"ಆರೋಗ್ಯವೇ ಭಾಗ್ಯ" ಆರೋಗ್ಯ ಎನ್ನುವುದು ಬಹಳ ಮುಖ್ಯ. ಮನುಷ್ಯ ಆಸ್ತಿ ಸಂಪಾದಿಸದಿದ್ದರೂ, ಆರೋಗ್ಯ ಕಾಪಾಡಿಕೊಂಡರೇ, ಅದುವೇ ಒಂದು ಬಲಾಡ್ಯ ಆಸ್ತಿ. ಮನುಷ್ಯ ಆರೋಗ್ಯ ರಕ್ಷಣೆಗೆ ವಿವಿಧ ಆಹಾರಗಳ ಸೇವನೆ ಮಾಡುತ್ತಾನೆ. ಆದ್ರೆ, ಗಜೇಂದ್ರಗಡದ ಡಾಬಾವೊಂದರಲ್ಲಿ ಮನುಷ್ಯನ ಆರೋಗ್ಯ ಹಾಳು ಮಾಡಲು ಹೊರಟಿದೆ. ಗಜೇಂದ್ರಗಡದ ಸುಖಸಾಗರ್ ಡಾಬಾದಲ್ಲಿ ವಿನಾಯಕ ಜರತಾರಿ ಮತ್ತು ಅವರ ಬೆಂಬಲಿಗಲು ಊಟಕ್ಕೆ ಹೋದಾಗ, ಅವರಿಗೆ ಬೇರೆಯವರು ಊಟ ಮಾಡಿ ಬಿಟ್ಟು ಹೋದ ಊಟವನ್ನ ನೀಡಿದ್ದಾರೆ. ಅಲ್ಲದೇ, ಅದು ಕಲಬೆರಕೆ ಮಾಡಿರುವ ಆಹಾರವನ್ನ ನೀಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಗಜೇಂದ್ರಗಡದ ಸುಖಸಾಗರ್ ಡಾಬಾದಲ್ಲಿ ನಡೆದ ಘಟನೆಯನ್ನ ಮಾಲೀಕರ ಗಮನಕ್ಕೆ ತರಲಾಗಿದೆ. ಆದ್ರೆ, ಮತ್ತೊಮ್ಮೆ ಇಂತಹ ಘಟನೆ ಮರುಕಳಿಸದಿರಲಿ, ಎಲ್ಲರ ಆರೋಗ್ಯವೂ ಅಷ್ಟೇ ಮುಖ್ಯ ಎನ್ನುತ್ತಿರುವ ವಿನಾಯಕ ಜರತಾರಿ, ಸದಾ ಸಮಾಜಸೇವೆ ಮಾಡುತ್ತಾ ಬಂದಿದ್ದಾರೆ. ಜನರ ಆರೋಗ್ಯದೊಂದಿಗೆ ಆಟವಾಡುತ್ತಿರುವ ಮಾಲೀಕರು ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ. ಇದರಿಂದ ಕೆಲಸಗಾರರು ಸಹ ಅದೇ ಪ್ರವೃತ್ತಿ ಅನುಸರಿಸಯತ್ತಿರುವುದು ಕಂಡು ಬಂದಿದೆ. ತಪ್ಪಿತಸ್ತರ ವಿರುದ್ಧ ಸುಕ್ತಕ್ರಮ ಕೈಗೊಳ್ಳಬೇಕು. ಮತ್ತು ಅವರ ಲೈಸನ್ಸ್ ರದ್ದು ಪಡಿಸಬೇಕೆಂದು ತಹಶೀಲ್ದಾರ್ ಕಿರಣಕುಮಾರ್ ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಿದರು.
ಯಾವುದೋ ಕಾರಣಕ್ಕೆ ಮನೆಯ ಹೊರಹೋಗಿ ಊಟ ಮಾಡುವ ಪ್ರಸಂಗ ಎಲ್ಲರಿಗೂ ಒದಗಿ ಬರುತ್ತದೆ. ಆದ್ರೆ, ಇದನ್ನೆ ಅವರು ತಮ್ಮ ಬೇಳೆಯನ್ನ ಬೇಯಿಸಿಕೊಳ್ಳುವ ಮತ್ತು ತಮ್ಮ ಆದಾಯ ಹೆಚ್ಚಿಸಿಕೊಳ್ಳುವುದನ್ನ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು. ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳಬೇಕು. ಗ್ರಾಹಕರೂ ಸಹ ಊಟಕ್ಕೆ ತೆರಳುದಾಗ ಆಹಾರವನ್ನ ಪರೀಕ್ಷಿಸಿಕೊಳ್ಳಿ. ನಿಮ್ಮ ಆರೋಗ್ಯದ ಮೇಲೆ ಪರೀಣಾಮ ಬೀರದಿರಲಿ...
Post a Comment