-->
Bookmark

ಗದಗ : ಡಿಸಿಎಂ ಡಿಕೆಶಿಗೆ ಅಭಿಮಾನಿಗಳಿಂದ ಭವ್ಯ ಸ್ವಾಗತ

ಗದಗ : ಡಿಸಿಎಂ ಡಿಕೆಶಿಗೆ ಅಭಿಮಾನಿಗಳಿಂದ ಭವ್ಯ ಸ್ವಾಗತ 
ಗದಗ : (03_11_2023)
ನವೆಂಬರ್ 3 ರಂದು ಕನ್ನಡ ರಾಜ್ಯೋತ್ಸವ 50 ವರ್ಷಗಳ ಸಂಭ್ರಮ ಕಾರ್ಯಕ್ರಮವನ್ನ ಗದಗ ನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಆಗಮಿಸಿದಾಗ ಭವ್ಯ ಸ್ವಾಗತ ದೊರೆಯಿತು. ಡಿ.ಕೆ ಶಿವಕುಮಾರ್ ಅಭಿಮಾನಿ ಸಂಘದಿಂದ ಹೂವಿನ ಹಾರಹಾಕಿ ಸ್ವಾಗತಿಸಲಾಯ್ತು. ಈ ವೇಳೆ ಜಿಲ್ಲಾಧ್ಯಕ್ಷ ಬಸವರಾಜ್ ಚನ್ನಿ, ಸಿದ್ದು ಗೋಂಗಡಶೆಟ್ಟಿಮಠ, ಅಂದಪ್ಪ ರಾಥೋಡ್, ಗಿರೀಶ್ ರಾಠೋಡ್, ಪ್ರಕಾಶ್ ರಾಠೋಡ್, ರಾಜಶೇಖರ್ ಹಿರೇಮಠ, ರಾಜು ಕಟ್ಟಿ, ಹಾಗೂ ಅಭಿಮಾನಿ ಸಂಘದ ಸದಸ್ಯರು  ಉಪಸ್ಥಿತರಿದ್ದರು.
50ರ ಸಂಭ್ರಮಕ್ಕೆ ಗದಗ ನಗರ ಮಧುವಣಗಿತ್ತಿಯಂತೆ ಶೃಂಗಾರ ಗೊಂಡಿದ್ದು, ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳೆಲ್ಲರೂ  ಈ ಅದ್ದೂರಿ ಕಾರ್ಯಕ್ರಮಕ್ಕೆ ಸಾಕ್ಷಿಯಾಗದ್ರು..
Post a Comment

Post a Comment