ಕಾರವಾರ : ( Oct_01_10_2023)
"ಸ್ವಚ್ಛತಾಹಿ ಸೇವಾ" ಅಭಿಯಾನ ಹಿನ್ನೆಲೆ ಕಾರವಾರದ ರವೀಂದ್ರನಾಥ ಕಡಲ ಕಿನಾರೆಯಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು. ಸ್ವಚ್ಛತಾ ಕಾರ್ಯದಲ್ಲಿ ಗಜೇಂದ್ರಗಡ ಮೂಲದ ಕಡಲ ಜೀವ ಶಾಸ್ತ್ರ ವಿಭಾಗದ ಮುಖ್ಯಸ್ಥ, ವಿಜ್ಞಾನಿ, ಡಾ. ಜಗನ್ನಾಥ್ ರಾಠೋಡ್ ಭಾವಗವಹಿಸಿದ್ದರು. ಈ ವೇಳೆ, ಮಾತನಾಡಿದ ಅವರು, ನಮ್ಮ ಸುತ್ತಮುತ್ತಲ ಪರಿಸರ ಶುಚಿಯಾಗಿಡಬೇಕು. ನಮ್ಮ ಮನೆಯಷ್ಟೆ ಕಾಳಜಿ ಪರಿಸರಕ್ಕೂ ವಹಿಸಬೇಕು. ಸಕಲ ಜೀವ ಕುಲಕ್ಕೂ ಸಂಚಕಾರಕ್ಕೆ ಮಾನವನೇ ಕಾರಣ. ಸ್ವಚ್ಛತೆಯಿಂದ ಪರಿಸರ ರಕ್ಷಣೆಯೂ ಆಗಲಿದೆ ಎಂದು ಅಭಿಪ್ರಾಯ ಪಟ್ಟರು. ಅಲ್ಲದೇ, ಈ ಸ್ವಚ್ಛತಾ ಕಾರ್ಯ ಕೇವಲ ಒಂದು ದಿನಕ್ಕೆ ಸೀಮಿತವಾಗದೇ, ದಿನಂಪ್ರತಿ ನಡೆಯಬೇಕು. ಅಂದಾಗ ಮಾತ್ರ ಇಂತಹ ಸ್ವಚ್ಛತಾ ಯೋಜನೆಗಳು ಯಶಸ್ವಿಯಾಗಲು ಸಾಧ್ಯ ಎಂದು ಹೇಳಿದರು.
ಕಡಲ ಜೀವಶಾಸ್ತ್ರ ವಿಭಾಗದ ಸಿಬ್ಬಂದಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು, ಭಾಗವಹಿಸಿದ್ದರು. ಜಿಲ್ಲಾಡಳಿತವೂ ಸಾತ್ ನೀಡಿದ್ದು, ಇಂಡಿಯನ್ ಕೋಸ್ಟ್ ಗಾರ್ಡ್, ಕರಾವಳಿ ಕಾವಲು ಪಡೆ ಹಾಗೂ ಅರಣ್ಯ ಇಲಾಖೆ ಸಹಯೋದಲ್ಲಿ ಸ್ವಚ್ಛತಾ ಹಿ ಸೇವಾ ಅಭಿಯಾನ ನಡೆಯಿತು.
Post a Comment