ಯಾಜ್ಞವಲ್ಕಾಶ್ರಮ ಶ್ರೀ ಚಿದಂಬರೇಶ್ವರ ದೇವಸ್ಥಾನ : ಶ್ರಾವಣ ಕೊನೆ ಸೋಮವಾರ ಹಲವು ಪೂಜೆ ಪುನಸ್ಕಾರ
ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಸೂಡಿಯ ಶ್ರೀ ಯಾಜ್ಞವಲ್ಕಾಶ್ರಮ, ಶ್ರೀ ಚಿದಂಬರೇಶ್ವರ ದೇವಸ್ಥಾನ ಧಾರ್ಮಿಕ ಕಾರ್ಯಕ್ರಮಕ್ಕೆ ಹೆಸರುವಾಸಿ. ಈಗ ಮತ್ತೊಂದು ಧಾರ್ಮಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದೆ.
ಶ್ರಾವಣದ ಕೊನೆ ಸೋಮವಾರ ಸೆಪ್ಟೆಂಬರ್ 11 ರಂದು ಶ್ರೀ ಚಿದಂಬರ ಮಹಾಸ್ವಾಮಿಗೆ ಲಘುರುದ್ರಾಭಿಷೇಕ, ಪಲ್ಲಕ್ಕಿ ಸೇವೆ, ಸಾಂಪ್ರದಾಯಿಕ ಭಜನೆ, ಆರತಿ ನೈವೇದ್ಯ, ಮಹಾಮಂಗಳಾರತಿ ನಡೆಯಲಿದೆ. ಅಲ್ಲದೇ ಸಕಲ ಭಕ್ತರಿಗೆ ಪ್ರಸಾದ ಸೇವೆಯೂ ಇರಲಿದೆ. ಸಕಲ ಭಕ್ತರು ಭಾಗವಹಿಸಿ, ಎಂದು ಯಾಜ್ಞವಲ್ಕಾಶ್ರಮ, ಶ್ರೀ ಚಿದಂಬರೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಮನವಿ ಮಾಡಿದ್ದಾರೆ.
ಶ್ರಾವಣ ಮಾಸ ಅಂದ್ರೆ, ದೈವತ್ವದೆಡೆಗೆ ಹೋಗುವುದು. ಈ ಮಾಸದಲ್ಲಿ ಪ್ರತಿದಿನವೂ ದೇವರಿಗೆ ವಿಶೇಷ ಪೂಜೆ ಪುನಸ್ಕಾರ ಭಕ್ತರನ್ನ ಸೆಳೆಯುತ್ತವೆ. ಹಲವು ದಶಕಗಳಿಂದ ಯಾಜ್ಞವಲ್ಕಾಶ್ರಮ, ಶ್ರೀ ಚಿದಂಬರೇಶ್ವರ ದೇವಸ್ಥಾನ ಹಲವು ಆಚರಣೆಗಳ ಮೂಲಕ ಭಕ್ತರ ಗಮನ ಸೆಳೆದಿದೆ. ಸಾವಿರಾರು ಭಕ್ತರು ಶ್ರದ್ಧಾ ಭಕ್ತಿಯಿಂದ ಬರುತ್ತಾರೆ. ಹಲವರು ಮಾನಸಿಕ ನೆಮ್ಮದಿ ಹುಡುಕುತ್ತಾರೆ. ಗಂಟೆ ನಾದ, ನೈವೇದ್ಯ, ಪ್ರಶಾಂತ ಮನೋಭಾವ ಇದೇಲ್ಲವೂ ಮನಸ್ಸನ್ನ ಹತೋಟಿಯಲ್ಲಿಡಲು ಸಹಕಾರಿಯಾಗಿವೆ. ಜೊತೆಜೊತೆಗೆ ಪಾಸಿಟಿವ್ ಎನರ್ಜಿಗೆ ಸೂಡಿ ಹೆಸರುವಾಸಿಯಾಗಿದೆ.
Post a Comment