ಮುರಡಿ : ( 02_11_2023)
ಎಲ್ಲಿ ನೋಡಿದರೂ ನೈರ್ಮಲ್ಯ, ಮತ್ತೊಂದೆಡೆ ಮುಳ್ಳು ಕಂಟೆಗಳ ಆಗರ ಇದೆಲ್ಲ. ನಿಮಗೆ ನೋಡಲು ಸಿಗುವುದು ಯಲಬುರ್ಗಾ ತಾಲೂಕಿನ ಮುರಡಿ ಗ್ರಾಮದ ಎಸ್ ಸಿ ಓಣಿಯನ್ನ ಗ್ರಾಮ ಪಂಚಾಯತ್ ಸಿಬ್ಬಂದಿಗಳು, ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ವಠಾರದವರು ಹಲವು ಬಾರಿ ಗ್ರಾಮ ಪಂಚಾಯತ್ ಗೆ ಮೌಖಿಕವಾಗಿ ಮನವಿ ಮಾಡಿದರೂ, ಕ್ಯಾರೇ ಎನ್ನುತ್ತಿಲ್ಲ ಎಂದು ಗ್ರಾಮದ ರಾಮಪ್ಪ ಕಾರಭಾರಿ ಎಂಬುವವರು ಆರೋಪಿಸಿದ್ದಾರೆ. ಗ್ರಾಮದಲ್ಲಿ ಕೊಳಚೆ ನೀರು ರಸ್ತೆಯಲ್ಲೇ ನಿಲ್ಲುತ್ತದೆ. ಇದರಿಂದ ಅಕ್ಕಪಕ್ಕದ ಮನೆಯಲ್ಲಿನ ವೃದ್ಧರು, ಮಹಿಳೆಯರು ಮಕ್ಕಳಾದಿಯಾಗಿ ಎಲ್ಲರೂ ಆಸ್ಪತ್ರೆ ಸೇರುತ್ತಿದ್ದಾರೆ. ಡೆಂಗ್ಯೂ, ಮಲೇರಿಯಾ, ಟೈಫಾಯ್ಡ್ ಸೇರಿದಂತೆ ರೋಗಗಳು ಬೆಂಬಿಡದೇ ಕಾಡುತ್ತಿದೆ. ಮನೆಯಿಂದ ಹೊರ ಬರಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆಯಲ್ಲಿದ್ದರೂ, ಮೂಗು ಮುಚ್ಚಿ ಕೂರಬೇಕು. ಈ ಹಿಂದೆ ಹಲವು ಬಾರಿ ವಠಾರಾ ಜನರೇ ಹಣ ಕೊಟ್ಟು ಚರಂಡಿ ಸ್ವಚ್ಛತೆ ಮಾಡಿಸಿದ ಅದೆಷ್ಟೋ ಉದಾಹರಣೆಗಳಿವೆ ಎನ್ನುತ್ತಾರೆ ಗ್ರಾಮದ ಮಹಿಳೆ ಯಲ್ಲವ್ವ.
ಇನ್ನೊಂದೆಡೆ, ಗ್ರಾಮ ಪಂಚಾಯತ್ ವತಿಯಿಂದ ದನಕರುಗಳಿಗೆ ಕುಡಿಯಲು ನೀರಿನ ಸಂಗ್ರಹ ತೊಟ್ಟಿಯನ್ನ ಮಾಡಿದ್ದಾರೆ. ಅದು ಒಡೆದು ಸರಿ ಸುಮಾರು ಎರಡು ವರ್ಷಗಳಾಗಿವೆ. ಈ ಬಗ್ಗೆ ಸಹ ಯಾವುದೇ ಕ್ರಮ ಕೈಗೊಂಡಿಲ್ಲ. ಅದರ ಪಕ್ಕವೇ ಎನ್.ಜಿ.ಓ ಒಂದರ ನೇತೃತ್ವದಲ್ಲಿ ಮತ್ತೊಂದು ಸಂಗ್ರಹ ಡೋಣಿಯನ್ನ ಮಾಡಿದ್ದಾರೆ. ಆದ್ರೆ, ಅದು ಸಹ ದನಕರುಗಳಿಗೆ ಕುಡಿಯಲು ನೀರು ಎಟುಕುವುದಿಲ್ಲ. ಹೀಗೆ ಒಂದೆರಡಲ್ಲ, ಸಾಲು ಸಾಲು ಕರ್ತವ್ಯ ಲೋಪದ ಪ್ರಕರಣಗಳು ಕಂಡುಬಂದಿವೆ.
ಇನ್ನೂ, ಮೇಲಧಿಕಾರಿಗಳು ಬಂದಾಗ ಅವರ ಗಮನಕ್ಕೂ ತಂದಿದ್ದೇವೆ. ಮೇಲಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆಯೂ ತಿಳಿಸಿದರೂ, ಗ್ರಾಮ ಪಂಚಾಯತ್ ಅಧಿಕಾರಿಗಳು, ಸದಸ್ಯರು ಕ್ಯಾರೆ ಎನ್ನುತ್ತಿಲ್ಲ ಎಂದುಬು ಮತ್ತೊಂದು ಆರೋಪ. ಹೀಗೆ, ಮೇಲಧಿಕಾರಿಗಳು ಹೇಳಿದ ಮಾತಿಗೂ ಕವಡೆ ಕಾಸಿನ ಕಿಮ್ಮತ್ತು ಕೊಡದವರು ಗ್ರಾಮ ಪಂಚಾಯತಿಯಲ್ಲಿದ್ದಾರೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಮುಂಬರುವ ದಿನಗಳಲ್ಲಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ, ಕೊಪ್ಪಳ ಜಿಲ್ಲಾಧಿಕಾರಿಗಳಿಗೆ ಮತ್ತು ಸಿಇಓ ಅವರ ಗಮನಕ್ಕೆ ತರಲಾಗುವುದು ಎನ್ನುತ್ತಾರೆ ಗ್ರಾಮಸ್ಥರು.
ಗ್ರಾಮದ ರಾಮಪ್ಪ ಕಾರಭಾರಿ, ಯಲ್ಲವ್ವ ಕಾರಭಾರಿ, ಭೀಮಣ್ಣ ಚಾಕರಿ, ಪ್ರಕಾಶ್ ಬಸವಂತಪ್ಪ ಮಾರನಾಳ್, ಅಲಿಸಾಬ್ ಯಮನೂರಸಾಬ್ ದರಗದ್ ಸೇರಿದಂತೆ ವಠಾರದ ಜನತೆಗೆ ತಲೆನೋವಾಗಿದೆ. ಮನೆ ಕಟ್ಟಿಕೊಂಡು, ಹೊಲಮನಿ ಕೆಲಸ ಮಾಡಿ ಜೀವನ ಮಾಡುತ್ತೇವೆ. ಇದೆಲ್ಲವನ್ನ ಹೇಗೆ ಮಾಡೋದು ಎಂದು ಕಿರಾ ನ್ಯೂಸ್ ಕನ್ನಡಕ್ಕೆ ಮನವಿ ಮಾಡಿದಾಗ, ಅವರ ಮನವಿಗೆ ಕಿರಾ ನ್ಯೂಸ್ ಸ್ಪಂದಿಸಿದೆ. ಮುಂಬರುವ ದಿನಗಳಲ್ಲಿ ಮುರಡಿ ಗ್ರಾಮದ ಎಸ್.ಸಿ ವಠಾರ ಅಷ್ಟೇ ಅಲ್ಲ, ಜನರ ಸಮಸ್ಯೆಯನ್ನ ಬಗೆ ಹರಿಸುವ ಕಾರ್ಯ ಮಾಡಲಿದೆ ಕಿರಾ ನ್ಯೂಸ್ ಕನ್ನಡ.
ವರದಿ : ರಾಮಪ್ಪ ಕಾರಭಾರಿ, ಮುರಡಿ ಗ್ರಾಮ
Post a Comment