ಗಜೇಂದ್ರಗಡ : ( Oct_02_2023)
17 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ತಾಯ್ನಾಡಿಗೆ ಆಗಮಿಸಿದ ಶಬ್ಬಿರ ಅಹ್ಮದ್ ಸುರಪುರ ಇವರನ್ನು ಸ್ವಾಗತಿಸಿ, ಸನ್ಮಾನಿಸಲಾಯಿತು. ಕೆಕೆ ಸರ್ಕಲ್ ನಿಂದ ಮೆರವಣಿಗೆ ಮೂಲಕ ಅವರ ಮನೆಗೆ ಕರೆತರಲಾಯ್ತು. ಮನೆ ಬಳಿ ವೇದಿಕೆಯಲ್ಲಿ ಸನ್ಮಾನಿಸಲಾಯ್ತು. ಸನ್ಮಾನ ಕಾರ್ಯಕ್ರಮಕ್ಕೆ ರಾಜಕೀಯ ಮುಖಂಡರು, ವಿವಿಧ ಧರ್ಮ ಗುರುಗಳು, ಸಾರ್ವಜನಿಕರು ಭಾಗವಹಿಸಿದ್ದರು.
ಅಂಜುಮನ್ ಇಸ್ಲಾಂ ಕಮಿಟಿಯಿಂದ ನಿರ್ದೇಶಕ ದಾವಲಸಾಬ್ ತಾಳಿಕೋಟಿ, ಪುರಸಭೆ ಸದಸ್ಯ ರಾಜು ಸಾಂಗ್ಲೀಕರ್, ಎಂ.ಹೆಚ್. ಕೋಲಕಾರ್, ಮಾಸುಮಲಿ ಮದಗಾರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಈ ವೇಳೆ ಸಂಸ್ಥೆಯ ನಿರ್ದೇಶಕ ದಾವಲಸಾಬ ತಾಳಿಕೋಟಿ, ಪುರಸಭೆ ಸದಸ್ಯ ರಾಜು ಸಂಗ್ಲೀಕಾರ ಸೇನೆಯೂ ದೇಶದ ಹೆಮ್ಮೆ ನಮ್ಮ ನಡುವಿನಲ್ಲೆ ಒಬ್ಬ ಯೋಧ ದೇಶ ಸೇವೆ ಮಾಡಿದ್ದು, ನಮಗೆ ಸಿಕ್ಕ ಗೌರವ ಎಂದು ಶಬ್ಬಿರ್ ಅಹ್ಮದ್ ಸುರಪುರ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದದೇ ವೇಳೆ, ಶಬ್ಬಿರ್ ಸುರಪುರ ಅವರನ್ನ ಸನ್ಮಾನಿಸಿದರು.
ಅಭಿನಂದನಾ ಕಾರ್ಯಕ್ರಮದಲ್ಲಿ ಉಮೇಶ ರಾಠೋಡ, ಎಂ ಎಚ್ ಕೋಲಕಾರ, ಮಾಸುಮಲಿ ಮದಗಾರ, ಮಾಜಿ ಸೈನಿಕರ ಸಂಘದ ಸದಸ್ಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Post a Comment