ಗಜೇಂದ್ರಗಡ : ( Sept 26_09_2023 )
ಕಾವೇರಿ ನೀರು ತಮಿಳುನಾಡಿಗೆ ಬಿಡಬೇಡಿ ಎಂದು ಹಳೆ ಮೈಸೂರು ಭಾಗದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಭಾರತ ತಂಡದ ನಾಯಕ ಕೆ.ಎಲ್ ರಾಹುಲ್ ಬೆಂಬಲ ಸೂಚಿಸಿದ್ದಾರೆ. ಸಧ್ಯ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಕ್ರಿಕೆಟ್ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ನಾಯಕ ಕೆ.ಎಲ್ ರಾಹುಲ್, ಕಾವೇರಿ ಎಂದೂ ನಮ್ಮದು ಕಾವೇರಿ ಹುಟ್ಟುವುದು, ಅತಿ ಹೆಚ್ಚು ಸಂಗ್ರಹವಾಗುವುದು ಕರ್ನಾಟಕದಲ್ಲಿ, ಆದರೆ, ಆ ನೀರನ್ನ ಬಳಸಿಕೊಳ್ಳಲು ಪ್ರತಿ ವರ್ಷ ಕಾನೂನು ಹೋರಾಟ ಜೊತೆಗೆ ಬೀದಿಗಿಳಿದು ಹೋರಾಟ ಮಾಡಬೇಕಾದ ಕನ್ನಡಿಗರದು ಇದು ನಮ್ಮ ದುರಂತ... ಕಾವೇರಿ ಇಡಿ ಕರ್ನಾಟಕದ ಆಸ್ತಿ ಎಂದು ಟ್ವಿಟರ್ (X) ನಲ್ಲಿ ಬರೆದುಕೊಂಡಿದ್ದಾರೆ.
ನದಿ ನೀರಿನ ಬಗ್ಗೆ ಇದುವರೆಗೂ ಕೇವಲ ಕೆಲವು ಚಿತ್ರನಟರು ಮಾತ್ರ ಭಾಗವಹಿಸಿದ್ದರು. ಈಗ ಭಾರತ ಕ್ರಿಕೆಟ್ ತಂಡದ ನಾಯಕ ಕೆ.ಎಲ್ ರಾಹುಲ್ ಅವರು ಟ್ವೀಟ್ ಮಾಡುವ ಮೂಲಕ ಬೆಂಬಲ ಸೂಚಿಸಿದ್ದಾರೆ.
ಆದ್ರೆ, ಇದೆ ಬೆಂಬಲ ಉತ್ತರ ಕರ್ನಾಟಕದ ಜೀವನಾಡಿ ಮಹದಾಯಿ ಹೋರಾಟಕ್ಕೆ ಬೆಂಬಲ ಸಿಕ್ಕಿಲ್ಲ ಎಂಬುದು ವಿಪರ್ಯಾಸ...
Post a Comment