ಗಜೇಂದ್ರಗಡ : (01_11_2023)
ಕನ್ನಡ ನಾಡು, ನುಡಿ ರಕ್ಷಣೆಗೆ ಕನ್ನಡಿಗರು ಸದಾ ಬದ್ದ ಎಂದು ಪುನೀತರಾಜಕುಮಾರ್ ಅಭಿಮಾನಿ ಸಂಘದ ತಾಲೂಕಾಧ್ಯಕ್ಷ ಭಾಷೆಸಾಬ್ ಕರ್ನಾಚಿ ಹೇಳಿದರು. ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದಲ್ಲಿ ಅಖಿಲ ಕರ್ನಾಟಕ ಡಾ.ರಾಜಕುಮಾರ್, ಡಾ. ಶಿವರಾಜಕುಮಾರ್, ರಾಜರತ್ನ ಡಾ. ಪುನೀತರಾಜಕುಮಾರ್, ಅಭಿಮಾನಿ ಸಂಘದಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದ ಅವರು, ನಾವೆಲ್ಲರೂ ಕನ್ನಡಾಂಬೆಯ ಮಕ್ಕಳು. ಕನ್ನಡ ನಮ್ಮ ಉಸಿರು ಎಂದು ಹೇಳುದರು. ಕನ್ನಡ ನಾಡು, ನುಡಿ, ನೆಲ, ಜಲಕ್ಕೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಇದ್ದರೂ, ರಕ್ಷಣೆಗೆ ನಾವು ಸದಾ ಬದ್ದ ಎಂದು ಹೇಳಿದರು.
Post a Comment