ಕರೇ, ಪ್ರೀತಿಯಿಂದ ನೋಡಿಕೊಂಡಿದ್ದಾರೆ. ತಾಯಿಯ ಕಾಳಜಿ ಹೇಗೆ ಮಾಡಬೇಕೆಂದು ಎಲ್ಲರಿಗೂ ಮಾದರಿಯಾಗಿದ್ದಾರೆ. ಚಿತ್ರ ರಂಗದ ಧ್ರುವತಾರೆ ಕಣ್ಮರೆಯಾಗಿದೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹಲವು ಚಲನ ಚಿತ್ರಗಳಿಗೆ ಪತ್ರಿಕಾ ಸಂಪರ್ಕ ಮಾಡಿರುವ  ಡಾ. ಪ್ರಭು ಗಂಜಿಹಾಳ್,ಡಾ.ವೀರೇಶ ಹಂಡಿಗಿ ಕಿರಾ ನ್ಯೂಸ್ ಕನ್ನಡ ದೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
Post a Comment

Post a Comment