ಗಣಪತಿ ಪ್ರತಿಷ್ಠಾಪಿಸುವವರೇ ಎಚ್ಚರ
ಪಟ್ಟಣಲ್ಲಿ ಹೆಚ್ಚಾಗಿದೆ ಪಿಒಪಿ ಗಣಪತಿ ಹಾವಳಿ
೧೫ಕ್ಕೂ ಹೆಚ್ಚು ಪಿಒಪಿ ಗಣಪತಿ ಪತ್ತೆ
ಪುರಸಭೆಯಿಂದ ಸೀಜ್, ಕಟ್ಟುನಿಟ್ಟಿನ ಕ್ರಮ
ಗಜೇಂದ್ರಗಡ : (Sept 12 2023 )
ಗಣೇಶ ಚತುರ್ಥಿ ಹಬ್ಬಕ್ಕೆ ದಿನಗಣನೆ ಆರಂಭವಾಗಿದೆ. ಗಜೇಂದ್ರಗಡದಲ್ಲಿ ಹಬ್ಬದ ಸಂಭ್ರಮ ಕಳೆ ಕಟ್ಟಿದೆ. ನೀರಿನಲ್ಲಿ ಕರಗುವುದಿಲ್ಲ ಮತ್ತು ಪರಿಸರಕ್ಕೆ ಹಾನಿ ಎಂಬ ಕಾರಣದಿಂದ ರಾಜ್ಯಾದ್ಯಂತ ಪಿಒಪಿ ಗಣಪತಿ ಬ್ಯಾನ್ ಆಗಿವೆ. ಹೀಗಾಗಿ, ಗಜೇಂದ್ರಗಡದಾದ್ಯಂತ ಪುರಸಭೆ ಹದ್ದಿನ ಕಣ್ಣಿಟ್ಟಿದೆ. ಹೀಗಿದ್ದರೂ, ಪಟ್ಟಣದಲ್ಲಿ ಪಿಒಪಿ ಗಣಪತಿ ಹಾವಳಿ ಹೆಚ್ಚಾಗಿದೆ. ಪಿಒಪಿ ಗಣಪತಿ ಬಂದಿವೆ ಎಂಬ ಆರೋಪದ ಮೇರೆಗೆ ಪುರಸಭೆ ಆರೋಗ್ಯಾಧಿಕಾರಿ ರಾಘವೇಂದ್ರ ಮಾಂತಾ ಅವರ ನೇತೃತ್ವದ ತಂಡ ದಾಳಿ ನಡೆಸಿದ್ದಾರೆ. ಅಲ್ಲದೇ, ಗಣಪತಿ ಮಾಡುವವರು, ವ್ಯಾಪಾರಸ್ಥರು ಆಗಮಿಸಿದ್ದರು.
Post a Comment