ಗಜೇಂದ್ರಗಡ : (Nov_30_2023)
ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ದೇವದಾಸಿ ಮಹಿಳೆಯರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಹಶಿಲ್ದಾರ್ ಮೂಲಕ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಜಿಲ್ಲಾ ಗೌರವಾಧ್ಯಕ್ಷ ಬಾಲು ರಾಠೋಡ್, ಸಹಾಯಧನ ನೀಡಬೇಕು. ದೇವದಾಸಿ ಮಹಿಳೆಯರಿಗೆ ಸರ್ಕಾರದಿಂದ ಸಾಲ ಸೌಲಭ್ಯ ಸಿಗಬೇಕು. ದೇವದಾಸಿ ಮಹಿಳೆಯರನ್ನ ಸರ್ಕಾರ ಕಡೆಗಣಿಸಿದೆ ಎಂದು ಆರೋಪಿಸಿದರು. ಗಣತಿ ಪಟ್ಟಿಯಲ್ಲಿ ಲನ ಲೋಪ_ದೋಷ ಸರಿ ಪಡಿಸಲು ಒತ್ತಾಯಿಸಿದರು. ದೇವದಾಸಿ ಮಹಿಳೆಯರ ಶ್ರೇಯೋಭಿವೃದ್ಧಿಗೆ ಶ್ರಮಿಸುವುದಾಗಿ ಬಾಲು ರಾಠೋಡ್ ಹೇಳಿದರು.
ಜಿಲ್ಲಾ ಗೌರವಾಧ್ಯಕ್ಷ ಬಾಲು ರಾಠೋಡ್, ತಾಲೂಕಾಧ್ಯಕ್ಷೆ ಹುಲಿಗೆಮ್ಮ ಮಾತಿನ, ಪ್ರಧಾನ ಕಾರ್ಯದರ್ಶಿ ಯಮನವ್ವ ದಿಂಡೂರ್, ಮುಖಂಡರಾದ ಮಲ್ಲವ್ವ ಕರಡಿ, ಕಿಟ್ಟವ್ವ ಪೂಜಾರ್, ರೇಣವ್ವ ಮಾದರ್, ಶಿವವ್ವ ಮಾದರ್, ಸುಂದಗಡವ್ವ ಮಾದರ್, ಯಮನವ್ವ ಮಾದರ್, ಮದರವ್ವ ಮಾದರ್, ಶಿವವ್ವ ಚಿಕ್ಕಾಡಿ, ಭೀಮವ್ವ ಬನಹಟ್ಟಿ, ಶಾಂತವ್ವ ಮಾದರ್ ಮುಂತಾದವರು ಭಾಗವಹಿಸಿದ್ದರು.
Post a Comment