ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಅಂಕ ಪಡೆಯುವಲ್ಲಿ ಯಶಸ್ವಿಯಾಗಬೇಕು ಎಂದು ಪುರಸಭೆ ಸದಸ್ಯ ರಾಜು ಸಾಂಗ್ಲೀಕರ್ ಹೇಳಿದ್ದಾರೆ. ಗಜೇಂದ್ರಗಡದ ಮೌಲಾನಾ ಆಜಾದ್ ಮಾದರಿ ಶಾಲೆಯಲ್ಲಿ ಏರ್ಪಡಿಸಿದ ಪಾಲಕರ ಸಭೆಯಲ್ಲಿ ಮಾತನಾಡಿದ ಅವರು, ಮಕ್ಕಳ ಕಲಿಕಾ ಗುಣಮಟ್ಟ ಸುಧಾರಣೆಗೆ ಶ್ರಮಿಸಬೇಕು. 100 ಕ್ಕೆ ನೂರು ಫಲಿತಾಂಶ ಪಡೆಯಬೇಕು. ಈ ದಿಶೆಯಲ್ಲಿ ಶಿಕ್ಷಕರು ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಶಿಕ್ಷಕರಿಗೆ ಸಲಹೆ ನೀಡಿದರು. ವಿದ್ಯಾರ್ಥಿಗಳು ಸಹ ಅಷ್ಟೇ ಶ್ರದ್ಧೆಯಿಂದ ಓದಿನೆಡೆಗೆ ಗಮನ ಹರಿಸಬೇಕು. ಓದು ಮಾತ್ರ ಜೀವನ ಬದಲಾಯಿಸಲು ಸಾಧ್ಯ. ಈಗಿನ ಕಾಲಘಟ್ಟದಲ್ಲಿ ಎಷ್ಟು ಓದಿದರೂ ಕಡಿಮೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಶಿಕ್ಷಕರು, ವಿದ್ಯಾರ್ಥಿಗಳು ಅಷ್ಟೇ ಅಲ್ಲ. ಪಾಲಕರ ಜವಾಬ್ದಾರಿಯೂ ಅಷ್ಟೇ ಮುಖ್ಯ. ಪಾಲಕರು ಸಹ ತಮ್ಮ ಮಕ್ಕಳ ಬಗ್ಗೆ ಕಾಳಜಿ ವಹಿಸಿದಾಗ ಮಾತ್ರ ಶಾಲೆಯ ರಿಸಲ್ಟ್ 100ಕ್ಕೆ 100 % ಸಾಧ್ಯ ಎಂದು ರಾಜೇಸಾಬ್ ಸಾಂಗ್ಲೀಕರ್ ಹೇಳಿದರು.
Post a Comment