೯ ತಿಂಗಳ ಮಗುವನ್ನ ಕೊಲೆ ಮಾಡಲಾಗಿದೆ ಎಂದು ಪುರ್ತಗೇರಿಯ ೨೦ ವರ್ಷದ ನಾಗರತ್ನ ಕಳಕೇಶ್ ಗೂಳಿ ಪೊಲೀಸ್ ಠಾಣಾ ಮೆಟ್ಟಿಲೇರಿದ್ದಾರೆ. ಮಂಗಳವಾರ ೯ ತಿಂಗಳ ಮಗುವಿಗೆ ಅನ್ನ ಹಾಲು ಊಟ ಮಾಡಿಸಿ, ಆಟವಾಡುತ್ತಿದ್ದ ಮಗುವನ್ನ ಅತ್ತೆಯ ಕೋಣೆಯಲ್ಲಿ ಬಿಟ್ಟಿದ್ದರು. ಹೊರಗೆ ಬಟ್ಟೆ ತೊಳೆಯುವಾಗ ಮಗುವಿನ ಬಾಯಲ್ಲಿ ಅಡಿಕೆ ಹೋಳು, ಮತ್ತು ಎಲೆಯ ತುಂಬನ್ನ ಹಾಕುತ್ತಿದ್ದಾಗ ರತ್ನವ್ವ ಮಗುವಿನ ಅಜ್ಜಿ ( ಸರೋಜಾ ) ಮಗುವಿಗೆ ತಿನಿಸಿದ್ದಾರೆ. ಇದನ್ನ ನೋಡಿದ ನಾಗರತ್ನ ಹೀಗೆ ಮಾಡಬೇಡಿ, ಮಗುವಿಗೆ ಏನಾದ್ರೂ ಆದ್ರೆ ಏನು ಮಾಡೋಣ ಅಂತ ಹೇಳಿ, ಆದ್ವಿಕ್ ಬಾಯಿಂದ ಅಡಿಕೆ, ಎಲೆಯ ತುಂಬನ್ನ ಹೊರ ತೆಗೆದಿದ್ದಾರೆ. ಬಳಿಕ ಅತ್ತೆ ( ಸರೋಜಾ ) ಸೋಸೆ ( ನಾಗತರತ್ನ ) ಅವರಿಗೆ ಹೊಲಕ್ಕೆ ಹೋಗಿ, ದನ ಕರುವಿಗೆ ಮೇವು ಮಾಡಿ ಹಾಕಿ, ನೀರು ಕುಡಿಸಿ ಬರುವಂತೆ ಸೂಚಿಸಿದ್ದಾರೆ. ಮಧ್ಯಾಹ್ನ ಮೂರು ಗಂಟೆಗೆ ಆಟವಾಡುತ್ತಿದ್ದ ಮಗುವನ್ನ ಅತ್ತೆ ಸರೋಜಾ ಬಳಿ ಬಿಟ್ಟು ಹೋಗಿದ್ದಾರೆ. ಮಧ್ಯಾಹ್ನ ೪ ಗಂಟೆಗೆ ಮಗು ಸಾವನ್ನಪ್ಪಿದೆ. ಇದಾದ ಬಳಿಕ ಸಾಕ್ಷಿಸಿಗದಿರಲಿ ಎಂದು ಪುರ್ತಗೇರಿಯ ತಮ್ಮ ತೋಟದ ಹೊಲದಲ್ಲಿ ಮಣ್ಣು ಮಾಡಿದ್ದಾರೆ ಎಂದು ಎಫ್.ಐ.ಆರ್ ನಲ್ಲಿ ದಾಖಲಿಸಲಾಗಿದೆ.
ಆಗಾಗ ಮನೆಯಲ್ಲಿ ಜಗಳವಾಡುತ್ತಿದ್ದರು ಎಂದು ಪುರ್ತಗೇರಿ ನಿವಾಸಿಗಳು ಮಾಹಿತಿ ನೀಡಿದ್ದಾರೆ. ಅಲ್ಲದೇ, ಮಗು ಸಾವನ್ನಪ್ಲಿದೆ ಮನೆ ಬಾ ಎಂದು ಹೊಲಕ್ಕೆ ಹೋಗಿದ್ದ ಸೋಸೆಗೆ ಅತ್ತೆಯೇ ಮಾಹಿತಿ ನೀಡಿದ್ದಾರೆ ಎಂದು ಸಾರ್ವಜನಿಕರಲ್ಲಿ ಚರ್ಚೆಯಾಗುತ್ತಿದೆ.
ಇನ್ನೂ, ಮರಣೋತ್ತರ ಪರೀಕ್ಷೆಗಾಗಿ ಬೆಳಗಾವಿಗೆ ಕಳುಹಿಸಲಾಗಿದ್ದು, ವರದಿ ಬರಲು ೧೦ ರಿಂದ ೧೫ ದಿನಗಳು ಆಗಲಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಅದೇನೇ ಇರಲಿ ಮನೆಯ ಜಗಳದಲ್ಲಿ ಮಗು ಬಲಿಯಾಗಿದೆಯೋ ಅಥವಾ ಮತ್ತಾವುದೋ ಕಾರಣಕ್ಕೆ ಇಂತಹ ಆರೋಪ ಮಾಡಲಾಗಿದೆಯೋ ಎಂಬುದು ಪೊಲೀಸ್ ತನಿಖೆ ಬಳಿಕವೇ ಸತ್ಯಾಸತ್ಯತೆ ಹೊರ ಬೀಳಲಿದೆ.
Post a Comment