-->
Bookmark

Gajendragad : ಭೀಕರ ರಸ್ತೆ ಅಪಘಾತ : ಎಂಗೇಜ್ಮೆಂಟ್ ಮುಗಿಸಿ ಬರುವಾಗ ಮಸಣ ಸೇರಿದರು

Gajendragad : ಭೀಕರ ರಸ್ತೆ ಅಪಘಾತ : ಸ್ಥಳದಲ್ಲೇ ಇಬ್ಬರ ಸಾವು 
ಎಂಗೇಜ್ಮೆಂಟ್ ಮುಗಿಸಿ ಬರುವಾಗ ಮಸಣ ಸೇರಿದರು 

ಗಜೇಂದ್ರಗಡ : (Nov_29_2023)
ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಗೋಗೇರಿ ಗ್ರಾಮದ ಬಳಿ ಭೀಕರ ಅಪಘಾತ ಸಂಭವಿಸಿದೆ. ಕೆ.ಎಸ್.ಆರ್.ಟಿ.ಸಿ ಬಸ್ ಮತ್ತು ಬೈಕ್ ಮುಖಾಮುಖಿ ಢಿಕ್ಕಿಯಾಗಿ, ಇಬ್ಬರು ಬೈಕ್ ಸವಾರರು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಮೃತರನ್ನ ದಾವಲಸಾಬ್ ಹುಸೇನಸಾಬ್ ಮ್ಯಾಗೇರಿ(೨೮), ಹಸನಸಾಬ್ ಹುಸೇನಸಾಬ್ ಖಾನಗೌಡರ್ (೨೫) ಎಂದು ಗುರುತಿಸಲಾಗಿದೆ.  ಕೊಪ್ಪಳ ಜಿ.ಕುಷ್ಟಗಿ ತಾಲೂಕಿನವರಾದ ಇವರು ಎಂಗೇಜ್ಮೆಂಟ್ ಗೆ ತೆರಳಿದ್ದರು. 
ಮೃತ ದಾವಲಸಾಬ್ ಹುಸೇನಸಾಬ್ ಮ್ಯಾಗೇರಿ ಅವರ ಸಹೋದರನ ಎಂಗೇಜ್ಮೆಂಟ್ ಮುಗಿಸಿ, ಮರಳಿ ವಾಪಸಾಗುವಾಗ ಈ ದುರ್ಘಟನೆ ನಡೆದಿದೆ. ಬಸ್ ಸಿಂಧನೂರಿನಿಂದ ಗಜೇಂದ್ರಗಡಕ್ಕೆ ಆಗಮಿಸುತ್ತಿತ್ತು. ಬೈಕ್ ಸವಾರರು ಸವಡಿಯಿಂದ ಗಜೇಂದ್ರಗಡ ಮಾರ್ಗವಾಗಿ ಕಲಾಲಬಂಡಿಗೆ ತೆರಳುತ್ತಿದ್ದರು. ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಬೈಕ್ ಸವಾರರು ಸ್ಥಳದಲ್ಲೆ ಸಾವನ್ನಪ್ಪಿದ ಘಟನೆಯಿಂದ ಜನತೆಯಲ್ಲಿ ಭೀತಿ ಆವರಿಸಿದೆ. ಬೈಕ್ ಅಥವಾ ಯಾವುದೇ ವಾಹನ ಚಲಿಸುವಾಗ ಎಚ್ಚರಿಕೆ ವಹಿಸಿ, ಇಲ್ಲದಿದ್ದಲ್ಲಿ ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಶಿಕ್ಷೆ ಅನುಭವಿಸುವಂತಾಗುತ್ತದೆ. 
Post a Comment

Post a Comment