-->
Bookmark

Itagi : 100 ಅಗ್ನಿವೀರರ ಸೇನಾ ತರಬೇತಿ ಶಿಬಿರ ಪೂರ್ಣ : ಮೆಚ್ಚುಗೆ ಗಳಿಸಿದ ದೇವರಾಜ್ ದೇಸಾಯಿ ಸಹಯೋಗ

Itagi : 
100 ಅಗ್ನಿವೀರರ ಸೇನಾ ತರಬೇತಿ ಶಿಬಿರ ಪೂರ್ಣ : ಮೆಚ್ಚುಗೆ ಗಳಿಸಿದ ದೇವರಾಜ್ ದೇಸಾಯಿ ಸಹಯೋಗ 

ಅಗ್ನಿವೀರರ ಸೇನಾ ತರಬೇರಿ ಶಿಬಿರದ ಸಮಾರೋಪ ಸಮಾರಂಭ

ಶಿಬಿತದ ಲಾಭ ಪಡೆದ ಯುವಕರು 

ಮೆಚ್ಚುಗೆ ಗಳಿಸಿದ ದೇವರಾಜ್ ದೇಸಾಯಿ ಸಹಕಾರ 

ಇಟಗಿ : 
ಅಗ್ನಿವೀರ ಸೇನಾ ತರಬೇತಿ ಶಿಬಿರದ ಇದೇ ಸಪ್ಟೆಂಬರ್ 4 ರಂದು ಸಮಾರೋಪ ಸಮಾರಂಭ ನಡೆಯಲಿದೆ. ಈ ಉಚಿತ ಶಿಬಿರವನ್ನ ದೇವರಾಜ್ ದೇಸಾಯಿ ಅವರು ಪ್ರಾಯೋಜಕರಾಗಿದ್ದಾರೆ. ಶಿಬಿರಾರ್ಥಿಗಳಿಗೆ ಊಟ, ಸಮವಸ್ತ್ರ, ಜೊತೆಗೆ ಅಗತ್ಯತೆಗಳನ್ನ ಪೂರೈಸಿದ್ದಾರೆ. ಇದೇ ಸೋಮವಾರ ಇಟಗಿಯ ಶ್ರೀ ಅನ್ನದಾನೇಶ್ವರ ಮಹಾ ಸಂಸ್ಥಾನಮಠದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹಾಲಕೆರೆಯ ಶ್ರೀ ಅನ್ನದಾನೇಶ್ವರ  ಮಹಾಸಂಸ್ಥಾನ ಮಠದ, ಮ.ನಿ.ಪ್ರ ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ದಿವ್ಯಸಾನಿದ್ಯ ವಹಿಸಲಿದ್ದಾರೆ. ಸೋಮಸಂದ್ರ ಶಾಖಾ ವಿರಕ್ತಮಠದ ಪೂಜ್ಯಶ್ರೀ ಸಿದ್ದಲಿಂಗ ದೇವರು ಕೊಟ್ಟೂರುಸ್ವಾಮಿ, ಇಟಗಿ ಧರ್ಮಮಠದ ಪೂಜ್ಯಶ್ರೀ ಷಣ್ಮುಖಪ್ಪಜ್ಜನವರು ಸಮ್ಮುಖವಹಿಸುವರು. ನಿಡಗುಂದಿಕೊಪ್ಪ ಶಾಖಾ ಶಿವಯೋಗ ಮಂದಿರದ ಶ್ರೀ ಮ.ನಿ.ಪ್ರ ಚನ್ನಬಸವ ಮಹಾಸ್ವಾಮಿಗಳು ಅಧ್ಯಕ್ಷೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಹುಬ್ಬಳ್ಳಿಯ
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕರಾದ ಶ್ರೀ ರವೀಂದ್ರ ಜೀ ಅವರು ಭಾಗವಹಿಸಲಿದ್ದಾರೆ. 

30 ದಿನಗಳ ಶಿಬಿರದಲ್ಲಿ ದೈಹಿಕ ಮತ್ತು ಲಿಖಿತ ಪರೀಕ್ಷೆ ತರಬೇತಿ ಪಡೆದ 100 ಯುವರು ಅಗ್ನಿವೀರ ಸೇನಾ ಭರ್ತಿಗೆ ಸಮರ್ಥಗೊಳಿಸಿದ್ದಾರೆ ಕೋಚ್ ರಾಘವೇಂದ್ರ ಮತ್ತು ತಂಡದವರು. 

ಒಂದು ತಿಂಗಳ ಕಾಲ ಶಿಬಿರಾರ್ಥಿಗಳಿಗೆ ಯಾವುದೆ ತೊಂದರೆ ಯಾಗದಂತೆ ಅಚ್ಚು ಕಟ್ಟಾಗಿ ಎಲ್ಲ ಸೌಕರ್ಯವನ್ನ ಒದಗಿಸಿ, ಕೊಡುಗೈ ದಾನಿಯಾಗಿದ್ದಾರೆ ಇಟಗಿಯ ರಾಜ ಮನೆತನದ ಶ್ರೀ ದೇವರಾಜ್ ದೇಸಾಯಿ ಅವರು. ದೇವರಾಜ್ ಅವರು ಸಮಾಜ ಸೇವೆಯ ಹಲವಾರು ಕನಸುಗಳನ್ನ ಕಮಡಿದ್ದು, ಸಮಾಜ ಸೇವೆಯಲ್ಲಿ ಕೈಗನ್ನಡಿಯಂತೆ ಕೆಲಸ ಮಾಡುತ್ತಿದ್ದಾರೆ. ಅವರಿಂದ ಇನ್ನಷ್ಟು ಸಮಾಜಮುಖಿ ಕೆಲಸ ಕಾರ್ಯಗಳು ನಡೆಯಲಿ...
Post a Comment

Post a Comment