ಕರ್ನಾಟಕದಲ್ಲಿ ಕರ್ಯನಿರ್ವಹಿಸುವ ಬ್ಯಾಂಕಗಳಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ನೀಡಬೇಕೆಂದು ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ರಫೀಕ್ ತೋರಗಲ್ ಹೇಳಿದರು. ನವೆಂಬರ್ ೧ರಂದು ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದ ಅವರು, ಬ್ಯಾಂಕಗಳಲ್ಲಿ ಕಾರ್ಯನಿರ್ವಹಿಸುವವರು ಹೆಚ್ಚಾಗಿ ಅನ್ಯ ಭಾಷಿಕರಿದ್ದಾರೆ. ಹೀಗಾಗಿ, ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸಲು ಕನ್ನಡಿಗರಿಗೆ ಮೊದಲ ಆದ್ಯತೆ ನೀಡಬೇಕು. ಬ್ಯಾಂಕಗಳಲ್ಲಿ ಕನ್ನಡವನ್ನ ಆಡಳಿತ ಭಾಷೆಯಾಗಿ ಮಾಡಬೇಕು ಎಂದು ಕೇಂದ್ರ ಸರ್ಕಾರವನ್ನ ಒತ್ತಾಯಿಸಿದರು. ಅಲ್ಲದೇ, ಬ್ಯಾಂಕಗಳಲ್ಲಿ ಕಾರ್ಯನಿರ್ವಹಿಸಲು ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು. ಇದು ಬಹುದಿನಗಳ ಬೇಡಿಕೆಯಾಗಿದ್ದರೂ, ಈ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಕನ್ನಡ ಉಳಿದಿರುವುದು ಗ್ರಾಮೀಣ ಪ್ರದೇಶದ ಜನರಿಂದ ಎಂದು ಕನ್ನಡಾಭಿಮಾನ ಮೆರೆದರು.
ತಾಲೂಕಾಧ್ಯಕ್ಷ ಕಳಕಪ್ಪ ಪೋತಾ, ಧರ್ಮಗುರುಗಳಾದ ಹಜರತ್ ಸೈಯದ್ ನಿಜಾಮುದ್ದಿನ್ ಷಾ ಅಶ್ರಫಿ ಮಕಾನದಾರ್ ಸೇರಿದಂತೆ ಇನ್ನೂ ಅನೇಕರು ಮಾತನಾಡಿದರು.
ಧರ್ಮಗುರುಗಳಾದ ಹಜರತ್ ಸೈಯದ್ ನಿಜಾಮುದ್ದಿನ್ ಷಾ ಅಶ್ರಫಿ ಮಕಾನದಾರ್ ಟೆಕ್ಕೆದ್ ಬಾವಾ, ಗಜೇಂದ್ರಗಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಣ್ಣ ಶೆಟ್ಟರ್, ಅಂಬಾಸಾ ರಂಗ್ರೇಜ್, ಚನ್ನಬಸವ ವಾಲಿ, ಆಟೋ ಚಾಲಕ ಸಂಘದ ಅಧ್ಯಕ್ಷ ಶಂಕರ್ ರಾಯಬಾಗಿ, ಮಹಮ್ಮದಗೌಸ್ ಅಕ್ಕಿ, ಉಮೇಶ್ ಕಲಮಶೆಟ್ಟಿ, ರಾಘವೇಂದ್ರ ಹೂಗಾರ್, ಬಬ್ಲೂ ಮನಿಯಾರ್, ಕರಿಯಪ್ಪ ಮಾದರ್, ಬಸವರಾಜ್ ಪೂಜಾರ್, ರಾಜಾಬಕ್ಷಿ ಸರ್ಕಾವಸ್, ಖಾಸಿಮಸಾಬ್ ಮುಚ್ಚಾಲಿ, ಇಬ್ರಾಹಿಂ ಅಕ್ಕಿ ಸೇರಿದಂತೆ ಸಂಘಟನೆ ಸರ್ವ ಸದಸ್ಯರು, ಆಟೋ ಚಾಲಕರು ಮತ್ತು ಮಾಲೀಕರು ಸೇರಿದಂತೆ ಕನ್ನಡಾಭಿಮಾನಿಗಳು ಉಪಸ್ಥಿತರಿದ್ದರು.
Post a Comment