ವಿದ್ಯಾರ್ಥಿಗಳು ಆಧ್ಯಾತ್ಮಿಕತೆಯಿಂದ ಮಾನಸಿಕ, ದೈಹಿಕ ಆರೋಗ್ಯ ಕಾಪಾಡಿಕೊಳ್ಳಬಹುದು : ಬ್ರಹ್ಮಕುಮಾರಿ ಸರೋಜಿನಿ ಅಕ್ಕ
ಗಜೇಂದ್ರಗಡ :
ಆಧ್ಯಾತ್ಮಿಕ ಜೀವನ ಮೌಲ್ಯ ಪ್ರತಿಯೊಂದು ಮಕ್ಕಳಲ್ಲೂ ಜಾಗ್ರತವಾಗಲಿ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಸಂಚಾಲಕಿ ಬ್ರಹ್ಮಾಕುಮಾರಿ ಸರೋಜಿನಿ ಅಕ್ಕನವರು ಅಭಿಪ್ರಾಯ ಪಟ್ಟರು. ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ, ಮಾತನಾಡಿದ ಅವರು, ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತಿದೆ. ಆಧ್ಯಾತ್ಮಿಕತೆ ಯೊಂದಿಗೆ ಕಲಿಕೆ ಇದ್ದಾಗ ಮಕ್ಕಳು ಎಲ್ಲವನ್ನ ಕಲಿಯಲು ಸಾಧ್ಯ. ಮಕ್ಕಳ ಏಕಾಗ್ರತೆಗೆ ಆಧ್ಯಾತ್ಮಿಕತೆ ಭದ್ರ ಬುನಾದಿಯಾಗಿದೆ. ಈ ಮೂಲಕ ಭಾರತಕ್ಕೆ ಆಧ್ಯಾತ್ಮಿಕವಾಗಿ ಅಂತಾರಾಷ್ಟ್ರೀಯ ದರ್ಜೆ ಸಿಗಲಿದೆ. ಇದರಿಂದ ಮಕ್ಕಳ ಭವಿಷ್ಯ ಉಜ್ವಲವಾಗಲಿ ಎಂದು ವಿದ್ಯಾರ್ಥಿಗಳಿಗೆ ಹರಸಿದರು.
ಚಿಲಝರಿಯ ಹೊಲಿ ಫ್ಯಾಮಿಲಿ ಸ್ಕೂಲ್ ನ ರಿಯಾ ಶಾಲೆಟ್ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಗರ್ಭಾವಸ್ಥೆಯಲ್ಲಿದ್ದಾಗಲಿಂದ ಕಲಿಯುವ ಮಕ್ಕಳು, ಬೆಳೆಯುತ್ತ ಬೆಳೆಯುತ್ತ ಏನು ಕಲಿಯಬೇಕು. ಏನನ್ನು ಕಲಿಯಬಾರದು ಎಂಬುದು ತಿಳಿಯುವುದಿಲ್ಲ. ನಮ್ಮನ್ನ ನೋಡಿ ಮಕ್ಕಳು ಕಲಿಯುತ್ತದೆ. ಹೀಗಾಗಿ, ನಾವು ಸಹ ಅಧ್ಯಾತ್ಮಿಕಯನ್ನ ಕಲಿಯಬೇಕು. ದೈಹಿಕವಾಗಿ, ಮಾನಸಿಕವಾಗಿ ಸಂತೃಪ್ತಿಯನ್ನ ಆಧ್ಯಾತ್ಮಿಕತೆಯಿಂದ ಪಡೆಯಬಹುದು ಎಂದು ತಿಳಿ ಹೇಳಿದರು.
ಶ್ರೀ ರಿಯಾ ಶಾಲೆಟ್, ಬಾಬು ನಾವಡೆ, ಸಿರೋಪಿನ ಬಿ. ಎಸ್, F. D. ಕಟ್ಟಿಮನೆ, ಶ್ರೀಮತಿ ಎಸ್ ಹೆಚ್ ಬಂಡಿವಡ್ಡರ್, ಬ್ರಹ್ಮಕುಮಾರಿ ಬಿಂದುಕ್ಕ, ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.
Post a Comment