ಎಪಿಎಂಪಿ ಆವರಣದಲ್ಲಿ ಪಡಿತರ ಅಕ್ಕಿ ದಾಸ್ತಾನು ಆರೋಪ - ಆಹಾರ ಇಲಾಖೆ ಮತ್ತು ಪಿಎಸ್ ಐ ಸೋಮನಗೌಡ ಗೌಡರ್ ನೇತೃತ್ವದಲ್ಲಿ ದಾಳಿ
Apmc ಯಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಜಂಟಿ ಕಾರ್ಯಾವರಣೆ ನಡೆಸಿ, ಅಕ್ರಮ ಅಕ್ಕಿ ದಾಸ್ತಾನು ಮಾಡಲಾಗಿದೆ ಎಂಬ ಆರೋಪದ ಮೇಲೆ ದಾಳಿ ನಡೆಸಲಾಗಿದೆ. ಆದ್ರೆ, ರಾತ್ರಿ ಆಗಿರುವುದರಿಂದ ಅಡೆತಡೆ ಉಂಟಾಗಿದೆ. ಬೆಳಗ್ಗೆ ಪರಿಶೀಲನೆ ನಡೆಸಿ, ತಿಳಿಸಲಾಗುವುದು ಎಂದು ಆಹಾರಾ ಇಲಾಖೆ ಅಧಿಕಾರಿ ಮಂಜುನಾಥ್ ತಳ್ಳಿಹಾಳ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಅಕ್ಕಪಕ್ಕದ ಅಂಗಡಿಯಲ್ಲಿ ಕೆಲಸ ಮಾಡುವವರು ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಎಪಿಎಂಸಿಯಲ್ಲಿ ನಡೆದ ದಾಳಿ ವೇಳೆ ಗೋವಿನ ಜೋಳ, ಜೋಳ, ಅಕ್ಕಿ ಸೇರಿದಂತೆ ಇತರೆ ಕಾಳು ಕಡಿಗಳು ಇರಬಹುದು. ಅಕ್ಕಿ ಸಹ ಪಡಿತರ ಆಹಾರದ ಅಕ್ಕಿಯಂತೆ ಕಂಡು ಬಂದರು, ಪರಿಶೀಲನೆ ಬಳಿಕವೇ ಸತ್ಯಾಸತ್ಯತೆ ತಿಳಿಯಲಿದೆ ಎಂದು ಆಹಾರ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Post a Comment