ಅಳಿವಿನಂಚಿನಲ್ಲಿರುವ ಶಾಲೆಗಳ ಉಳಿಯುವಿಕೆಗಾಗಿ ಶ್ರಮಿಸಬೇಕಿದೆ ಎಂದು ಮುಖಂಡರಾದ ಶಶಿಧರ್ ಹೂಗಾರ್ ಅಭಿಪ್ರಾಯ ಪಟ್ಟರು.
ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಭೈರಾಪೂರ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಮತ್ತು ಕನ್ನಡ ರಾಜ್ಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೆಲ ಕನ್ನಡ ಶಾಲೆಗಳು ಅಳಿವಿನ ಅಂಚಿನಲ್ಲಿವೆ. ಇಂತಹ ಶಾಲೆಗಳ ಉಳಿಯುವಿಕೆಗಾಗಿ ಶ್ರಮ ವಹಿಸಬೇಕಿದೆ. ಗ್ರಾಮೀಣ ಭಾಗದ ಜನರಿಂದ ಕನ್ನಡ ಇನ್ನೂ ಜೀವಂತವಾಗಿದೆ. ನಗರ ವಾಸಿಗಳಿಂದ ಕನ್ನಡ ಕಣ್ಮರೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇನ್ನೂ, ಮಹರ್ಷಿ ವಾಲ್ಮೀಕಿ ದಾರ್ಶನಿಕ ವ್ಯಕ್ತಿ, ಅಂತಹ ಮಹಾನ್ ನಾಯಕನ ಹಾದಿಯಲ್ಲಿ ನಾವು ಸಾಗಬೇಕಿದೆ ಎಂದು ಯುವಕರಿಗೆ ಕಿವಿ ಮಾತು ಹೇಳಿದರು.
ಮುತ್ತಣ್ಣ ತಳವಾರ್ ಸಮಾಜ ಸಂಘಟನೆ, ಮಹರ್ಷಿ ವಾಲ್ಮೀಕಿ ನಡೆದು ಬಂದ ದಾರಿ ವಿವರಿಸಿದರು. ಇದೇ ವೇಳೆ, ಬಾಲನಗೌಡ ಗೌಡರ್ ಸಹ ಮಾತನಾಡಿದರು.
ಭೈರಾಪೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶಶಿಧರ್ ಹೂಗಾರ್ ನೇತೃತ್ವ ವಹಿಸಿದ್ದರು. ಅದ್ದೂರಿ ಕಾರ್ಯಕ್ರಮವನ್ನ ಗ್ರಾಮಸ್ಥರೆಲ್ಲರೂ ಒಗ್ಗಟ್ಟಾಗಿ, ವಾಲ್ಮೀಕಿ ಜಯಂತಿ ಮತ್ತು ಕನ್ನಡ ರಾಜ್ಯೋತ್ಸವವನ್ನ ಅರ್ಥಪೂರ್ಣವಾಗಿ ಆಚರಿಸಿ, ಮಾದರಿಯಾದ್ರು.
ಕಾರ್ಯಕ್ರಮದಲ್ಲಿ ಮುತ್ತಣ್ಣ ತಳವಾರ್, ವೀರೇಶ್ ರಾಠೋಡ್, ಬಾಲನಗೌದ ಗೌಡರ್, ಕಳಕಪ್ಪ ಮಾಗಿ,ಹುಲ್ಲಪ್ಪ ಹೊಸಮನಿ, ಬೋಮ್ಮಪ್ಪ ಕಟಪೂರ, ಮುಗನೂರ, ಕಳಕಪ್ಪ ಹೊಸಮನಿ, ಮೆಣಸಗಿ,
ಶಿವಪ್ಪ ಮಾಗಿ,
ಉಮೇಶ್ ಹೊಸಮನಿ,
ಮಲ್ಲೇಶ್ ಮಾಗಿ ಸೇರಿದಂತೆ ಗ್ರಾಮಸ್ಥರೆಲ್ಲರೂ ಭಾಗವಹಿಸಿದ್ರು.
Post a Comment