-->
Bookmark

Gajendragad : ಹಾಡುಗಾರರಿಗೆ ಅವಕಾಶ ಕಲ್ಪಿಸುವ ಉದ್ದೇಶ _ ಅಭಿವೃದ್ಧಿ ವೇದಿಕೆಯಿಂದ ಗಾನ ಕೋಗಿಲೆ ಸೀಜನ್ - 2 ಕಾರ್ಯಕ್ರಮ

Gajendragad : ಹಾಡುಗಾರರಿಗೆ ಅವಕಾಶ ಕಲ್ಪಿಸುವ ಉದ್ದೇಶ _ ಅಭಿವೃದ್ಧಿ ವೇದಿಕೆಯಿಂದ ಗಾನ ಕೋಗಿಲೆ ಸೀಜನ್ - 2 ಕಾರ್ಯಕ್ರಮ 
ಗಜೇಂದ್ರಗಡ : (Nov_09_2023)

ಗ್ರಾಮೀಣ ಅಥವಾ ಪಟ್ಟಣ, ಅಲ್ಲದೇ ನಗರದಲ್ಲಿರುವ ಹಾಡುಗಾರರಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಕರ್ನಾಟಕ ಅಭಿವೃದ್ಧಿ ವೇದಿಕೆ ಗಾನ ಕೋಗಿಲೆ ಕಾರ್ಯಕ್ರಮ ಹಮ್ಮಿಕೊಂಡಿದೆ. 
ಮೊದಲ ಆವೃತ್ತಿ ಯಶಸ್ವು ಕಂಡು ರಾಜ್ಯಾದ್ಯಂತ ಹಲವಾರು ಪ್ರತಿಭೆಗಳನ್ನ ಹೊರತಂದ ಕೀರ್ತಿ ಕರ್ನಾಟಕ ಅಭಿವೃದ್ಧಿ ವೇದಿಕೆಯ ಅಧ್ಯಕ್ಷ ವಿನಾಯಕ ಜರತಾರಿ ಅವರಿಗೆ ಸಲ್ಲುತ್ತದೆ. ಇದರ ಜೊತೆಗೆ ರಾಜ್ಯಾದ್ಯಂತ ಇರುವ ಪ್ರತಿಭಾವಂತ ಗಾಯಕರು, ಹಾಡುಗಾರರು,  ನಮಗೂ ವೇದಿಕೆ ಕಲ್ಪಿಸಿ ಎಂದು ಮನವಿ ಮಾಡಿದ್ದರಿಂದ ಈಗ ಮತ್ತೊಂದು ಕಾರ್ಯಕ್ರಮವನ್ನ ಹಮ್ಮಿಕೊಂಡಿದ್ದಾರೆ. ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಯನ್ನ ಗಜೇಂದ್ರಗಡ ಗ್ರಾಮ ದೇವತೆ ಹಿರೇದುರ್ಗಾದೇವಿ ದೇವಸ್ಥಾನ 
ಆವರಣದಲ್ಲಿ ಮಾಡಲಾಯ್ತು. ದೇವಿಯ ಆಶೀರ್ವಾದ ನಮಗೆ ಸದಾ ಬೇಕು. ದೇವರ ಆರಾಧನೆಯಿಂದಲೇ ನಮಗೆ ಇಷ್ಟೆಲ್ಲ ಸಾಮಾಜಿಕ ಕಾರ್ಯ ಮಾಡಲು ಅನುಕೂಲ ಎಂದು ವಿನಾಯಕ ಜರತಾರಿ ಹೇಳುದರು. ಗಾನ ಕೋಗಿಲೆ ಸೀಜನ್ 2 ಕಾರ್ಯಕ್ರಮ ಇನ್ನಷ್ಟು ಯಶಸ್ಸು ಕಾಣಲಿ ಎಂದು ಹಾರೈಸಿದ್ದಾರೆ ಅಭಿಮಾನಿಗಳು... ಈ ಕಾರ್ಯಕ್ರಮದ ಆಡಿಶನ್ ನವೆಂಬರ್ 10 ರಂದು ಗಜೇಂದ್ರಗಡ ಪಟ್ಟಣದ ಯಾದವ ಕೃಷ್ಣ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು  ಕರ್ನಾಟಕ ಅಭಿವೃದ್ಧಿ ವೇದಿಕೆ ಸಂಸ್ಥಾಪಕರಾದ ವಿನಾಯಕ ಜರತಾರಿ ಮತ್ತು ಕಾರ್ಯಕ್ರಮ ಆಯೋಜಕರಾದ  ಕಿರಣ್ ನಿಡಗುಂದಿ ಕಿರಾ ನ್ಯೂಸ್ ಕನ್ನಡಕ್ಕೆ ಮಾಹಿತಿ ನೀಡಿದ್ದಾರೆ.

ವರದಿ : ಕಿರಣ್ ನಿಡಗುಂದಿ 
Post a Comment

Post a Comment