ಶ್ರೀ ತುಳಜಾ ಭವಾನಿ ಶಿಕ್ಷಣ ಸಂಸ್ಥೆಯಲ್ಲಿ "ಕನ್ನಡ ರಾಜ್ಯೋತ್ಸವ"
ಗಜೇಂದ್ರಗಡ : ( 01_11_2023)
ಶ್ರೀ ತುಳಜಾ ಭವಾನಿ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವವನ್ನ ಅದ್ದೂರಿಯಾಗಿ ಆಚರಿಸಲಾಯ್ತು. ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದಲ್ಲಿ ಬಡ ಮಕ್ಕಳಿಗಾಗಿ ಶಾಲೆ ತೆರಯಲಾಗಿದ್ದು, ರೈತ ಮಕ್ಕಳು ಹೆಚ್ಚಾಗಿ ಬರುವ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವದ ಬಗ್ಗೆ ಪುಟಾಣಿ ಮಕ್ಕಳಿಗೂ ತಿಳಿಸಲಾಯ್ತು. ಕನ್ನಡ ಎಂವುದು ಬರಿ ಭಾಷೆಯಲ್ಲ ಅದೊಂದು ಶಕ್ತಿ. ಕನ್ನಡ ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಶಾಲಾ ಆಡಳಿತ ಮಂಡಳಿ ನಿರ್ದೇಶಕರಾದ ಲೋಕಪ್ಪ ರಾಠೋಡ್ ಹೇಳಿದರು. ಕನ್ನಡ ಉಳಿದಿರುವುದೇ, ಕನ್ನಡ ಶಾಲೆಗಳಿಂದ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಅಲ್ಲದೇ, ಇತರೆ ಭಾಷೆಯನ್ನು ಕಲಿಯುವುದು ತಪ್ಪಲ್ಲ. ಆದ್ರೆ, ಕನ್ನಡಕ್ಕೆ ಮೊದಲ ಆದ್ಯತೆ ನೀಡಿ ಎಂದರು.
ಇನ್ನೂ, ಆಡಳಿತ ಮಂಡಳಿ ಸದಸ್ಯೆ ಸರಸ್ವತಿ ರಾಠೋಡ್ ಮಾತನಾಡಿ, ಶಾಲಾ ಕಾಲೇಜಿನಲ್ಲಿ ರಾಜ್ಯೋತ್ಸವ ಆಚರಿಸುವುದರಿಂದ ಮುಂದಿನ ಜನರೇಷನ್ ಗೂ ಕನ್ನಡ ಬಗ್ಗೆ ಜಾಗ್ರತಿ ಇರಲಿ ಎಂದು ತಿಳಿ ಹೇಳಿದ್ರು.
ಇತ್ತ, ಶಾಲಾ ಮುಖ್ಯೋಪಾಧ್ಯಾಯರಾದ ರೇಖಾ ಮಾನೆ ಮಾತನಾಡಿ, ಮುಂಬರುವ ದಿನಗಳಲ್ಲಿ ಇನ್ನೂ, ಹೆಚ್ಚಿನ ತರಗತಿಗಳು ಪ್ರಾರಂಭವಾಗಲಿದೆ ಎಂದು ಕನ್ನಡ ರಾಜ್ಯೋತ್ಸವದ ಬಗ್ಗೆ ಮಕ್ಕಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಲೋಕಪ್ಪ ರಾಠೋಡ್, ಮುಖ್ಯೋಪಾಧ್ಯಾಯರಾದ ಆರ್.ಎಂ ಮಾನೆ, ಮಂಜುಳಾ ಭಜಂತ್ರಿ, ವೈ.ಎಲ್ ನದಾಫ್, ಸಾವಿತ್ರಿ ಹಿರೇಮನಿ, ಸುನಿತಾ ಹವಾಲ್ದಾರ್, ಭಾಗ್ಯಾ ಅದಾಪೂರ್, ಉಮಾ ಯಂಕಂಚಿ, ಸರಸ್ವತಿ ರಾಠೋಡ್, ರುದ್ರಪ್ಪ ಚವ್ಹಾಣ್, ದೇವಕ್ಕ ಚವ್ಹಾಣ್, ಲಕ್ಷ್ಮೀ ಗಣವಾರಿ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.
Post a Comment