ಬಾಗಲಕೋಟೆ ಜಿಲ್ಲೆಯ ಬಾದಾಮಿ ಪಟ್ಟಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದಿಂದ, ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕ ಬಾಗಲಕೋಟೆ ಸಹಯೋಗದೊಂದಿಗೆ ಪ್ರಥಮ "ಬೆಳಗಾವಿ ವಿಭಾಗೀಯ ಸಾಂಸ್ಕೃತಿಕ ಸಮ್ಮೇಳನ ೨೦೨೩" ನಡೆಯಿತು. ಕಾರ್ಯಕ್ರಮವನ್ನ ನಾಡಿನ ಹಿರಿಯ ಶಿಕ್ಷಣ ತಜ್ಞರು, ಕೆಪಿಸಿಸಿ ಪದವೀಧರ ಘಟಕದ ರಾಜ್ಯಾಧ್ಯಕ್ಷರಾದ ಡಾ. ಆರ್. ಎಂ. ಕುಬೇರಪ್ಪನವರು ಉದ್ಘಾಟಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಮ್ಮೇಳನ ಸರ್ವಾಧ್ಯಕ್ಷರಾದ ನಾಡೋಜ ಡಾ. ಹೆಚ್.ಜಿ. ದಡ್ಡಿ, ಮಾಜಿ ಶಾಸಕ ಎಂ. ಕೆ. ಪಟ್ಟಣಶೆಟ್ಟಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವಾನಂದ್ ಶೆಲ್ಲಿಕೇರಿ, ಬದಾಮಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಫ್. ಹೊರಕೇರಿ, ಡಾ. ಹನುಮಂತಗೌಡ ಆರ್.ಕಲ್ಮನಿ, ಸೇರಿದಂತೆ ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಹಾಗೂ ಕನ್ನಡ ಅಭಿಮಾನಿಗಳು ಉಪಸ್ಥಿತರಿದ್ದರು.
Bagalakote : "ಬೆಳಗಾವಿ ವಿಭಾಗೀಯ ಸಾಂಸ್ಕೃತಿಕ ಸಮ್ಮೇಳನ : ಡಾ. ಆರ್.ಎಂ ಕುಬೇರಪ್ಪ ಉದ್ಘಾಟನೆ
Team KIRA
... menit baca
Dengarkan
Post a Comment