-->
Bookmark

Gajendragad : ಹೂಗಾರ ಮಾದಯ್ಯನವರ ಜಯಂತಿ - ಶಶಿಧರ್ ಹೂಗಾರ್ ನೇತೃತ್ವದಲ್ಲಿ ಬಾವಚಿತ್ರಕ್ಕೆ ಪುಷ್ಪನಮನ

Gajendragad : ಹೂಗಾರ ಮಾದಯ್ಯನವರ ಜಯಂತಿ - ಶಶಿಧರ್ ಹೂಗಾರ್ ನೇತೃತ್ವದಲ್ಲಿ ಬಾವಚಿತ್ರಕ್ಕೆ ಪುಷ್ಪನಮನ 

ಗಜೇಂದ್ರಗಡ : (Sept 29_09_2023) 
ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದಲ್ಲಿ ಹೂಗಾರ ಮಾದಯ್ಯಮವರ ಜಯಂತ್ಯೋತ್ಸವ ವನ್ನ ಆಚರಿಸಲಾಯ್ತು. ಹೂಗಾರ ಸಮಾಜದ ರಾಜ್ಯ ಸಮಿತಿ ಸಂಘಟನಾ ಕಾರ್ಯದರ್ಶಿ ಹಾಗೂ ಗಜೇಂದ್ರಗಡ ತಾಲೂಕಾಧ್ಯಕ್ಷ ಶಶಿಧರ್ ಹೂಗಾರ್ ನೇತೃತ್ವದಲ್ಲಿ ಹೂಗಾರ ಮಾದಯ್ಯನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಈ ವೇಳೆ, ಮಾತಮಾಡಿದ ಶಶಿಧರ ಹೂಗಾರ, ಹೂಗಾರ ಮಾದಯ್ಯನವರ ಆದರ್ಶ ಸಕಲ ಮಾನವಕ್ಕೆ ರಹದಾರಿಯಾಗಿದೆ. ಅವರು ಸಮಾಜದಲ್ಲಿನ ಅಂಕು, ಡೊಂಕುಗಳನ್ನ ತಿದ್ದಿ ನಡೆಯುವ ಮಾರ್ಗ ತೋರಿದ್ದಾರೆ. ಅವರ ಮಾರ್ಗದರ್ಶನ ದಲ್ಲೆ ನಾವೆಲ್ಲರೂ ಸಾಗುತ್ತಿದ್ದೇವೆ ಎಂದರು. 
ಇದೇ ವೇಳೆ ಮಾತನಾಡಿದ, ಕಾಂಗ್ರೆಸ್ ಮುಖಂಡ ಸಿದ್ದಪ್ಪ ಬಂಡಿ, ಎಲ್ಲ ಸಮಾಜಕ್ಕೂ ಮಾರ್ಗದರ್ಶನ ತೋರಿದ್ದಾರೆ. ಅಂತಹ ಮಹಾನ್ ನಾಯಕರನ್ನ ಸ್ಮರಿಸಬೇಕು ಎಂದು ಹೇಳಿದರು. 

ಇನ್ನೂ, ಹೆಚ್.ಎಸ್ ಸೋಂಪೂರ್ ಮಾತನಾಡಿ, ಗಜೇಂದ್ರಗಡ ಪುರಸಭೆ ಹೂಗಾರ ಸಮಾಜಕ್ಕೆ ಬಡಾವಣೆ ನಿರ್ಮಾಣ ಮಾಡಬೇಕೆಂದು ಮನವಿ ಮಾಡಿದರು. 
ಸಿದ್ದಪ್ಪ ಬಂಡಿ, ಹೆಚ್. ಎಸ್ ಸೋಂಪೂರ್, ಮರಾಠಾ ಸಮಾಜದ ಅಧ್ಯಕ್ಷ ಜಗದೀಶ್ ಕಲ್ಗುಡಿ, ಜಾಗತಿಕ ಲಿಂಗಾಯತ ಸಮಾಜದ ಎಲ್ಲ ಅಧ್ಯಕ್ಷರು, ಸದಸ್ಯರು, ವೆಂಕಟೇಶ್ ಮುದಗಲ್ಲ, ಶರಣಪ್ಪ ರೇವಡಿ, ವಿರೇಶ್ ರಾಠೋಡ್, ಹರೀಶ ಪಮ್ಮಾರ್, ಶರಣು ಪೂಜಾರ್, ರವೀಂದ್ರ ಹೊನವಾಡ ಸೇರಿದಂತೆ ಅನೇಕರು ಭಾಗವಹಿಸಿದ್ದರು. 
Post a Comment

Post a Comment