ಲೋಕಸಭೆಗೆ ಡಾ. ಆರ್. ಎಂ ಕುಬೇರಪ್ಪ"ಕೈ" ಟಿಕೇಟ್ ಆಕಾಂಕ್ಷಿ
ಹಾವೇರಿ-ಗದಗ ಲೋಕಸಭೆ ಚುನಾವಣೆಗೆ ನಾನು ಆಕಾಂಕ್ಷಿ ಎಂದು ಹಾವೇರಿಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪದವಿಧರ ಘಟಕದ ರಾಜ್ಯಾಧ್ಯಕ್ಷ ಡಾ. ಆರ್.ಎಂ. ಕುಬೇರಪ್ಪ ಹೇಳಿದ್ದಾರೆ.
ಹಾವೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಸಹ ಕಳೆದ 40 ವರ್ಷದಿಂದ ಕಾಂಗ್ರೆಸ್ ನಲ್ಲಿದ್ದು, ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಿದ್ದೇನೆ. ಶಿಕ್ಷಕರ ನಾಯಕನಾಗಿ ಕಾರ್ಯಕರ್ತರೊಂದಿಗೆ ಇದ್ದೇನೆ. ಹಾವೇರಿ-ಗದಗ ಕ್ಷೇತ್ರದಲ್ಲಿ ಪ್ರತಿ ಹಳ್ಳಿ ಹಳ್ಳಿಯಲ್ಲಿ ಸಂಚರಿಸಿ, ಜನರ ನಾಡಿ ಮಿಡಿತ ಅರಿತಿದ್ದೇನೆ. ಜನರ ಸಂಪರ್ಕ ಇದೆ. ಜೊತೆಗೆ ಅಭಿವೃದ್ಧಿ ತುಡಿತ ಇದ್ದು, ಜಿಲ್ಲೆಯಲ್ಲಿ ಒಂದೆರಡು ಕೈಗಾರಿಕೆಗಳನ್ನ ಸ್ಥಾಪಿಸಿದ್ದರೇ, ಅಭಿವೃದ್ಧಿಗೆ ಪೂರಕವಾಗುತ್ತಿತ್ತು ಎಂದು ಡಾ. ಆರ್.ಎಂ ಕುಬೇರಪ್ಪ ಅಭಿಪ್ರಾಯ ಪಟ್ಟರು. ಕೆಲವೆಡೆ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳ ಕೊರತೆ ಇದೆ ಎನ್ನುತ್ತಲೇ, ಹಲವಾರು ಆಕಾಂಕ್ಷಿಗಳಿದ್ದು, ಕ್ಷೇತ್ರದಲ್ಲಿ ಸರ್ವೇ ಮಾಡಿ, ಯಾರು ಸೂಕ್ತವ್ಯಕ್ತಿ ಎಂದು ಪಕ್ಷದ ಹೈ ಕಮಾಂಡ್ ನಿರ್ಧರಿಸಲಿ ಎಂದು ಹೇಳಿದರು.
ಈ ಮೂಲಕ ಕುರುಬ ಸಮುದಾಯ ಹೆಚ್ಚಿರುವ ಗದಗ ಹಾವೇರಿ ಕ್ಷೇತ್ರದ ಟಿಕೇಟ್ ಆಕಾಂಕ್ಷಿಯಾಗಿದ್ದು, ಟಿಕೇಟ್ ಸಿಕ್ಕರೇ ಗಲ್ಲುವ ವಿಶ್ವಾಸದಲ್ಲಿದ್ದಾರೆ. ಶಿಕ್ಷಕರ ಪದವಿಧರ ಕ್ಷೇತ್ರದ ಆಕಾಂಕ್ಷಿಯಾಗಿದ್ದ ಅವರಿಗೆ ಟಿಕೇಟ್ ಸಿಕ್ಕಿಲ್ಲ. ಶಿಕ್ಷಣ ಸಂಸ್ಥೆಯಿಂದ ಗುರುತಿಸಿ, ಹೋರಾಟದ ಮೂಲಕ ಜನಮನ ಗೆದ್ದ ಡಾ. ಆರ್.ಎಂ ಕುಬೇರಪ್ಪ ಗೆಲ್ಲುವ ಕುದುರೆಯಾಗಲಿದ್ದಾರೆ ಎಂದೆ ಅವರ ಅಭಿಮಾನಿಗಳು, ಕಾರ್ಯಕರ್ತರು ಹುಮ್ಮಸ್ಸಿನಲ್ಲಿದ್ದಾರೆ.
Post a Comment