ಬೆಂಗಳೂರ :(Nov_18_2023)
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ಸಹಯೋಗದಲ್ಲಿ ಮಲಗೊಂಡ ಫಿಲಂ ಪ್ರೊಡಕ್ಷನ್ ಬ್ಯಾನರಡಿಯಲ್ಲಿ ನಿರ್ಮಾಣವಾಗುತ್ತಿರುವ ‘ತುಷಾರ’ ಚಲನಚಿತ್ರದ. ‘ನಾ ನಿನ್ನ ಕಾಯೋ ಕಾವಲುಗಾರ' ಎಂಬ ಹಾಡು ಇದೀಗ ಬಿಡುಗಡೆಗೊಂಡಿದೆ.
ಪವನಕುಮಾರ ಬೂದಿಹಾಳ ಸಾಹಿತ್ಯ ಬರೆದಿದ್ದು, ಮಂಜು ಕವಿ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಹಾಡಿಗೆ ಹೊಸ ಪ್ರತಿಭೆ ಆರ್ ಜೆ ನವೀನ್ ಧ್ವನಿಯಾಗಿದ್ದಾರೆ. ಈ ಹಾಡನ್ನು ಚಾರ್ವಿ ಮ್ಯೂಜಿಕ್ ಯೂಟ್ಯೂಬ್ ಚಾನೆಲ್ ದಲ್ಲಿ ಬಿಡುಗಡೆ ಮಾಡಿದೆ. ಈ ಸಂದರ್ಭದಲ್ಲಿ ತುಷಾರ್ ಚಿತ್ರದ ನಟ ನಿರ್ದೇಶಕ ವಿಶ್ವಪ್ರಕಾಶ ಟಿ ಮಲಗೊಂಡ ಮಾತನಾಡಿ 'ಈಗಾಗಲೇ ತುಷಾರ್ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಬಿರುಸಿನಿಂದ ಸಾಗಿದೆ. ತುಂಬಾ ಕನಸಿಟ್ಟುಕೊಂಡು ಮಾಡಿರುವ ಈ ಚಲನಚಿತ್ರದ ಹಾಡು ಇದೀಗ ಬಿಡುಗಡೆ ಮಾಡಿದ್ದೇವೆ. ಈ ಹಾಡಿನ ಚಿತ್ರೀಕರಣ ಉತ್ತರ ಕರ್ನಾಟಕ ಹಾಗೂ ಬೆಂಗಳೂರಿನ ಸುತ್ತಮುತ್ತ ನಡೆಸಲಾಗಿದೆ ಎಂದರು.
' ತುಷಾರ್' ಸಿನಿಮಾಕ್ಕೆ ಯುವ ನಟ ವಿಶ್ವಪ್ರಕಾಶ ಮಲಗೊಂಡ ನಟನೆಯ ಜೊತೆಗೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಮಂಜುಕವಿ ಸಂಗೀತ, ಸಾಹಿತ್ಯ, ಸಂಭಾಷಣೆ, ಪವನ್ ಕುಮಾರ್ ಬೂದಿಹಾಳ, ರವಿ ಕುಂಟೋಜಿ ಛಾಯಾಗ್ರಹಣ, ಚಂದು ಅವರ ಸಂಕಲನ, ಸಹ ನಿರ್ದೇಶಕರಾಗಿ ಸುಧಾ ಅಣ್ಣಾಶೇಠ, ಉಮೇಶ್ ಕೆ ಎನ್ ಅವರ ಪಬ್ಲಿಸಿಟಿ ಡಿಸೈನ್, ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ, ಹರೀಶ್ ಅರಸು. ಪೋಸ್ಟರ್ ಡಿಸೈನ್ ವಿಶ್ವ ಬಿರಾದಾರ, ಪ್ರಸಾದ್ ತೋಟದ, ತಂಡದಲ್ಲಿ ಪೃಥ್ವಿರಾಜ್ ನಾಯಕ, ಚಂದ್ರಕಾಂತ ಬೂದಿಹಾಳ, ಶ್ರೇಯಶ್ ದೇಶಪಾಂಡೆ ಮೊದಲಾದವರಿದ್ದಾರೆ.
ವರದಿ:
ಡಾ.ಪ್ರಭು ಗಂಜಿಹಾಳ
ಮೊ: ೯೪೪೮೭೭೫೩೪೬
Post a Comment