ಗಜೇಂದ್ರಗಡ : (Oct_02_2023)
ಶ್ರೀ ತುಳಜಾ ಭವಾನಿ ಶಿಕ್ಷಣ ಸಂಸ್ಥೆಯಲ್ಲಿ ಗಾಂಧಿ ಜಯಂತಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರೀ ಅವರ ಜಯಂತ್ಯೋತ್ಸವವನ್ನ ಆಚರಿಸಲಾಯ್ತು. ಗಾಂಧಿಜೀ ಮತ್ತು ಶಾಸ್ತ್ರೀ ಜೀ ಅವರ ಫೋಟೋ ಇಟ್ಟು ಫೂಜೆ ಸಲ್ಲಿಸಿದರು. ಉಭಯ ನಾಯಕರ ಕೊಡುಗೆಯನ್ನ ಸ್ಮರಿಸಿದರು. ಇಂತಹ ಮಹಾನ್ ನಾಯಕರನ್ನ ವಿದ್ಯಾರ್ಥಿಗಳು ಸೇರಿದಂತೆ ಎಲ್ಲರೂ ಆದರ್ಶವನ್ನಾಗಿಟ್ಟುಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಶಾಲೆಯ ಆಡಳಿತಾಧಿಕಾರಿ ಲಾಲಪ್ಪ ರಾಠೋಡ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಮುಖ್ಯೋಪಾಧ್ಯಾಯರಾದ ರೇಖಾ ಮಾನೆ ವ್ಯಕ್ತಿತ್ವ ರೂಪಿಸಿಕೊಳ್ಳಲು ಗಾಂಧಿ ಮತ್ತು ಶಾಸ್ತ್ರೀ ಅವರನ್ನ ಫಾಲೋ ಮಾಡಿ ಎಂದು ತಿಳಿಸಿದರು.
Post a Comment