-->
Bookmark

Gajendragad : ಕೈ ತುತ್ತಿನ ಜೊತೆ ಅಕ್ಷರ ಕಲಿಸಿದ ಗುರು : ತಾರಾಸಿಂಗ್ ರಾಠೋಡ್

ಕೈ ತುತ್ತಿನ ಜೊತೆ ಅಕ್ಷರ ಕಲಿಸಿದ ಗುರು : ತಾರಾಸಿಂಗ್ ರಾಠೋಡ್ 

Gajendragad : 

ಶಿಕ್ಷಕರ ದಿನಾಚರಣೆಯಂದು ನೆಚ್ಚಿನ ಶಿಕ್ಷಕರನ್ನ ನೆನೆಯಲೇ ಬೇಕು.. ನಮ್ಮ ತೋಟದ ಮನೆಯಿಂದ ತಮ್ಮ ದ್ವಿಚಕ್ರ ವಾಹನದಲ್ಲೆ ಪ್ರತಿದಿನ ನಮ್ಮ ಸವಾರಿ. ಮಧ್ಯಾಹ್ನ ಊಟವೂ ಅವರು ಕಟ್ಟಿಕೊಂಡು ಬಂದ ಬುತ್ತಿಯಲ್ಲೆ ಕೈತುತ್ತು ಕೊಟ್ಟ ಶಿಕ್ಷಕ ಶ್ರೀ ತಾರಾಸಿಂಗ್ ರಾಠೋಡ್ ಸರ್. ಪ್ರಾಥಮಿಕ ಶಿಕ್ಷಣವನ್ನ ಅವರ ಗರಡಿಯಲ್ಲೆ ಪಡೆದಿದ್ದು, ನಮ್ಮ ಹೆಮ್ಮೆ. ಅಕ್ಷರವನ್ನ ಜೋಡಿಸುವುದು, ಆಟ, ಪಾಠ, ಊಟ ಹೀಗೆ ಪ್ರತಿ ವಿಷಯದ ಬಗ್ಗೆಯೂ ಮಾಹಿತಿ ಹೇಳುತ್ತಿದ್ದ, ಅಪರೂಪದ ಶಿಕ್ಷಕರು. 
ರ ಠ ಈ ಕ ಕಲಿಯುವ ಯುಗ ಅದು. ಆಸುಪಾಸು 90 ರ ದಶಕ ಅದು. ನಾನು ಮತ್ತು ಅಕ್ಕ ಅಂಬುಜಾ ಒಂದೆ ಬಾರಿಗೆ ಶಾಲಾ ಮೆಟ್ಟಿಲು ಹತ್ತಿದ್ದು. ನಮ್ಮಿಬ್ಬರಿಗೆ ಶಾಲೆಗೆ ಕರೆದೊಯ್ಯುವ ಜವಾಬ್ದಾರಿ ತಾರಾಸಿಂಗ್ ಸರ್ ಹೆಗಲಿಗೆ ಹಾಕಿದ್ದು, ಅಪ್ಪ ಲಿಂಬಣ್ಣ ರಾಠೋಡ್. 1968ರಲ್ಲೆ ಎಸ್ ಎಸ್ ಎಲ್ ಸಿ ಮುಗಿಸಿದ್ದ ಅಪ್ಪನಿಗೆ ಶಿಕ್ಷಣದ ಮಹತ್ವ ತಿಳಿದಿತ್ತು. 

ತಾರಾಸಿಂಗ್ ಸರ್ ಅವರಿಗೂ ಅಪ್ಪನ ಮೇಲೆ ಆದರದ ಗೌರವ. ಅವರ ಮೇಲಿಗ ಗೌರವ ಮತ್ತು ವಿದ್ಯಾರ್ಥಿಗಳಿಗೂ ಶಿಕ್ಷಣ ಕಲಿಸಬೇಕು. ಉತ್ತಮ ನಾಗರಿಕರನ್ನಾಗಿಸಬೇಕು ಎಂಬ ಹಂಬಲ ಅವರಲ್ಲಿ ಮೂಡಿತ್ತು. ಹೀಗಾಗಿ, ನಮ್ಮಿಬ್ಬರಿಗೆ ಹೆಚ್ಚಿನ ಮುತುವರ್ಜಿ ವಹಿಸಿ, ಕಲಿಸುತ್ತಿದ್ದರು. 

ಅಂದು ಸಮಗ್ರ ಧಾರವಾಡ ಜಿಲ್ಲೆಗೆ ಗದಗ ಒಳಪಟ್ಟಿದ್ದರೂ, ನಮ್ಮಲ್ಲಿ ಶಿಕ್ಷಣ ಕ್ರಾಂತಿ ಆಗಬೇಕು ಎಂದು  ಹೇಳುತ್ತಿದ್ದುದು, ಸ್ವರ್ಣಪಟಲದಲ್ಲಿ ಅಚ್ಚಾಗಿ ಇಂದಿಗೂ ಉಳಿದಿದೆ. ಸರ್ಕಾರ ಕಾಲಕಾಲಕ್ಕೆ ಜಾರಿಗೆ ತರುವ ಶಿಕ್ಷಣದ ಯೋಜನೆಗಳನ್ನ ಚಾಚುತಪ್ಪದೇ ಪಾಲಿಸುತ್ತಿದ್ದ ಅಪರೂಪದ ಶಿಕ್ಷಕ ತಾರಾಸಿಂಗ್.

ಅವರು ಶಾಲೆಯಲ್ಲಿ ಬೋರ್ಡ್ ಮೇಲೆ ಬರೆಯು ಅಕ್ಷರಗಳನ್ನು ಯಥಾವತ್ತಾಗಿ ಬರೆಯಲು ಹೋಗಿ, ಅದೆಷ್ಟೋ ಸಲ ತಪ್ಪು ಮಾಡಿದಾಗ, ತಲೆಯ ಮೇಲೆ ಕೈ ಇಟ್ಟು, ಪ್ರಯತ್ನ ಪಟ್ಟಿದ್ದಕ್ಕೆ ಬೆನ್ನು ತಟ್ಟುತ್ತಿದ್ದದ್ದು ಮಾತ್ರ, ಜೀವನದಲ್ಲಿ ಎಲ್ಲಿಲ್ಲದ ಸ್ಪೂರ್ತಿ ತುಂಬುತ್ತಿತ್ತು. ಪರೀಕ್ಷೆಯಲ್ಲಿ ಶಾಲೆಯಲ್ಲೆ ಅತಿ ಹೆಚ್ಚು ಅಂಕ ಪಡೆಯುತ್ತಿದ್ದ ವಿದ್ಯಾರ್ಥಿಗಳು ಸಹ ನಾವೇ. 

ಶಿಕ್ಷಕರ ದಿನಾಚರಣೆಗೆ ಮಾತ್ರ ಸೀಮಿತ ವಾಗದ ವ್ಯಕ್ತಿತ್ವ ಅವರದ್ದಲ್ಲ‌. ಶಿಕ್ಷಣ ಮತ್ತು ವಿದ್ಯಾರ್ಥಿಗಳ ಬಗ್ಗೆ ದೂರದ ಆಲೋಚನೆ ಅವರದ್ದಾಗಿತ್ತು‌.
ನಮ್ಮಂತಹ ಅದೆಷ್ಟೋ ವಿದ್ಯಾರ್ಥಿಗಳು ಅವರ ಆದರ್ಶವನ್ನ ಪಾಲಿಸಿ, ಜೀವನದಲ್ಲಿ ಯಶಸ್ಸು ಕಂಡಿದ್ದಾರೆ. ನಾನು ಸಹ ಕಾಲಕಾಲೇಶ್ವರದ ಕನ್ನಡ ಶಾಲೆಯಲ್ಲಿ ಕಲಿತು ಇಂದು, ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆಯುವ ವರೆಗೆ ಹಲವು ಶಿಕ್ಷಕ ಬಳಗ ಕಲಿಸಿದ್ದಾರೆ. ಅವರೆಲ್ಲರಿಗೂ ಧನ್ಯವಾದಗಳು. 

ಇವರೆಲ್ಲರಿಗಿಂತಲೂ ಭಿನ್ನವಾಗಿ, ತುತ್ತು ಅನ್ನ ಕೊಟ್ಟು, ಅಕ್ಷರ ಕಲಿಸಿದ ಗುರು ಶ್ರೀ ತಾರಾಸಿಂಗ್ ರಾಠೋಡ್ ಅವರು. ನಮ್ಮಂತೆ ಇನ್ನೂ ಸಾವಿರಾರು ವಿದ್ಯಾರ್ಥಿಗಳಿಗೆ ಅಕ್ಷರ ದಾಸೋಹ ನೀಡಲಿ... ಅವರು ಸಿಕ್ಕಾಗ, ಈಗಲೂ ಅವರ ಜೊತೆ ಮಾತನಾಡಲು ಭಯ ಉಂಟಾಗಲಿದೆ. ಆಭಯವೇ ಇಂದು ನಮಗೆ ಸಮಾಜದಲ್ಲಿ ಎಲ್ಲರೂ ತಲೆ ಎತ್ತಿ ನೋಡುವಂತಹ ಜ್ಞಾನ ಕಲ್ಪಿತವಾಗಿದೆ. ನಮ್ಮ ನೆಚ್ಚಿನ ಗುರುವಿನ ಬಗ್ಗೆ ಎಷ್ಟು ಬರೆದರೂ ಸಾಲದು. ಅವರು ಸಾಗರ ವಿದ್ದಂತೆ, ಇನ್ನೊಂದು ಜನ್ಮ ಅಂತಾ ಇದ್ರೆ, ಅಲ್ಲೂ ಸಹ ತಾರಾಸಿಂಗ್ ಗುರುಗಳೆ ನನಗೆ ಶಿಕ್ಷಕರಾಗಲಿ ಎಂದು ಆಶಿಸುವ ಅವರ ವಿದ್ಯಾರ್ಥಿ ಕೃಷ್ಣ ರಾಠೋಡ್...

1 comment

1 comment

  • Govt High School (RMSA) Halakere Tq Ron Dist Gadag
    Govt High School (RMSA) Halakere Tq Ron Dist Gadag
    5 September 2023 at 00:17
    ಅದ್ಭುತವಾದ ಹೃದಯಸ್ಪರ್ಶಿ ಲೇಖನ
    Reply