ಧಾರವಾಡ : (Oct_14_2023)
ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಯ ಪದವಿ ಕಾಲೇಜುಗಳ ಕನ್ನಡ ಅಧ್ಯಾಪಕರ ಪರಿಷತ್ತು ಧಾರವಾಡ, ಜೆ.ಎಸ್.ಎಸ್. ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ‘ಶರಣರ ಮೌಲ್ಯಗಳ ಪ್ರಸ್ತುತತೆ ‘ ಕುರಿತು ಒಂದು ದಿನದ ವಿಚಾರ ಸಂಕಿರಣ ಜೆ.ಎಸ್.ಎಸ್. ಡಿ.ಆರ್.ಎಚ್.ಸಭಾಭವನದಲ್ಲಿ ಜರುಗಿತು.
ಜ್ಯೋತಿ ಬೆಳಗಿಸಿ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಜನತಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ್ ಪ್ರಸಾದ್ ಅವರು ಕನ್ನಡ ಮಾಧ್ಯಮದಲ್ಲಿ ಮಾತ್ರ ಬದುಕನ್ನು ಸಹಜವಾಗಿ ಅರಳಿಸಿಕೊಳ್ಳಬಹುದು. ಆಂಗ್ಲ ಮಾಧ್ಯಮದಲ್ಲಿ ಓದಿದರೆ ಅಂತರಂಗದ ಪ್ರಶ್ನೆಗಳನ್ನು ಕೇಳಲು ಸಾಧ್ಯವಾಗುವುದಿಲ್ಲ .ಇದು ಗೊತ್ತಿದ್ದರೂ ನಾವೆಲ್ಲ ಇಂಗ್ಲೀಷ್ ನ ಬೆನ್ನು ಹತ್ತಿ ಹೊರಟಿದ್ದೇವೆ ಇದು ವಿಷಾದನೀಯ. ಶೈಕ್ಷಣಿಕ ನಿಯಮಾವಳಿಗಳನ್ನು ರೂಪಿಸುವವರು ಇದನ್ನು ಗಮನಿಸಬೇಕೆಂದು ಹಿತ ನುಡಿದರು.
ಶರಣರ ಮೌಲ್ಯಗಳ ಪ್ರಸ್ತುತತೆ ಬಗ್ಗೆ ವಿಶೇಷ ಉಪನ್ಯಾಸ ನೀಡಿದ ಹಿರಿಯ ಸಾಹಿತಿಗಳು ಡಾ.ವೀರಣ್ಣ ರಾಜೂರ ಮಾತನಾಡಿ ೧೨ನೇ ಶತಮಾನದಲ್ಲಿ ಕರ್ನಾಟಕದ ಕಲ್ಯಾಣದಲ್ಲಿ ಮಾನವೋದ್ಧಾರದ ಕ್ರಾಂತಿ ನಡೆಯಿತು. ಅಂದು ನಡೆದ ಮಾನವ ಚಳುವಳಿಯ ನೇತೃತ್ವ ವಹಿಸಿದವರು ಬಸವಣ್ಣನವರು. ಅವರ ಅನುಯಾಯಿಗಳಾದವರೆಲ್ಲ ಕಾಯಕ ಜೀವಿಗಳು. ಆ ಮೂಲಕ ಒಂದು ಪರ್ಯಾಯ ಸಂಸ್ಕೃತಿಯನ್ನು ನಿರ್ಮಿಸಿದರು. ಅದರ ಮೂಲ ಉದ್ದೇಶ ಸಮಾನ ಸಮಾಜ ತರುವುದು ಆಗಿದ್ದು ಹಾಗಾಗಿ ಶರಣರ ಕಾಯಕ ದಾಸೋಹ ಮತ್ತು ಸಮಾನತೆಯ ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿ ಇವೆ ಎಂದು ನುಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಅಧ್ಯಾಪಕರ ಪರಿಷತ್ತಿನ ಕಾರ್ಯಾಧ್ಯಕ್ಷರಾದ ಡಾ.ಮಹಾದೇವಿ ಹಿರೇಮಠ ಅವರು ಕನ್ನಡ ಕನ್ನಡ ಅಧ್ಯಾಪಕರ ಸಮಸ್ಯೆ ಸವಾಲು ಮತ್ತು ಆಡಳಿತಗಳನ್ನು ಹೇಳಿ ಅವುಗಳ ಬಗ್ಗೆ ಚರ್ಚೆ ಸಾಕಷ್ಟು ಚರ್ಚೆಗಳು ನಡೆಯಬೇಕು ಎಂದರು. ಕಾರ್ಯಕ್ರಮದಲ್ಲಿ ಬಸವಶ್ರೀ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಡಾ.ವೀರಣ್ಣ ರಾಜೂರ ಹಾಗೂ ಜನತಾ ಶಿಕ್ಷಣ ಸಮಿತಿ ಕಾರ್ಯದರ್ಶಿಗಳಾದ ಡಾ.ಅಜಿತ ಪ್ರಸಾದ ಅವರನ್ನು , ಕವಿಕಾಶಿ ಸಂಘದ ಅಧ್ಯಕ್ಷ ಡಾ.ಮಂಜುನಾಥ ಮತ್ತು ೨೦೨೦ ರಿಂದ ನಿವೃತ್ತರಾದ ಕನ್ನಡ ಪ್ರಾಧ್ಯಾಪಕರನ್ನು ಮತ್ತು ಪಿಎಚ್. ಡಿ ಪದವಿ ಪಡೆದವರನ್ನು , ವಿವಿಧ ರಾಜ್ಯ, ರಾಷ್ಟ್ರ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಧ್ಯಕ್ಷತೆಯನ್ನು ಕನ್ನಡ ಮೌಲ್ಯಮಾಪನ ಕೇಂದ್ರದ ಚೇರಮನ್ನರು, ಕನ್ನಡ ಅಧ್ಯಾಪಕರ ಪರಿಷತ್ತಿನ ಅಧ್ಯಕ್ಷರಾದ ಡಾ. ಪ್ರಭು ಗಂಜಿಹಾಳ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಡಾ.ಪುಷ್ಪ ಬಸನಗೌಡರ, ಮೌಲ್ಯಮಾಪನ ಕೆಂದ್ರದ ಡೆಪ್ಯೂಟಿ ಚೇರಮನ್‌ರಾದ ಪ್ರೊ. ವಿ. ಎಮ್ ಗುರುಮಠ , ಡಾ.ವೈ.ಎಂ.ಭಜಂತ್ರಿ, ಸಂಯೋಜಕರಾದ ಡಾ.ಜಿನದತ್ತ ಹಡಗಲಿ, ಕೋಶಾಧ್ಯಕ್ಷ ಡಾ.ಎಸ್.ವಿ.ಮನಗುಂಡಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಸನ್ಮಾನದ ಕಾರ್ಯಕ್ರಮವನ್ನು ಸಹಕಾರ್ಯದರ್ಶಿ ಡಾ.ಚಾಮರಾಜ ಕಮ್ಮಾರ ನಡೆಸಿಕೊಟ್ಟರು. ಪ್ರೊ.ಮಾದರ ಪ್ರಾರ್ಥಿಸಿದರು. ಡಾ.ಮನಗುಂಡಿ ಕೊನೆಯಲ್ಲಿ ವಂದಿಸಿದರು. ಕಾರ್ಯದರ್ಶಿ ಡಾ.ಎಸ್.ಎಸ್. ದೊಡ್ಡಮನಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕವಿವಿ ವ್ಯಾಪ್ತಿಯ ಪದವಿ ಕಾಲೇಜುಗಳ ಅಧ್ಯಾಪಕರು ಪಾಲ್ಗೊಂಡಿದ್ದರು.
**
ವರದಿ-ಡಾ.ಪ್ರಭು ಗಂಜಿಹಾಳ.ಮೊ.9448775346
Post a Comment