ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಲಾಭ ಪಡೆಯಿರಿ, ಎಲ್ಲ ಯೋಜನೆಯ ಮಾಹಿತಿ ಪಡೆಯಿರಿ ಎಂದು, ಶ್ರೀ ಮಂಜುನಾಥ ಗ್ರಾಮಾಭಿವೃದ್ಧಿ ಯೋಜನೆಯ ರೋಣ ತಾಲೂಕಿನ ಯೋಜನಾಧಿಕಾರಿ ಮಹಾಬಲೇಶ್ವರ ಪಟಗಾರ ಹೇಳಿದರು. ಗಜೇಂದ್ರಗಡದ ಜಗದಂಬಾ ದೇವಸ್ಥಾನದಲ್ಲಿ ಶ್ರೀ ಮಂಜುನಾಥ ಗ್ರಾಮಾಭಿವೃದ್ಧಿ ಯೋಜನೆ ಹಮ್ಮಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಡವರಿಗಾಗಿ ಹಲವಾರು ಯೋಜನೆಗಳಿವೆ. ಅವುಗಳನ್ನ ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.
ಇದೇ ವೇಳೆ, ಹುಬ್ಬಳ್ಳಿಯ ಎಂ.ಎಂ ಜೋಷಿ ಐ ಹಾಸ್ಪಿಟಲ್ ನ ರಾಘವೇಂದ್ರ ನಿಲಗುಂದ ಮಾತನಾಡಿ, ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯ ವಿದೆ. ಆರೋಗ್ಯವೇ ಭಾಗ್ಯ ಎಂಬುದು ಅಕ್ಷರಶಃ ಸತ್ಯ. ಕಣ್ಣಿನ ತಪಾಸಣೆಯ ಬಗ್ಗೆ ಎಲ್ಲರೂ ಜಾಗೃತರಾಗಿರಿ ಎಂದು ಮನವಿ ಮಾಡಿದರು.
ಇನ್ನೂ, ಸಮಾಜ ಸೇವಕ ಬಸವರಾಜ್ ಕೊಟಗಿ ಮಾತನಾಡಿ, ಯಾವುದೇ ಕೆಲಸ ವಿರಲಿ ಅಚ್ಚುಕಟ್ಟಾಗಿ ಮಾಡಿ, ಮಹಿಳೆಯರು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ಮಹಿಳೆಯರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಮಧ್ಯೆ, ಪೊಲೀಸ್ ಮಹಿಳಾ ಸಿಬ್ಬಂದಿ ಮಂಜುಳಾ ಕೌಜಗೇರಿ, ಮಾತಮಾಡಿ, ಕ್ರೈಂ ನಡೆದಾಗ ಅಥವಾ ತುರ್ತು ಸಂಧರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ವಿಶ್ವನಾಥ್ ಮೇಘರಾಜ್ ಸಹ ಮಾತನಾಡಿದರು.
ಫಲಾನುಭವಿಗಳಿಗೆ ಉಚಿತ ಕನ್ನಡಕ ವಿತರಿಸಿದರು.
ಕಾರ್ಯಕ್ರಮದಮದಲ್ಲಿ ವಿಶ್ವನಾಥ ಮೇಘರಾಜ, ಯೋಜನಾಧಿಕಾರಿ ಮಹಾಬಲೇಶ್ವರ ಪಟಗಾರ, ಎಂಎಂ ಜೋಶಿ ನೇತ್ರ ತಪಾಸಣಾ ಕೇಂದ್ರದ ರಾಘವೇಂದ್ರ ಮತ್ತು ಉಮರ್, ಮಹಿಳಾ ಪೊಲೀಸ್ ಸಿಬ್ಬಂದಿ, ಮಂಜುಳಾ ಕಜಗೇರಿ, ಸಮಾಜ ಸೇವಕ ಬಸವರಾಜ್ ಕೊಟಗಿ,
ಒಕ್ಕೂಟ ಅಧ್ಯಕ್ಷರಾದ ರೇಖಾ, ಅಕ್ಕಮಹಾದೇವಿ, ಮಂಜುಳಾ, ರಾಜೂರು ವಲಯದ ಮೇಲ್ವಚಾರಕರು ಯತಿರಾಜ್, ಗಜೇಂದ್ರಗಡ ಮೇಲ್ವಿಚಾರಕರು ನಾಗಯ್ಯ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಅಶ್ವಿನಿ ಪಿಎಂ. ಗಜೇಂದ್ರಗಡ ಮತ್ತು ರಾಜೂರು ಸೇವಾ ಪ್ರತಿನಿಧಿಗಳು, ಸಂಘದ ಸದಸ್ಯರು ಸೇರಿದಂತೆ ಅನೇಕರು ಭಾಗವಹಿಸಿದ್ದರು.
Post a Comment