-->
Bookmark

Bengaluru : ತೆರೆಗೆ ಸಿದ್ಧವಾದ " ಗಾಂಧಿಗ್ರಾಮ "

Bengaluru : ತೆರೆಗೆ ಸಿದ್ಧವಾದ " ಗಾಂಧಿಗ್ರಾಮ " 

ಬೆಂಗಳೂರ : (Dec_26_2023)
ಆರ್ ಪಿಕ್ಚರ್ಸ್ ಲಾಂಛನದಲ್ಲಿ  ಯುವ ಪ್ರತಿಭೆ ರಾಮಾರ್ಜುನ್ ನಟ, ನಿರ್ದೇಶಕ, ನಿರ್ಮಾಪಕರಾಗಿ ತಯಾರಿಸಿರುವ ಚಲನಚಿತ್ರ ‘ಗಾಂಧಿ ಗ್ರಾಮ’ ಕ್ಕೆ   ಸೆನ್ಸಾರ್ ಮಂಡಳಿಯಿಂದ ಯು/ಎ  ಪ್ರಮಾಣ ಪತ್ರ ದೊರಕಿದ್ದು ತೆರೆಗೆ ಬರಲು ಸಿದ್ಧವಾಗಿದೆ.
          ಈ ಚಿತ್ರವು ವಿಭಿನ್ನವಾದ ಕಥಾಹಂದರವನ್ನು ಹೊಂದಿದೆ . ಗ್ರಾಮ ಅಭಿವೃದ್ಧಿ ಮಾಡಲು ಬರುವ ನಾಯಕ ಹಳ್ಳಿಯ ಜನರು ನಾಯಕನಿಗೆ ಸ್ಪಂದಿಸುವ ರೀತಿ ಹಾಗೂ ನಾಯಕನನ್ನು ಹಳ್ಳಿಯ ಜನರು ನೋಡುವ ಪರಿ ಇದರಲ್ಲಿದೆ.    ಹಾಸ್ಯದ  ಹೊನಲು ನವಿರಾಗಿ ಮೂಡಿದೆ, ಅದೇ ಹಳ್ಳಿಯಲ್ಲಿ ಪರಿಚಯವಾದ ನಾಯಕಿ ಜೊತೆಗಿನ ಪ್ರೇಮ ಮುಂದೇನಾಗುತ್ತದೆ ಎಂಬುದನ್ನು ಚಿತ್ರಮಂದಿರದಲ್ಲಿ ನೋಡಿ. ಒಟ್ಟಾರೆ ‘ಗಾಂಧಿ ಗ್ರಾಮ’ ಚಲನಚಿತ್ರ ಕಾಮಿಡಿ, ಲವ್, ಸೆಂಟಿಮೆಂಟ್  ಇರುವ ಚಿತ್ರ, ಗಾಂಧೀಜಿಯವರ ಆದರ್ಶಗಳನ್ನು ಈ ಚಿತ್ರದಲ್ಲಿ ಅಳವಡಿಸಲಾಗಿದೆ, ಇಡೀ ಕುಟುಂಬ ಕುಳಿತು ನೋಡುವ ಒಂದಷ್ಟು ಒಳ್ಳೆಯ ಸಂದೇಶ ಸಾರುವ ಚಲನಚಿತ್ರ ಎಂದು ನಿರ್ದೇಶಕ ರಾಮಾರ್ಜುನ್ ಹೇಳುತ್ತಾರೆ. ಸಧ್ಯ  ಚಿತ್ರವನ್ನು ತೆರೆಗೆ ತರುವ  ತಯಾರಿಯಲ್ಲಿ ಚಿತ್ರತಂಡ ನಿರತವಾಗಿದೆ.
      ಚಿತ್ರದಲ್ಲಿ   ರಾಮಾರ್ಜುನ್ ,  ಸುಹಾಸಿನಿ ಗಣೇಶ್, ಮಹಾದೇವ ಮೂರ್ತಿ, ಕೇಶವ್ ಶೀಳನೆರೆ (ಕಾಮಿಡಿ ಗ್ಯಾಂಗ್), ವೃಷಬೇಂದ್ರ , ಬಸವರಾಜು ಉಮ್ಮತ್ತೂರು, ಜೋಕರ್ ಹನುಮಂತ, ಮಂಜುಳಮ್ಮ, ರಾಜಲಕ್ಷ್ಮಿ, ನಾಗರತ್ನ ಮೊದಲಾದವರು ಅಭಿನಯಿಸಿದ್ದಾರೆ. ತಾಂತ್ರಿಕ ವರ್ಗದಲ್ಲಿ ಛಾಯಾಗ್ರಹಣ ರವಿ ಜೂಮ್, ಸಂತೋಷ್ ಕುಮಾರ್ ಬಿ, ರಘು ಎ ರೂಗಿ , ಸಂಗೀತ: ವಿಶಾಲ್ ಆಲಾಪ್, ಸಂಜಯ್ ಆರ್ ಎಸ್ , ಸಂಕಲನ ಎಸ್. ಶಿವಕುಮಾರ ಸ್ವಾಮಿ, ರಾಮಾರ್ಜುನ್, ಪತ್ರಿಕಾಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ ಅವರದಿದ್ದು, ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ  ರಾಮಾರ್ಜುನ್ ಅವರದಿದೆ.
**
ವರದಿ:
ಡಾ.ಪ್ರಭು ಗಂಜಿಹಾಳ
ಮೊ: ೯೪೪೮೭೭೫೩೪೬
Post a Comment

Post a Comment