ಕ್ಷೇಮಾಭಿವೃದ್ಧಿ ಸಂಘದ ಪ್ರಾದೇಶಿಕ ನಿರ್ದೇಶಕರಾದ ಗಣೇಶ್ ಬಿ ಮಾತನಾಡಿ, ಸಮಸ್ಯೆಗಳ ಪರಿಹಾರದ ನೆಪದಲ್ಲಿ ಮದ್ಯಪಾನ:ಆಗೊಮ್ಮೆ ಈಗೊಮ್ಮೆ ಮದ್ಯಸೇವಿಸುತ್ತೇನೆ ಕೆಲಸದೊತ್ತಡ, ನಿದ್ರೆ, ಇನ್ನಿತರ ಸಮಸ್ಯೆಗಳು ದುಃಖದ ವಿಷಯಗಳನ್ನು ಎದುರಿಸಲು ಮದ್ಯಪಾನ ಸೇವನೆಗೆನ ಮುಂದಾಗುವುದು ಹಾಸ್ಯಾಸ್ಪದ ಸಂಗತಿ, ನಮ್ಮ ಆರೋಗ್ಯಕ್ಕೆ ಹಾನಿ ಮಾಡುವ ಯಾವುದೇ ಅಂಶಗಳು ಎಂದಿಗೂ ದೇಹದೊಳಗೆ ಸೇರಿಕೊಳ್ಳಲು ಬಿಡಬಾರದು, ಒಂದು ವೇಳೆ ಮದ್ಯಪಾನವೇ ಮೇಲುಗೈ ಸಾಧಿಸಿದಲ್ಲಿ ಇದಕ್ಕೆ ಯಾರೊಬ್ಬರ ಬಳಿಯೂ ಇದಕ್ಕೆ ಪರಿಹಾರ ಸಿಗುವುದಿಲ್ಲ ಎಂದರು.
ಮದ್ಯವ್ಯಸನಿಗಳಿರುವ ಸಾಕಷ್ಟು ಕುಟುಂಬಗಳು ಹೊತ್ತಿನ ಕೂಳಿಗೂ ಇಲ್ಲದಂತಾದ ಉದಾಹರಣೆಗಳು ಸಾಕಷ್ಟಿವೆ ಆಲ್ಕೋಹಾಲ್‍ನಲ್ಲಿರುವ ಅಪಾಯಕಾರಿ ಅಂಶಗಳು ಯಾವುದೇ ಸಂದರ್ಭದಲ್ಲಿ ವ್ಯಕ್ತಿಯ ಆರೋಗ್ಯ ಮತ್ತು ಮನಸ್ಥಿತಿ ಬದಲಾಯಿಸಬಹುದು ಹೀಗಾಗಿ ಯುವಜನತೆ ಮದ್ಯಪಾನ
ದಿಂದ ದೂರವಿರುವಂತೆ ಪ.ಪು ಶ್ರೀ ಜಗದ್ಗುರು ಶ್ರೀ ವಿಜಯ ಮಹಾಂತ ಮಹಾಸ್ವಾಮಿಗಳು ಕರೆ ನೀಡಿದರು.
ಆಲ್ಕೋಹಾಲ್ ಸೇವನೆಯಿಂದ ಅಧಿಕ ರಕ್ತದೊತ್ತಡ, ಹೃದ್ರೋಗ, ಪಾಶ್ರ್ವವಾಯು, ಪಿತ್ತಜನಕಾಂಗದ ಕಾಯಿಲೆ, ಬಾಯಿ, ಗಂಟಲು, ಅನ್ನನಾಳ, ಧ್ವನಿಪೆಟ್ಟಿಗೆ, ಯಕೃತ್ತು, ಕೊಲೋನ್, ಗುದನಾಳದ ಕ್ಯಾನ್ಸರ್ ಜೀರ್ಣಕಾರಿ ಸಮಸ್ಯೆ ಸೇರಿದಂತೆ ದೇಹದಲ್ಲಿ ದೀರ್ಘ ಕಾಲದ ಕಾಯಿಲೆ ಸೃಷ್ಟಿಸುವ ಮೂಲಕ ಆರೋಗ್ಯದ ಮೇಲೆ ಗಮನಾರ್ಹ ಅಪಾಯ ತಂದೊಡ್ಡಲಿದೆ ಎಂದು ಪೂಜ್ಯ ಶ್ರೀ ಹಜರತ್ ಸೈಯದ್ ನಿಜಸಮುದ್ದಿನ್ ಷಾ ಅಶ್ರಫಿ ಮಕಾನದಾರ ಟೆಕ್ಕೇದಬಾವಾನವರು ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ರೋಣ-ಗಜೇಂದ್ರಗಡ, ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ ಗಜೇಂದ್ರಗಡ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, 1761ನೇ ಮದ್ಯವರ್ಜನ ವ್ಯವಸ್ಥಾಪನಾ ಸಮಿತಿ, ಗಜೇಂದ್ರಗಡ ಜಿಲ್ಲಾ ಜನಜಾಗೃತಿ ವೇದಿಕೆ ಗದಗ, ಪುರಸಭೆ ಗಜೇಂದ್ರಗಡ, ಶ್ರೀ ಸೇವಾಲಾಲ ಸೇವಾ ಸಮಿತಿ ಗಜೇಂದ್ರಗಡ,, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಗಜೇಂದ್ರಗಡ, ಪ್ರಾಥಮಿಕ ಆರೋಗ್ಯ ಕೇಂದ್ರ ಗಜೇಂದ್ರಗಡ, ಆರಕ್ಷಕ ಠಾಣೆ ಗಜೇಂದ್ರಗಡ, ಪತ್ರಿಕಾ ಮಾಧ್ಯಮ ಬಳಗ ಗಜೇಂದ್ರಗಡ ಹಾಗೂ ನವಜೀವನ ಸಮಿತಿ, ವಿಪತ್ತು ನಿರ್ವಹಣಾ ಘಟಕ, ವಿವಿಧ ಸಂಘ ಸಂಸ್ಥೆಗಳ, ಸಂಯುಕ್ತ ಆಶ್ರಯದಲ್ಲಿ ಮದ್ಯವರ್ಜನ ಶಿಬಿರ ನಡೆಯಿತು.
Post a Comment