ಕತ್ತಲು ತುಂಬಿದ ಪರಿಸರ, ಆ ಸಮಾಜದಲ್ಲಿ ಅಸ್ಪೃಶ್ಯ ಎಂದು ಗಣಿಸಲ್ಪಟ್ಟ ಕರಗಿನ ಮೈಬಣ್ಣದ ಬಿಲಾಲ್ ಒಂದು ಮೂಲೆಯಲ್ಲಿ ನಿಂತಿದ್ದಾರೆ, ಅವರು ಕುರೈಶಿ ನಾಯಕ ಉಮಯ್ಯ ಬಿನ್ ಖರ ಗುಲಾಮರಾಗಿದ್ದರು. ಒಂದು ದಿನ ಅವರ ಬಳಿಗೆ ಪ್ರವಾದಿ ಮಹಮ್ಮದರ ಆಗಮನವಾಗುತ್ತದೆ. ಪ್ರವಾದಿ ಮಹಮ್ಮದರು ನೇರವಾಗಿ ಬಂದು ಅವರನ್ನು ಆಲಂಗಿಸುತ್ತಾರೆ. ಮೇಲುಡುಪನ್ನು ಧರಿಸದೆ ಇದ್ದ ಬಿಲಾಲರಿಗೆ ಆ ಆಲಿಂಗನದಿಂದ ರೋಮಾಂಚನವಾಗುತ್ತದೆ. ಏಕೆಂದರೆ ಅವರ ಶರೀರವನ್ನು ಇದುವರೆಗೆ ಯಾರು ಸ್ಪರ್ಷಿಸಿರಲಿಲ್ಲ. ಕ್ಷುಲ್ಲಕ ಉರಕ್ಕೂ, ಚಾಟಿಯಿಂದ ಏಟನ್ನು ತಿನ್ನುವುದರ ಹೊರತು ಬಿಲಾಲ್ ಅದುವರೆಗೂ ಯಾವುದನ್ನು ಅನುಭವಿಸಿರಲಿಲ್ಲ. ಪ್ರೀತಿಯ ಆಲಿಂಗನದಿಂದ ಮೂಕ ವಿಸ್ಮಿತರಾದ ಜಿಲಾಲರ ಬಾಯಿಯಿಂದ ಮಾತುಗಳು ಹೊರಡಲಿಲ್ಲ. ಜಗತ್ತಿನ ಜನರ ಪಾಲಿಗೆ ಅನುಗ್ರಹಿತರಾಗಿ ಆಗತರಾದ ದೈವಿಕ ಗಂಥಗಳಲ್ಲಿ ನಿಮಗೆ ಇವರಲ್ಲಿ ಮಾದರಿ ಇದೆ ಎಂದು ಪ್ರಸ್ತಾಪಿಸಲ್ಪಟ್ಟ ಪ್ರವಾದಿ ಮಹಮ್ಮದರ(ಸ) ಕುರಿತು ಅರಿತ ಬಿಲಾಲ್ ಮುಂದಿನ ದಿನಗಳಲ್ಲಿ ಅವರ ಅನುಯಾಯಿಯಾಗಿ ಮಾರ್ಪಡುತ್ತಾರೆ. ನಿರಂತರವಾಗಿ ಓರ್ವ ಮನುಷ್ಯ ತನ್ನ ಯಜಮಾನ ನಿಂದ ಕಿರುಕುಳ ಅನುಭವಿಸುತ್ತಿರುವುದನ್ನು ಕಂಡು ಸಹಿಸಲಾಗದ ಮೃದು ಹೃದಯಿ ಪ್ರವಾದಿ ಮುಹಮ್ಮದರ(ಸ) ಗೆಳೆಯ ಅಬೂಬಕ್ಕರ್ ಸಿದ್ದೀಕ್ ಬಿಲಾಲ್‌ರನ್ನು ಅಪಾರ ಹಣ ಕೊಟ್ಟು ಖರೀದಿಸಿ ಸ್ವತಂತ್ರ ಗೊಳಿಸುತ್ತಾರೆ, ಆಲೂಬಕ್ಕರ್ ಆ ಸಮಾಜದ ಓರ್ವ ಪ್ರಸಿದ್ಧ ಬಟ್ಟೆ ವ್ಯಾಪಾರಿಯಾಗಿದ್ದರು. ಈ ಮೂಲಕ ಸಹೋದರತೆಗೆ, ಮನುಷ್ಯ ಸಮಾನತೆಗೆ ಹೊಸ ಭಾಷ್ಯ ಬರೆಯಲ್ಪಡುತ್ತದೆ. ಬಿಲಾಲರು ತಮ್ಮ ಮುಂದಿನ ಜೀವನವನ್ನು ಪ್ರವಾದಿಯ ಸಾನಿಧ್ಯದಲ್ಲಿ ಕಳೆಯುತ್ತಾರೆ. ಪ್ರವಾದಿ ಮುಹಮ್ಮದರು ಪ್ರಥಮ ಆಧಾನ (ಸಮಾರಿಗಾಗಿ ಜನರನ್ನು ಆಹ್ವಾನಿಸುವ ಕರೆ) ಕೊಡುವ ಸೌಭಾಗ್ಯವನ್ನು ಬಿಲಾಲರಿಗೆ ನೀಡುತ್ತಾರೆ. ಇವರು ಇತಿಹಾಸದ ಪ್ರಥಮ ಮುದ್ದಿನ ಎಂದು ಗುರುತಿಸಲ್ಪಡುತ್ತಾರೆ. ಹಂತ ಹಂತವಾಗಿ ಗುಲಾಮಗಿರಿಯನ್ನೇನಿರ್ನಾಮಗೊಳಿಸಿದ ಶ್ರೇಯಸ್ಸು ಪ್ರವಾದಿ ಮುಹಮ್ಮದ(ಸ)ರಿಗೆ ಸಲ್ಲುತ್ತದೆ.
ಮನುಷ್ಯನಿಗೆ ಅನ್ನ, ಉಡುವ ಮತ್ತು ವಸತಿಯಂತೆ ಅನಿವಾರ್ಯ ವಾಗಿ ಬೇಕಾದ ಒಂದು ವಿಷಯವಾಗಿದೆ. ಸಮಾನತೆ, ಸಮಾನತೆಯನ್ನು ಬಯಸದ ಮನುಷ್ಯರು ಬರಲಿಕ್ಕಿಲ್ಲ, ತುಳಿತಕ್ಕೊಳಗಾದ ದಮನಿತರು ಶೋಷಿತರು ಸಮಾಜದಲ್ಲಿ ತಮ್ಮ ಸ್ವಂತ ಪರಿಶ್ರಮದಿಂದ ಯಾವುದೇ ಉನ್ನತ ಹುದ್ದೆಯನ್ನು ಅಲಂಕರಿಸಿದ್ದರು. ಅವರ ಮುಖದ ಮೇಲೆ ಅಸಮಾನತೆಯನ್ನು ಅನುಭವಿಸುತ್ತಿರುವುದರ ನೋವಿನ ಗೆರೆಗಳನ್ನು ಗುರುತಿಸಬಹುದಾಗಿದೆ.
ಮನುಷ್ಯರೆಲ್ಲರೂ ಸಮಾನರು ಎಂಬುದು ಪ್ರವಾದಿ ಮುಹಮ್ಮದರ ಶಿಕ್ಷಣಗಳ ಪೈಕಿ ಬಹಳ ಪ್ರಮುಖವಾದದ್ದು, ಮನುಷ್ಯನನ್ನು ದೇವನು ಗೌರವಾರ್ಹವಾಗಿ ಸೃಷ್ಟಿಸಿದ್ದಾನೆ. ಸಮಾನತೆ ಇರುವಲ್ಲಿ ಗೌರವವಿರುತ್ತದೆ. ಗೌರವದ ವಾತಾವರಣ ಇದ್ದರೆ ಅದು ಪ್ರಾಮಾಣಿಕ ಪ್ರೀತಿಗೆ ಕಾರಣವಾಗುತ್ತದೆ. ಪ್ರವಾದಿ ಮುಹಮ್ಮದರ ಶಿಕ್ಷಣದ ಪ್ರಕಾರ ಮನುಷ್ಯರೆಲ್ಲರೂ ದೇವನ ಕುಟುಂಬವಾಗಿದ್ದಾರೆ. ಸಮಾನತೆ ಎಂಬುದು ಮನುಷ್ಯನ ಜನ್ಮಸಿದ್ಧ ಹಕ್ಕು ಎಂದವರು ಪ್ರತಿಪಾದಿಸಿದರು, ಆದುದರಿಂದ ಚರ್ಮದ ಬಣ್ಣ, ಹುಟ್ಟಿದ ಸ್ಥಳ, ಜನಾಂಗ, ಹುಟ್ಟಿದ ದೇಶ ಇವುಗಳ ಆಧಾರದಲ್ಲಿ ಯಾರೊಂದಿಗೂ ಅಸಮಾನತೆಯನ್ನು ತೋರಿಸುವಂತಿಲ್ಲ, ಏಕೆಂದರೆ ಇವುಗಳ ಆಯ್ಕೆಯಲ್ಲಿ ಮನುಷ್ಯನ ಪಾಲಿಲ್ಲ. ಮನುಷ್ಯರೆಲ್ಲರೂ ಒಬ್ಬ ದೇವನ ಸೃಷ್ಟಿಗಳು. ಜನರೇ ನಿಮ್ಮ ವಾಲಕ ಪ್ರಭುವನ್ನು ಭಯಪಡಿರಿ. ಅವನು ನಿಮ್ಮನ್ನು ಒಂದೇ ಜೀವದಿಂದ ಸೃಷ್ಟಿಸಿದನು ಅದೇ ಜೀವದಿಂದ ಅವರ ಜೋಡಿಯನ್ನು ಉಂಟು ಮಾಡಿದನು ಮತ್ತು ಅವೆರಡರಿಂದ ಆನೇಕ ಸ್ತ್ರೀ ಪುರುಷರನ್ನು ಲೋಕದಲ್ಲಿ ಹಬ್ಬಿಸಿದು, ಪವಿತ್ರ ಕುರಾನ್ ನಾಲ್ಕನೆಯ ಅಧ್ಯಾಯದ ಪ್ರಥಮ ವಚನ, ಎಲ್ಲರ ಆದಿತ ಮತ್ತು ಅವಿಮಾನ ಒಬ್ಬರೇ ಆಗಿದ್ದಾರೆ, ನಾವೆಲ್ಲರೂ ಪರಸ್ಪರ ಸಹೋದರ ಸಹೋದರಿಯರು, ಮನುಷ್ಯರೆಲ್ಲರೂ ಸಮಾನರು ಎಂದಾದರೆ ನಮ್ಮಲ್ಲಿ ಈ ಜನಾಂಗಗಳು ದೇಶ ಭಾಷೆಗಳ ಭಿನ್ನತೆ ಯಾಕೆ ಎಂಬ ಪ್ರಶ್ನೆ ಮನುಷ್ಯ ಸಹಜ. ಇದಕ್ಕೆ ಉತ್ತರಿಸುತ್ತಾ ಪವಿತ್ರ ಕುರಾನ್ ತನ್ನ 14ನೇ ಅಧ್ಯಾಯದ 3ನೇ ವಚನದಲ್ಲಿ ಹೀಗೆ ಹೇಳುತ್ತದೆ, "ಜನರೇ ನಾವು ನಿಮ್ಮನ್ನು ಒಟ್ಟು ಪುರುಷ ಮತ್ತು ಒಬ್ಬ ಸ್ತ್ರೀಯಿಂದ ಉಂಟುಮಾಡಿದವ, ತರುವಾಯ ನೀವು ಪರಸ್ಥರ ಪರಿಚಯಪಟ್ಟುಕೊಳ್ಳಲಿಕ್ಕಾಗಿ ನಿಮ್ಮ ಜನಾಂಗಗಳನ್ನು ಗೋತ್ರಗಳನ್ನು ಮಾಡಿದೆವು, ನಿಮ್ಮ ಪೈಕಿ ಅತ್ಯಧಿಕ ಧರ್ಮನಿಷ್ಟನೇ ವಾಸ್ತವದಲ್ಲಿ ಅಲ್ಲಾಹನ ಬಳಿ ಅತಿ ಹೆಚ್ಚು ಗೌರವಕ್ಕೆ ಪಾತ್ರ ಆದುದರಿಂದ ಯಾರೂ ಹುಟ್ಟಿನ ಆಧಾರದಲ್ಲಿ ಭೇದಭಾವವನ್ನು ಮಾಡುವಂತಿಲ್ಲ ಎಂದು ಬಹಳ ಸ್ಪಷ್ಟ ಧರ್ಮನಿಷ್ಠೆಯು ಇತರರ ಮೇಲೆ ದಬ್ಬಾಳಿಕೆ ನಡೆಸಲು ಸ್ವತಹ ದೈವತ್ವಕ್ಕೇರಲು ಅವಕಾಶವನ್ನು ಕೊಡುವುದಿಲ್ಲ.
ಪ್ರವಾದಿ ಮೊಹಮ್ಮದರ ಬಹಳ ಪ್ರಸಿದ್ಧವಾದ ವಿರಾಯ ಹಜ್ ಭಾಷಣದಲ್ಲಿ ಅಲ್ಲಿ ನೆರೆದಿದ್ದ ಲಕ್ಷಕ್ಕೂ ಮಿಕ್ಕಿ ಜನರನ್ನು ಉದ್ದೇಶಿಸಿ ಹೀಗೆ ಹೇಳಿದ್ದರು.
"ಜನರೇ ಕೇಳಿ, ನಿಶ್ಚಯವಾಗಿಯೂ ನಿಮ್ಮ ಪ್ರಭು ಏಕಮಾತನು ನಿಶ್ಚಯವಾಗಿಯೂ ನಿಮ್ಮೆಲ್ಲರ ಅದಿಪಿತ ಒಬ್ಬನೇ, ನಿಮ್ಮಲ್ಲಿ ಅರಬನಿಗೆ ಅರಬೇತರನ ಮೇಲೆ ಹಾಗೆಯೇ ಅರಬೇತರನಿಗೆ ಅರಚಿನ ಮೇಲೆ ಯಾವ ಮೇಲೆಯು ಎಲ್ಲ ಕರಿಯನಿಗೆ ಬೆಳೆಯನ ಮೇಲೆ ಹಾಗೆಯೇ ಬೆಳೆಯನಿಗೆ ಕರಿಯನ ಮೇಲೆ ಯಾವ ಮೇಲೆಯೂ ಇಲ್ಲ ಶ್ರೇಷ್ಠತೆಗೆ ಆಧಾರ ದೇವ ಭಕ್ತಿ ಮಾತ್ರವಾಗಿದೆ.
ಆರಾಧನೆಗಳಲ್ಲಿ ಸಮಾನತೆಯ ಪ್ರಾಯೋಗಿಕ ನಿದರ್ಶನಗಳು
ಸಮಾನತೆ ಎಂಬುದು ಕೇವಲ ಗ್ರಂಥಗಳಲ್ಲಿ ಮಾತಿಗೆ ಸೀಮಿತವಾಗಿದ್ದರೆ ಸಾಲದು, ಪ್ರಾಯೋಗಿಕವಾಗಿ ಜಾರಿಗೆ ಬರಬೇಕು ಪ್ರವಾದಿ ಮುಹಮ್ಮದರು ಕಲಿಸಿಕೊಟ್ಟ ಆರಾಧನೆಗಳಲ್ಲಿ ಸಮಾನತೆಯ ದರ್ಶನವಾಗುತ್ತದೆ. ದಿನಕ್ಕೆ ಐದು ಬಾರಿ ಸಾಮೂಹಿಕವಾಗಿ ನಿರ್ವಹಿಸುವ ನಮಾರನ್ನೇ ತೆಗೆದುಕೊಂಡರು ಅಲ್ಲಿ ಎಲ್ಲರೂ ಭುಜಕ್ಕೆ ಭಜತಾಗಿಸಿ ನಿಲ್ಲುತ್ತಾರೆ, ಸಂಗಬೆರಗುವಾಗ ಹಿಂದಿನm ಸಾಲಿನಲ್ಲಿ ಆ ಊರಿನ ಅರಸ ಒಂದು ನಿಂತಿದ್ದರೂ ಅವನ ಮುಂದಿನ ಸಾಲಿನಲ್ಲಿ ಎದುರುಬದಿ ನಿಂತ ವ್ಯಕ್ತಿ ಕೂಲಿಯಾಳಾಗಿದ್ದರು. ಅವನ ಕಾಲಿನ ಹಿಂಭಾಗದ ಬಳಿಯೇ ಇವನ ಹಣೆಯು ಬಂದು ತಲುಪುತ್ತದೆ. ಇಲ್ಲಿ ಮೇಲು-ಕೀಳು ಶ್ರೀಮಂತ-ಬಡವ ಎಂಬ ಭೇದ ಭಾವವೇ ನಾಸ್ತಿಯಾಗುತ್ತದೆ, ದೇವನ ಆಸ್ಥಾನದಲ್ಲಿ ಎಲ್ಲರೂ ಸಮಾನರು, ಈ ಮೇಲು-ಕೀಳು ನಾವು ಸೃಷ್ಟಿಸಿಕೊಂಡಿದ್ದು ಎಂಬ ಪಾಠವನ್ನು ದೈನಂದಿನ ಐದು ಬರಿಯ ನಮಾಝ್ ನಮ್ಮನ್ನು ನೆನಪಿಸುತ್ತದೆ. ಇದು ನಾನು ಶ್ರೇಷ್ಟ ಎಂಬ ಅಹಂ ಅನ್ನು ಇಲ್ಲವಾಗಿಸುತ್ತದೆ. ಮಸೀದಿಯಲ್ಲಿ ಯಾರು ನಮಾಝಿಗು) ಪತ್ಯೇಕ ಸ್ಥಳವನ್ನು ಗುರುತಿಸಿಡುವಂತಿಲ್ಲ, ಮುಂದಿನ ಸಾಲು
ಭರ್ತಿಯಾಗಿದ್ದರೆ, ಎಷ್ಟೇ ದೊಡ್ಡ ಅಧಿಕಾರಿಯಾಗಿದ್ದರೂ ಹಿಂದಿನ ಸಾಲಿನಲ್ಲಿಯೇ ನಮಾಝ್ ನಿರ್ವಹಿಸಲು ನಿಲ್ಲಬೇಕು. ಅದೇ ರೀತಿ ಪವಿತ್ರ ಹಜ್ಜೆ ಕರ್ಮವನ್ನು ನೆರವೇರಿಸುವಾಗಲೂ ವಿಶ್ವ ಸಾಹೋದರ್ಯ, ಸಮಾನತೆಯ ಪ್ರತ್ಯಕ್ಷ ದರ್ಶನವಾಗುತ್ತದೆ. ಜಗತ್ತಿನ ದಶ ದಿಕ್ಕುಗಳಿಂದ ಜನರು ಬರುತ್ತಾರೆ. ಎಲ್ಲ ಬಣ್ಣದವರು, ದೇಶದವರು, ಭಾಷೆಯವರು ಪರಸ್ಪರ ಎಲ್ಲ ಕರ್ಮಗಳನ್ನು ಜೊತೆಯಾಗಿ ನಿರ್ವಹಿಸುತ್ತಾರೆ, ಯಾವುದೇ ಅಸಮಾನತೆಯ ಪ್ರದರ್ಶನಕ್ಕೆ ಇಲ್ಲಿ ಎಳ್ಳಷ್ಟು ಅವಕಾಶವಿಲ್ಲ.
ಯಾವುದೇ ರೀತಿಯ ಅಸಮಾನತೆಯ ಪ್ರದರ್ಶನವನ್ನು ಪ್ರವಾದಿಯವರು ಇಷ್ಟಪಡುತ್ತಿರಲಿಲ್ಲ. ಒಮ್ಮೆ ಯಾವುದೋ ಕಾರಣಕ್ಕೆ ಮುನಿಸಿಕೊಂಡಿದ್ದ ಪ್ರವಾದಿ ಸಂಗಾತಿ ಅಬುವರ್ ಗಿಫಾರಿ ಬಿಲಾಲರನ್ನು ಕರಿಯ ಹೆಣ್ಣಿನ ಮಗನೇ ಎಂದು ಹೀಯಾಳಿಸಿದ್ದರು. ಪ್ರವಾದಿಯವರ ಗಮನಕ್ಕೆ ಈ ವಿಷಯವು ಬಂದಾಗ ಅವರನ್ನು ಹಿಗ್ಗಿ, ಅಜ್ಞಾನವು ನಿಮ್ಮ ಮನಸ್ಸಿನಲ್ಲಿ ಇನ್ನೂ ಬಾಕಿ ಉಳಿದಿದೆ. ಹೋಗಿ ಬಿಲಾಲರೊಂದಿಗೆ ಕ್ಷಮೆ ಕೇಳಿ" ಎಂದು ಆದೇಶಿಸಿದ್ದರು. ಅಸಮಾನತೆಯ ಪ್ರದರ್ಶನವು ಮನುಷ್ಯನ ಅಜ್ಞಾನದ ಕಾರಣದಿಂದ ನಡೆಯುತ್ತದೆ. ಸಮಾನತೆಯ ವರ್ತನೆಯನ್ನು ಬಯಸಿದವರು ಅಜ್ಞಾನಿಗಳೆ ಆಗಿರುತ್ತಾರೆ,
ಮನುಷ್ಯರೆಲ್ಲರೂ ಸಮಾನರು ಎಂದಾದರೆ ಸ್ತ್ರೀ-ಪುರುಷರು ಸಮಾನರಾಗಿದ್ದಾರೆ. ಸ್ತ್ರೀಯು ಸಮಾನತೆಗೆ ಅರ್ಹಳೇ ಎಂಬುದು ಹಿಂದಿನಿಂದಲೂ ಚರ್ಚೆಯಾಗುತ್ತಾ ಬಂದಿರುವ ವಿಷಯ, ಈ ನಿಟ್ಟಿನಲ್ಲಿ ಪ್ರವಾದಿ ಮುಹಮ್ಮದರ ಶಿಕ್ಷಣಗಳು ಸಮಾಜದ ಕಣ್ಣು ತೆರೆಸುವುದಕ್ಕೆ ಪರ್ಯಾಪ್ತವಿದೆ. ಎಲ್ಲ ಕಾಲಗಳಲ್ಲಿಯೂ ಪ್ರವಾದಿ ಮುಹಮ್ಮದರು ಸ್ತ್ರೀ ವಿಮೋಚಕರೆಂದೇ ಪರಿಗಣಿಸಲ್ಪಟ್ಟಿದ್ದರು. ದೇವನ ಮುಂದೆ `ಸ್ತ್ರೀ-ಪುರುಷ ಎಂಬ ಭೇದಭಾವವಿಲ್ಲ. 'ಪುರುಷನಾಗಿರಲಿ, ಸ್ತ್ರೀಯಾಗಿರಲಿ ಯಾರು ಸತ್ಕರ್ಮವೆಸಗುವನೋ ಅವನು ಸತ್ಯವಿಶ್ವಾಸಿಯಾಗಿದ್ದರೆ, ಅವನಿಗೆ ನಾವು ಇಹಲೋಕದಲ್ಲಿ ಶುದ್ಧ ಜೀವನವನ್ನು ದಯಪಾಲಿಸುವವು ಮತ್ತು ಇಂತವರಿಗೆ ಪರಲೋಕದಲ್ಲಿ ಅವರ ಅತ್ಯುತ್ತಮ ಕರ್ಮಗಳ ಅನುಸಾರ ಪ್ರತಿಫಲ ನೀಡಲ್ಪಡುವುದು." (ಪವಿತ್ರ ಕುಆನ: I 07)
"ಅವರ ಪ್ರಭಾ ಹೇಳಿದ ನಾನು ನಿಮ್ಮಲ್ಲಿ ಯಾರೊಬ್ಬನ ಕರ್ಮವನ್ನು ನಿಪ್ಪಲಗೊಳಿಸುವುದಿಲ್ಲ. ಪುರುಷನಾಗಿರಲಿ ಸ್ತ್ರೀಯಾಗಿದ್ದಲಿ ನೀವೆಲ್ಲ ಒಂದೇ ವರ್ಗದವರು.” ಹೆಣ್ಣು ಮಗು ಜನಿಸುವುದನ್ನು ಇಷ್ಟಪಡದ ಸಮಾಜದಲ್ಲಿ ಹೆಣ್ಣು ಮಗು ಜೀವಂತವಿರಲಿಕ್ಕಾಗಿ ಹೋರಾಟ ನಡೆಸಿದ ಮಹಾನುಭಾವರು ಪ್ರವಾದಿ ಮುಹಮ್ಮದ್, ಹೆಣ್ಣು ಗಂಡು ಮಕ್ಕಳ ಮಧ್ಯೆ ಭೇದಭಾವ ಮಾಡಬಾರದು. ಅವಳಿಗೂ ಉತ್ತಮ ಶಿಕ್ಷಣ ತರಬೇತಿ ನೀಡಬೇಕು. ವಿವಾಹ ಪ್ರಾಯಕ್ಕೆ ತಲುಪಿದಾಗ ಅವಳ ಅನುಮತಿ ಇಲ್ಲದೆ ಅವರ ಇಷ್ಟಕ್ಕೆ ವಿರುದ್ಧವಾಗಿ ವಿವಾಹ ಮಾಡಿಕೊಡುವಂತಿಲ್ಲ, ಅವಳಿಗಿಷ್ಟವಿಲ್ಲದ ವಿವಾಹ ಸಂಬಂಧದಲ್ಲಿ ಮುಂದುವರಿಯುವಂತೆ ಅವಳನ್ನು ಬಲಪಡಿಸುವಂತಿಲ್ಲ. ಆಗ ಅವಳು ಇಷ್ಟಪಟ್ಟರೆ ಲಾ ಪಡೆಯುವ ಮೂಲಕ ವಿಚ್ಛೇದನ ಹೊಂದಬಹುದು. ಅವಳು ಉದ್ಯೋಗವನ್ನು ಮಾಡಬಹುದು, ವ್ಯಾಪಾರವನ್ನು ಮಾಡಬಹುದು. ಆಡಳಿತದಲ್ಲಿ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಬಹುದು, ಆಕೆಗೂ ಬಾರೀಸು ಸುತ್ತಿನಲ್ಲಿ ಕಡ್ಡಾಯವಾಗಿ ಪಾಲನ್ನು ನೀಡಬೇಕು ಇತ್ಯಾದಿಗಳನ್ನು ಪ್ರತಿಪಾದಿಸಿದ್ದು ಮಾತ್ರವಲ್ಲ ಕೇವಲ 23 ವರ್ಷಗಳ ಸಣ್ಣ ಅವಧಿಯಲ್ಲಿ ಇವೆಲ್ಲವುಗಳನ್ನು ಪ್ರಾಯೋಗಿಕವಾಗಿ ಜಾರಿಗೆ ತಂದ ಒಂದು ಸಮಾಜವನ್ನು ನಿರ್ಮಿಸಿ ತೋರಿಸಿದರು.
ಉಮರ್(ರ) ಪ್ರವಾದಿ ಮುಹಮ್ಮದರ ಬಳಿಕ ದ್ವಿತೀಯ ಖಲೀಫರಾಗಿ ಆಯ್ಕೆಯಾದರು, ಮಹಾತ್ಮ ಗಾಂಧೀಜಿಯವರು, ಉಮ ಆಡಳಿತವನ್ನು ಬಹಳ ಮೆಚ್ಚಿದ್ದರು. ಅವರು ಒಂದು ದಿನ ರಾತ್ರಿ ಮಾರುವೇಷದಲ್ಲಿ ತನ್ನ ರಾಜ್ಯದಲ್ಲಿ ಸಂಚರಿಸುತ್ತಿದ್ದಾಗ ಒಂದು ಗುಡಿಸಲಿನಿಂದ ತಾಯಿ ಮಗಳ ಸಂಭಾಷಣೆ ಕೇಳುತ್ತಿತ್ತು, ತಾಯ ಮಾರಾಟ, ಹಾಲಿನಲ್ಲಿ ನೀರನ್ನು ಬೆರೆಸಲು ಮಗಳಿಗೆ ಆದೇಶಿಸುತ್ತಿದ್ದಳು ಅದನ್ನು ನಮ್ಮ ಖಲೀಫರು ನಿಷೇಧಿಸಿರುವರಲ್ಲವೇ ಎಂದಾಕೆ ಹೇಳಿದಾಗ ಈ ಅಪರಾತಿಯ ಉವಾರ್ ಎಲ್ಲಿ ನೋಡುತ್ತಾರೆ ನೀನು ನೀರು ಬೆರೆಸಿ ಬಿಡು ಎಂದಳು, ಆಗ ಮಗಳು ಉಮರ್ ನೋಡದಿದ್ದರೆ ದೇವನು ನೋಡುತ್ತಿದ್ದಾನಲ್ಲವೇ ಎಂದಳು. ಅವಳ ಸತ್ಯಸಂಧತೆ ಮತ್ತು ದೇವಭಯವನ್ನು ಮೆಚ್ಚಿ ಖಲೀಫಾ ಉಮರ್ ಆ ಬಳಿಕ ತನ್ನ ಮಗನಿಗೆ ಆ ಹುಡುಗಿಯನ್ನು ವಿವಾಹ ಮಾಡಿಸುತ್ತಾರೆ, ಇದು ಇತಿಹಾಸದಲ್ಲಿ ನಡೆದ ಘಟನೆ, ಮನುಷ್ಯ ಸಮಾನತೆಗೆ ಹೋಲಿಕೆ ಇಲ್ಲದ ಉದಾಹರಣೆ, ಮಕ್ಕಳೊಂದಿಗೂ ಸಮಾನತೆಯ ವರ್ತನೆ
ಮಕ್ಕಳ ಮಧ್ಯೆ ಭೇದ ಭಾವ ಮಾಡಬಾರದು, ಸಮಾನತೆಯಿಂದ ವರ್ತಿಸಬೇಕು ಎಂಬುದಾಗಿ ಪ್ರವಾದಿ ಮುಹಮ್ಮದರು. ಆದೇಶಿಸಿದ್ದಾರೆ. ಒಮ್ಮೆ ಓರ್ವ ವ್ಯಕ್ತಿ ತನ್ನ ಒಬ್ಬ ಪುತ್ರನಿಗೆ ಮಾತ್ರ ವಿಶೇಷ ಸವಲತ್ತು ಒದಗಿಸಿರುವುದನ್ನು ಪ್ರವಾದಿಯವರ ಬಳಿ ಪ್ರಸ್ತಾಪಿಸಿದಾಗ ಅದನ್ನು ಹಿಂತೆಗೆದುಕೊಳ್ಳುವಂತೆ ಹಾಗೂ ಎಲ್ಲ ಮಕ್ಕಳೊಂದಿಗೆ ಸಮಾನತೆಯ ವರ್ತನೆಯನ್ನು ತೋರಿಸಬೇಕು ಎಂಬುದಾಗಿ ಉಪದೇಶಿಸಿದರು.
ಅಸಮಾನತೆ, ಮೇಲು-ಕೀಳುಗಳ ಭಾವನೆ, ಮನುಷ್ಯ ಮನಸ್ಸುಗಳನ್ನು ಒಡೆಯುತ್ತಿರುವ, ಗೊಂದಲದ ವಾತಾವರಣವನ್ನು
ಸೃಷ್ಟಿಸುತ್ತಿರುವ ಈ ದಿನಗಳಲ್ಲಿ ಪ್ರವಾದಿ ಮುಹಮ್ಮದರ ಸಮಾನತೆಯ ಶಿಕ್ಷಣಗಳು ಹೆಚ್ಚು ಪ್ರಚಾರವನ್ನು ಪಡೆಯಬೇಕಿದೆ.
Post a Comment