-->
Bookmark

Gajendragad : ತಪ್ಪಿದ ಭಾರೀ ಅನಾಹುತ _ ಡೀಸೆಲ್‌ ಕದ್ದೊಯ್ದ ಸಾರ್ವಜನಿಕರು

Gajendragad : ತಪ್ಪಿದ ಭಾರೀ ಅನಾಹುತ _ ಡೀಸೆಲ್‌ ಕದ್ದೊಯ್ದ ಸಾರ್ವಜನಿಕರು 
ಗಜೇಂದ್ರಗಡ : ( Oct_05_2023)

ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದಲ್ಲಿ ಭಾರೀ ಅನಾಹುತ ತಪ್ಪಿದೆ. ಹುಬ್ಬಳ್ಳಿಯಿಂದ ಕುಷ್ಟಗಿಗೆ ತೆರಳುತ್ತಿದ್ದ ಡೀಸೆಲ್ ತುಂಬಿದ ವಾಹನ ಪಲ್ಟಿಯಾಗಿದೆ. ಚಾಲಕನ ನಿಯಂತ್ರಣ ತಪ್ಪಿ ವಾಹನ ರಸ್ತೆಪಕ್ಕ ಬಿದ್ದಿದೆ. ಬುಧವಾರ ಸಂಜೆ ಈ ಘಟನೆ ನಡೆದಿದ್ದು, ಡೀಸೆಲ್‌ ತುಂಬಿದ ಟ್ಯಾಂಕರ್ ಅನ್ನ ಮತ್ತೆ ಸಹಕ ಸ್ಥಿತಿಗೆ ತರಲು ಮೂರು ಜೆಸಿಬಿಗಳನ್ನ ಬಳಸಲಾಗಿದೆ. ಡೀಸೆಲ್‌ ಸಹ ಸೋರಿಕೆಯಾಗಿದ್ದು, ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ. ಘಟನೆ‌ ಸಂಭಂಧ ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗಾಡಿಗೆ ಇನ್ಸೂರೆನ್ಸ್ ಇದೆ ಎನ್ನಲಾಗಿದೆ. ಲಕ್ಷಾಂತರ ಮೌಲ್ಯದ ಡೀಸೆಲ್‌ ಅನ್ನು ಸ್ಥಳೀಯರು ಕದ್ದೊಯ್ದಿದ್ದಾರೆ. ಕೆಲವರು ಬಕೇಟ್ ನಲ್ಲಿ, ಮತ್ತೆ ಕೆಲವರು ಕ್ಯಾನ್ ನಲ್ಲಿ ಡೀಸೆಲ್‌ ತುಂಬಿಕೊಂಡು ಹೋಗಿದ್ದಾರೆ ಎಂದು ಪ್ರತ್ಯಕ್ಷ ದರ್ಶಿಸಗಳು ಹೇಳಿದ್ದಾರೆ. ಅಕ್ಕಪಕ್ಕದ ಮನೆಯವರು ಸಹ ಡೀಸೆಲ್‌ ಓಯ್ದಿದ್ದಾರೆ.. 
Post a Comment

Post a Comment