-->
Bookmark

Gajendragad : SBI ಫೀಲ್ಡ್ ಆಫೀಸರ್ ಅರುಣ್ ಭಂಡಾರಿ ವಿರುದ್ಧ ಪ್ರತಿಭಟನೆ _ 8 ದಿನಗಳಲ್ಲಿ ಕ್ರಮ ಕೈಗೊಳ್ಳದಿದ್ದರೇ ಉಗ್ರ ಹೋರಾಟ - ಕಳಕಪ್ಪ ಪೋತಾ

Gajendragad : SBI ಫೀಲ್ಡ್ ಆಫೀಸರ್ ಅರುಣ್ ಭಂಡಾರಿ ವಿರುದ್ಧ ಪ್ರತಿಭಟನೆ _ 8 ದಿನಗಳಲ್ಲಿ ಕ್ರಮ ಕೈಗೊಳ್ಳದಿದ್ದರೇ ಉಗ್ರ ಹೋರಾಟ - ಕಳಕಪ್ಪ ಪೋತಾ
ಗಜೇಂದ್ರಗಡ : ( Oct_08_2023) 
ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದ ಕುಷ್ಟಗಿ ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದಲ್ಲಿ ಫೀಲ್ಡ್ ಆಫೀಸರ್ ಆಗಿ ಕಾರ್ಯನಿರ್ವಹಿಸುವ ಅರುಣ್ ಭಂಡಾರಿ ವಿರುದ್ಧ ಜಯ ಕರ್ನಾಟಕ‌‌‌ ಸಂಘಟನೆ ಪ್ರತಿಭಟನೆ ನಡೆಸಿತು. ಈ ವೇಳೆ ಮಾತನಾಡಿದ ಜಯ ಕರ್ನಾಟಕ ಸಂಘಟನೆ ತಾಲೂಕಾಧ್ಯಕ್ಷ ಕಳಕಪ್ಪ ಪೋತಾ, ಬ್ಯಾಂಕ್ ಫೀಲ್ಡ್ ಆಫೀಸರ್ ಸಿಬ್ಬಂದಿ ಅರುಣ್ ಲೋನ್ ನೀಡಲು ಗ್ರಾಹಕರಿಂದ ಲಂಚ ಪಡೆಯುತ್ತಾರೆ ಎಂದು ಆರೋಪಿಸಿದರು. ಜೊತೆಗೆ ಗ್ರಾಹಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಅವರ ದುರ್ನಡತೆಗೆ ಗ್ರಾಹಕರು ರೋಸಿ ಹೋಗಿದ್ದಾರೆ. ಸ್ಥಳೀಯರಲ್ಲಿ ಮತ್ತು ಗ್ರಾಮೀಣ ಭಾಗದ ಗ್ರಾಹಕರಲ್ಲಿ ಹಣ ವಸೂಲಿ ಧಂದೆ ನಡೆಸುತ್ತಿದ್ದಾರೆ. ಜಯ ಕರ್ನಾಟಕ ಸಂಘಟನೆಯ ಕೆಲ ಮುಖಂಡರಿಗೂ ಅರುಣ್ ಭಂಡಾರಿ ಇದೇ ರೀತಿ ವರ್ತನೆಯನ್ನ‌ ತೋರಿದ್ದಾರೆ ಎಂದು ಆರೋಪಿಸಿದರು. ಬಡ ಕೂಲಿಕಾರ್ಮಿಕರಿಗೆ ಮತ್ತು ರೈತರಿಗೆ ಸರಿಯಾದ ಮಾಹಿತಿ ನೀಡುವುದಿಲ್ಲ. ಸಾಲ ಮಂಜುರಾತಿ ನೀಡುವಲ್ಲಿ ಹಿಂದೇಟು ಹಾಕುತ್ತಾರೆ. ಹೀಗಾಗಿ, ಅವರ ವಿರುದ್ಧ 8 ದಿನಗಳಲ್ಲಿ ಸೂಕ್ತಕ್ರಮ ಕೈಗೊಳ್ಳಬೇಕು. ಕ್ರಮ ಕೈಗೊಳ್ಳದಿದ್ದರೇ, ಬ್ಯಾಂಕ್ ಎದುರು ಧರಣಿ ಸತ್ಯಾಗ್ರಹ ಮಾಡುವ ಎಚ್ಚರಿಗೆ ನೀಡಿದರು.
ಬಳಿಕ ಬ್ಯಾಂಕ್ ಆಫ್ ಇಂಡಿಯಾ ಮ್ಯಾನೇಜರ್ ಇಮ್ತಿಯಾಜ್ ಅನ್ಸಾರಿ ಅವರಿಗೆ ಲಿಖಿತ ಮನವಿ ಸಲ್ಲಿಸಿದರು. ಮನವಿಗೆ ಸ್ಪಂದಿಸಿ,  ಮಾತನಾಡಿದ ಬ್ಯಾಂಕ್ ಮ್ಯಾನೇಜರ್ ಇಮ್ತಿಯಾಜ್ ಅನ್ಸಾರಿ, ಗ್ರಾಹಕರು ನಮಗೆ ದೇವರಿದ್ದಂತೆ, ಗ್ರಾಹಕರಿಗೆ ತೊಂದರೆಯಾಗದಂತೆ ಎಚ್ಚರಿಗೆ ವಹಿಸುತ್ತೇವೆ. ಮೇಲಧಿಕಾರಿಗಳ ಗಮನಕ್ಕೆ ತರುತ್ತೇವೆ.‌ ಜೊತೆಗೆ ಸೂಕ್ತಕ್ರಮ ಕೈಗೊಳ್ಳುತ್ತೇವೆ ಎಂದು ಮಾಧ್ಯಮ ಪ್ರತಿನಿಧಿ ಕೃಷ್ಣ ರಾಠೋಡ್ ಕೇಳಿದ ಪ್ರಶ್ನೆಗೆ ಉತ್ತರಿಸಿದರು. 
ತಾಲೂಕಾಧ್ಯಕ್ಷ ಕಳಕಪ್ಪ ಪೋತಾ, ತಾಲೂಕು ಕಾರ್ಯಾಧ್ಯಕ್ಷ ಶರಣು ಹಲಗಿ, ನಗರ ಪ್ರಧಾನ ಕಾರ್ಯದರ್ಶಿ ಮಹ್ಮದಗೌಸ್ ಅಕ್ಕಿ, ನಗರ ಸಂಚಾಲಕ ಉಮೇಶ್ ಕಲಮಶೆಟ್ಟಿ, ಸೂಡಿ ಗುತ್ತಿಗೆಯ ದಾರರಾದ ರಮೇಶ್ ಕಡಬಿನವರ್, ಮುತ್ತಣ್ಣ ಹಗಲದಾಳ, ರಾಘವೇಂದ್ರ ಹೂಗಾರ್, ಖಾಸೀಮಸಾಬ್ ಮುಚ್ಚಾಲಿ, ಬಸವರಾಜ್ ಪೂಜಾರ್, ಸುನಿಲ್ ಮಹೇಂದ್ರಕರ್, ಕರಿಯಪ್ಪ ಮಾದರ್, ಅಜ್ಜಪ್ಪ ಹಿರೇಮನಿ, ಅನ್ವರ್ ನರೇಗಲ್,  ವಸೀಂ ಬಂಗಾರಗುಂಡಿ ಸೇರಿದಂತೆ ಅನೇಕರು ಭಾಗವಹಿಸಿದ್ದರು‌.
Post a Comment

Post a Comment