-->
Bookmark

Gajendragad : ಕಾರ್ಮಿಕ ಮಕ್ಕಳಿಗೆ ಸರ್ಕಾರದಿಂದ ಅನ್ಯಾಯ - ಎಸ್.ಎಫ್.ಐ ಗಣೇಶ್ ರಾಠೋಡ್

Gajendragad : ಕಾರ್ಮಿಕ ಮಕ್ಕಳಿಗೆ ಸರ್ಕಾರದಿಂದ ಅನ್ಯಾಯ - ಎಸ್.ಎಫ್.ಐ ಗಣೇಶ್ ರಾಠೋಡ್ 

ಗಜೇಂದ್ರಗಡ : ( Nov22_2023)

ರಾಜ್ಯದಲ್ಲಿ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಕೊಡಬೇಕಾದ ಶೈಕ್ಷಣಿಕ ಸಹಾಯಧನವನ್ನು ಕಳೆದ 2 ಎರಡು ವರ್ಷದಿಂದ ಕೊಟ್ಟಿಲ್ಲ. ಈ ಮಧ್ಯೆ ರಾಜ್ಯ ಸರ್ಕಾರ ಸಹಾಯಧನ ಪರಿಷ್ಕರಣೆ ಹೆಸರಿನಲ್ಲಿ ಕಾರ್ಮಿಕರ ಮಕ್ಕಳಿಗೆ ನೀಡುತ್ತಿದ್ದ ಶೈಕ್ಷಣಿಕ ಸಹಾಯ ಧನವನ್ನು ಕಡಿತ ಮಾಡಿದೆ. ಸರ್ಕಾರದ ಈ ನೀತಿ ಖಂಡನೀಯ ಎಂದು ಕರೆಯುತ್ತಾರೆ ಎಸ್.ಎಫ್.ಐ ಮುಖಂಡ ಗಣೇಶ್ ಪಟ್ಟಣದ ಎಸ್.ಎಫ್.ಐ ಕಚೇರಿಯಲ್ಲಿ ಮಾತಮಾಡಿದ ಅವರು, ರಾಜ್ಯ ಸರ್ಕಾರದ ನಡೆಯನ್ನ ಖಂಡಿಸಿದರು.‌

ಸರ್ಕಾರಗಳು ಕಾರ್ಮಿಕರ ಪರವಾಗಿ, ಕಾರ್ಮಿಕ ಮಕ್ಕಳ ಪರವಾಗಿ ನೀತಿ ರೂಪಿಸಬೇಕು. ಆದ್ರೆ, ವಿಪರ್ಯಾಸವೆಂದರೆ ಸರ್ಕಾರ ಕಾರ್ಮಿಕ ಸೆಸ್ ಹಣ ಜಮಾ ಆಗಿರುವುದನ್ನು ಅವರ ಮಕ್ಕಳಿಗೆ ನೀಡಲು ಮೀನಾಮೇಷ ಎಣಿಸುತ್ತಿರುವುದು ಒಂದೆಡೆಯಾದ್ರೆ, ಮತ್ತೊಂದೆಡೆ, ಕಾರ್ಮಿಕ ಹೆಸರಿನಲ್ಲಿ ಜಮಾ ಆಗಬೇಕಿದ್ದ ಹಣವನ್ನು ಜಮಾ ಆಗದಂತೆ ಕಾನೂನು ತಿದ್ದುಪಡಿ ಮಾಡಿದೆ. ಕಾರ್ಮಿಕ ಕೋಡ್ ಮಾಡಿ ಅದರಲ್ಲಿ ಯಾವುದೇ ಕಟ್ಟಡ ಕಟ್ಟುವವರು ಕಾರ್ಮಿಕ ಹೆಸರಿನಲ್ಲಿ ಸೆಸ್ ಹಣ ಕಟ್ಟುವ ನಿಯಮ ಇತ್ತು. ಅದು 2.5 ಲಕ್ಷ ರೂ ಮೇಲೆ ಖರ್ಚು ಮಾಡಿ ಕಟ್ಟಡ ಕಟ್ಟಿದರೆ ಅದರ ಸೆಸ್ ಕಟ್ಟಬೇಕಿತ್ತು. ಆದರೆ ಕೇಂದ್ರ ಸರ್ಕಾರ ಕಾರ್ಮಿಕರ ಕೊಡ್ ನಲ್ಲಿ ತಿದ್ದುಪಡಿ ಮಾಡಿ 10 ಲಕ್ಷ ರೂ ಮೇಲ್ಪಟ್ಟ ಖರ್ಚು ಮಾಡಿ ಕಟ್ಟಡ ಕಟ್ಟಿದರೆ ಮಾತ್ರವೇ ಸೆಸ್ ಎನ್ನುವ ನಿಯಮ ಮಾಡಿದರ ಭಾಗವಾಗಿ ಇಂದು ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಹಣ ಇಲ್ಲದಂತಾಗಿದೆ.

ಕಾರ್ಮಿಕ ಮಕ್ಕಳಿಗೆ ಶೈಕ್ಷಣಿಕ ಧನ ಸಹಾಯ ನೀಡುವುದರಿಂದ ಅಲ್ಲಿನ ಹಣ ಖಾಲಿ ಆಗಿಲ್ಲ ಎಂಬ ಸಣ್ಣ ಜ್ಞಾನವು ಸರ್ಕಾರಕ್ಕೆ ಇಲ್ಲಾವಾಗಿದೆ. ಸರ್ಕಾರ ಕಾರ್ಮಿಕ ಮಕ್ಕಳಿಗೆ ನೀಡುವ ಶೈಕ್ಷಣಿಕ ಧನಸಹಾಯವನ್ನು ಪರಿಷ್ಕರಣೆಯ ಹೆಸರಿನಲ್ಲಿ ಕಡಿತ ಮಾಡದೇ, ತಕ್ಷಣ ಕಳೆದ ಎರಡು ವರ್ಷಗಳ ಶೈಕ್ಷಣಿಕ ಸಹಾಯಧನವನ್ನು ಬಿಡುಗಡೆ ಮಾಡಲು ಮತ್ತು ಕಾರ್ಮಿಕ ಕಲ್ಯಾಣ ಮಂಡಳಿಗೆ ಸ್ವಾತಂತ್ರ್ಯವಾಗಿ ನಿರ್ಧಾರ ತೆಗೆದುಕೊಂಡು ವಿದ್ಯಾರ್ಥಿಗಳ ಶೈಕ್ಷಣಿಕ ಸಹಾಯಧನ ನೀಡಲು ಆದೇಶ ನೀಡಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಷನ್‌ ಮೂಲಕ ಸರ್ಕಾರವನ್ನು ಒತ್ತಾಯಿಸಿದ್ದಾರೆ. 

ಈ ಸಂಧರ್ಭದಲ್ಲಿ, ಗಣೇಶ್ ರಾಠೋಡ್, ಚಂದ್ರು ರಾಠೋಡ್, ಪ್ರದೀಪ್ ಎಂ, ಶರಣು, ಮಹಾಂತೇಶ್ ಪೂಜಾರ್ ಉಪಸ್ಥಿತರಿದ್ದರು. 
Post a Comment

Post a Comment