ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ರಾಜೂರು ಗ್ರಾಮದಲ್ಲಿ ದೇವಕ್ಕ ಸಿದ್ದಪ್ಪ ಸುಣಗಾರ್, ಶರಣವ್ವ ಬಸಪ್ಪ ಕೇಶಾಪೂರ ಎಂಬುವವರು ವಾಸವಿದ್ದ ಗುಡಿಸಲಿಗೆ ಆಕಸ್ಮಿಕ ಬೆಂಕಿ ತಗುಲಿದೆ. ಗ್ರಾಮ ಆಡಳಿತಾಧಿಕಾರಿ, ಕೆ.ವೈ ಕುಷ್ಟಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ, ಮಾತನಾಡಿದ, ಕೆ.ವೈ ಕುಷ್ಟಗಿ, ಆಕಸ್ಮಿಕ ಬೆಂಕಿ ತಗುಲಿದೆ ಎಂದು ಮಾಹಿತಿ ನೀಡಿದರು. ಸಹೋದರಿಯರಿಬ್ಬರ ಕುಟುಂಬ, ಸಹೋದರ ಸಹ ಇಲ್ಲೆ ವಾಸವಾಗಿದ್ದರು. ಯಲ್ಲಮ್ಮ ದೇವರಿಗೆ ಹೋಗಲು ಬೆಳ್ಳಂ ಬೆಳಗ್ಗೆ ಪೂಜೆ ಸಹ ನೆರವೇರಿಸಿ, ಸಹೋದರ ಯಲ್ಲಮ್ಮ ದೇವಸ್ಥಾನಕ್ಕೆ ತೆರಳಿದ್ದಾರೆ. 30 ಸಾವಿರ ನಗದು ಜೊತೆಗೆ ಗುಡಿಸಲಿನಲ್ಲಿದ್ದ ಕಾಳು, ಕಡಿ, ಬ್ಯಾಂಕ್ ಪಾಸಬುಕ್, ಬಟ್ಟೆ, ಪಾತ್ರೆ, ಸೇರಿದಂತೆ ಮನೆಯಲ್ಲಿದ್ದ ವಸ್ತುಗಳೆಲ್ಲವೂ ಬೆಂಕಿಗಾಹುತಿಯಾಗಿವೆ.
ತಂದೆ, ತಾಯಿಯನ್ನ ಕಳೆದುಕೊಂಡು ಅನಾಥರಾಗಿದ್ವಿ. ಇಲ್ಲೆ ವವಾಸವಿದ್ದು, ನಾವು ಜೀವನ ಸಾಗಿಸುತ್ತಿದ್ದೇವೆ. ಒಬ್ಬರು ಮನೆ_ಮನೆಗೆ ತೆರಳಿ ಕೂಲಿ ಕೆಲಸ ಮಾಡುತ್ತಾರೆ. ಇನ್ನಿಬ್ಬರೂ ಸಹ ಕೂಲಿ ಕೆಲಸ ಮಾಡುತ್ತ, ಗುಡಿಸಲಿನಲ್ಲಿ ವಾಸವಾಗಿದ್ದರು. ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಆಕಸ್ಮಿಕ ಬೆಂಕಿ ತಗುಲಿದೆ. ಹೀಗಾಗಿ, ಯಾವುದೇ ಪ್ರಾಣಹಾನಿಯ ವರದಿಯಾಗಿಲ್ಲ. ಬಡವರ ಜೀವನವೇ ಈಗ ಕಷ್ಟದಲ್ಲಿದೆ. ಇವರಿಗೆ ಸಹಾಯದ ಅಗತ್ಯ ವಿದೆ.
ಗ್ರಾಮ ಪಂಚಾಯತಿ ಉಪಾಧ್ಯಕ್ಷ ಶರಣಪ್ಪ ಸಜ್ಜನ್, ಸದಸ್ಯ ಶೇಕಪ್ಪ ಅಂದಪ್ಪ ಮಳಗಿ, ಯಲ್ಲಪ್ಪ ತಳವಾರ್, ಸುರೇಶ್ ಪಾಟೀಲ್ ಸೇರಿದಂತೆ ಅನೇಕರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಸಂತೈಸಿದ್ದಾರೆ.
Post a Comment