38 ಪೌರಕಾರ್ಮಿಕರು ಖಾಯಂ _ ಸರ್ಕಾರದ ಆದೇಶ, ಸಂಭ್ರಮದಲ್ಲಿ ಪೌರ ಕಾರ್ಮಿಕರು
ಗಜೇಂದ್ರಗಡ : (Oct_09_2023)
ಸೋಮವಾರ ಅಕ್ಟೋಬರ್ 9 ರಂದು ಗಜೇಂದ್ರಗಡ ಪಟ್ಟಣದ ಪುರಸಭೆಯಲ್ಲಿ ಪೌರಕಾರ್ಮಿಕರು ಸಂತಸದಲ್ಲಿದ್ದರು. ಪೌರ ಕಾರ್ಮಿಕರ ಬಹುದಿನಗಳ ಬೇಡಿಕೆ ಈಡೇರಿದೆ. ನಮ್ಮ ಖಾಯಂ ನೌಕರರಾಗಿ ಪರಿಗಣಿಸಿ ಎಂದು ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿ, ಒತ್ತಾಯ ಮಾಡಿದ್ದರು. ಹಲವಾರು ವರ್ಷಗಳಿಂದ ಪೌರಕಾರ್ಮಿಕರ ಬೇಡಿಕೆ ಈಡೇರಿಲಿಲ್ಲ. ಆದರೇ ಈಗ, ಸರ್ಕಾರ ಬಡ ಪೌರ ಕಾರ್ಮಿಕರಿಗೆ ಖಾಯಂ ನೌಕರರಾಗಿ ನೇಮಕಾತಿ ಆದೇಶ ಬಂದಿದೆ. ಹೀಗಾಗಿ, ಸೋಮವಾರ ಪುರಸಭೆಯಲ್ಲಿ 38 ಪೌರ ಕಾರ್ಮಿಕರು ವಿಜಯೋತ್ಸವ ಆಚರಿಸಿದರು. ಕೇಕ್ ಕತ್ತರಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಈ ವೇಳೆ, ಕಿರಾ ನ್ಯೂಸ್ ಕನ್ನಡದೊಂದಿಗೆ ಮಾತನಾಡಿದ ಪುರಸಭೆ ಸದಸ್ಯ ರಾಜು ಸಾಂಗ್ಲೀಕರ್, ಗಜೇಂದ್ರಗಡ ಪಟ್ಟಣ ಸುಂದರವಾಗಿ ಕಾಣಲು ಹಗಲಿರುಳು ಶ್ರಮಿಸುವ ಕಾರ್ಮಿಕರಿಗೆ ಗೌರವ ಸಿಕ್ಕಂತಾಗಿದೆ. ಪ್ರತಿ ಬಾರಿ ಸಾಮಾನ್ಯ ಸಭೆಯಲ್ಲಿ ಪೌರಕಾರ್ಮಿಕರ ಪರ ಮಾತನಾಡಿದ್ದೇವೆ. ಅವರ ಸಮಸ್ಯೆಯನ್ನ ಬಗೆಹರಿಸುವಂತೆ ಒತ್ತಾಯವನ್ನ ಮಾಡಿದ್ವಿ. ಆದ್ರೆ, ಈ ಹಿಂದೆ ಇದ್ದ ಸರ್ಕಾರ ಪೌರ ಕಾರ್ಮಿಕರ ಬೇಡಿಕೆ ಈಡೇರಿಸಲಿಲ್ಲ. ಶಾಸಕರಾದ ಜಿ.ಎಸ್ ಪಾಟೀಲ್, ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಕೆ ಪಾಟೀಲ್ ಹೆಚ್ಚಿನ ಕಾಳಜಿ ವಹಿಸಿ, ಪೌರಕಾರ್ಮಿಕರ ಖಾಯಂ ಆದೇಶ ನೀಡುವಲ್ಲಿ ಯಶಸ್ವಿಯಾಗಿದೆ. ಈ ಹಿನ್ನೆಲೆಯಲ್ಲಿ ಶಾಸಕ ಜಿ.ಎಸ್ ಪಾಟೀಲ್, ಸಚಿವರಾದ ಹೆಚ್.ಕೆ ಪಾಟೀಲ್ ಮತ್ತು ಸರ್ಕಾರಕ್ಕೆ ಪೌರಕಾರ್ಮಿಕರ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ ಎಂದು ರಾಜು ಸಾಂಗ್ಲೀಕರ್ ಹೇಳಿದ್ದಾರೆ.
Post a Comment