-->
Bookmark

Naregal : ವಿದ್ಯುತ್ ಕಣ್ಣಾಮುಚ್ಚಾಲೆ _ ರೈತರ ಪ್ರತಿಭಟನೆ

Naregal : 
ವಿದ್ಯುತ್ ಕಣ್ಣಾಮುಚ್ಚಾಲೆ _ ರೈತರ ಪ್ರತಿಭಟನೆ

Naregal : ( Oct_09_2023)

ಗಜೇಂದ್ರಗಡ ತಾಲೂಕಿನ‌ ನರೇಗಲನ ಅಬ್ಬಿಗೇರಿ, ಯರಬೇಲೇರಿ, ನಾಗರಾಳ, ಕುರುಡಗಿ, ಕೊಚಲಾಪುರ ಮತ್ತು ನರೇಗಲ್ ಗ್ರಾಮಗಳ ರೈತರಿಗೆ ಕರೆಂಟ್ ಶಾಕ್ ಕೊಟ್ಟಿದ್ದಾರೆ. ಬಡ ರೈತರು ಸಾಲ ಸೋಲ ಮಾಡಿ, ಇರುವ ಅಲ್ಪಸ್ವಲ್ಪ ಜಮೀನಿನಲ್ಲಿ ಬೆಳೆಯನ್ನ ಬೆಳೆದಿದ್ದಾರೆ. ಮಳೆ ಕೊರತೆಯಾದ್ದರಿಂದ ಕೊಳವೆ ಬಾವಿಗೆ ರೈತರು ಡಿಪೆಂಡ್ ಆಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕರೆಂಟ್ ಸರಿಯಾದ ಸಮಯಕ್ಕೆ ಕೊಡುತ್ತಿಲ್ಲ ಎಂದು ಆರೋಪಿಸಿ ರೈತರು ನರೇಗಲ್ ನ 110 ಕೆವೊ ಗ್ರಿಡ್ ಎದುರು ಪ್ರತಿಭಟನೆ ನಡೆಸಿದರು. 
ಕೆಲದಿನಗಳ ಹಿಂದೆ ಸರಿಯಾಗಿ ಕೊಡುತ್ತಿದ್ದ ಕರೆಂಟ್ ಈಗ ಕಣ್ಣಾಮುಚ್ಚಾಲೆ ಆರಂಭವಾಗಿದೆ. ಸರಿಯಾಗಿ ವಿದ್ಯುತ್ ನೀಡುವ ವರೆಗೂ , ಧರಣಿ ಸತ್ಯಾಗ್ರಹ ನಡೆಸುವುದಾಗಿ ರೈತರು ಆಕ್ರೋಶ ವ್ಯಕ್ತಪಡಿಸಿದರು‌.

ಇತ್ತ, ಗಜೇಂದ್ರಗಡ ತಾಲೂಕಿನಾದ್ಯಂತ ಸಹ ಕರೆಂಟ್ ಸರಿಯಾಗಿ ಕೊಡದೇ ಇದ್ದುದರಿಂದ ರೈತರಿಗೆ ತೊಂದರೆ ಯಾಗುತ್ತಿದೆ. ಕಾಲಕಾಲೇಶ್ವರ ವ್ಯಾಪ್ತಿ ಬಹಳಷ್ಟು ಜನರು ಹೊಲಗಳಲ್ಲೆ‌ ವಾಸವಾಗಿದ್ದಾರೆ. ರಾತ್ರಿ ಹೊತ್ತು ಸರಿಯಾಗಿ ಕರೆಂಟ್ ಇಲ್ಲದೇ, ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿಂದೆ, ಕಾಂಗ್ರೆಸ್ ಮುಖಂಡ  ಶಶಿಧರ ಹೂಗಾರ ಅವರು, ಕರೆಂಟ್ ಇಲ್ಲದ ಕಾರಣ, ರೈತರಿಗೆ ಹಾವುಗಳ ಕಾಟ ಹೆಚ್ಚಾಗಿದೆ ಎಂದು ಸೋಷಿಯಲ್ ಮಿಡಿಯಾದಲ್ಲಿ ಹಾವು ಹಿಡೊದ ಚಿತ್ರವನ್ನು ಹಂಚಿಕೊಂಡಿದ್ದರು. 

ಇದಕ್ಕೂ ಹಿಂದೆ, ಚುನಾವಣಾ ಪೂರ್ವದಲ್ಲಿ ಗಜೇಂದ್ರಗಡದಲ್ಲಿ ಉಣಚಗೇರಿ ರೈತರಿಗೆ ನಿರಂತರ ವಿದ್ಯುತ್ ನೀಡುತ್ತಿಲ್ಲ ಎಂದು ರೈತರೊಂದಿಗೆ ಕಾಂಗ್ರೆಸ್ ಪ್ರತಿಭಟನೆ ನಡೆಸಿತ್ತು. ಆದರೇ, ಈಗ ಒಂದು ಗ್ರಾಮವಲ್ಲ, ತಾಲೂಕು ಅಷ್ಟೇ ಅಲ್ಲದೇ, ಜಿಲ್ಲೆಯಲ್ಲಿ ಕರೆಂಟ್ ಇಲ್ಲದೇ, ಬಡ ರೈತ ಕಂಗಾಲಾಗಿದ್ದಾನೆ. ಪರಿಸ್ಥಿತಿ ಹೀಗಿರುವಾಗ ರೈತರ ನೆರವಿಗೆ ಇದುವರೆಗೂ ಯಾರು ಬರದಿರುವುದು ವಿಪರ್ಯಾಸ... 

ವರದಿ : ಕೃಷ್ಣ ರಾಠೋಡ್, ಸಂಪಾದಕರು, ಕಿರಾ ನ್ಯೂಸ್ ಕನ್ನಡ.
Post a Comment

Post a Comment