Ron :
ಸಿದ್ದಪ್ಪ ಬಂಡಿ ಅವರಿಗೆ ನಿಗಮ ಮಂಡಳಿ ಸ್ಥಾನ ನೀಡುವಂತೆ ಒತ್ತಾಯ : ಜಿ.ಎಸ್. ಪಾಟೀಲ್ ಅವರಿಗೆ ಅಭಿಮಾನಿಗಳ ಮನವಿ
ರೋಣ ಮತ ಕ್ಷೇತ್ರದಲ್ಲಿ ಜಿ.ಎಸ್ ಪಾಟೀಲ್ ಅವರ ಗೆಲುವಿಗೆ ಶ್ರಮಿಸಿದ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷರಾದ ಸಿದ್ದಪ್ಪ ಬಂಡಿ ಅವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಬೇಕೆಂದು ಗಜೇಂದ್ರಗಡದಿಂದ ಸಿದ್ದಪ್ಪ ಬಂಡಿ ಅಭಿಮಾನಿಗಳು ಜಿ.ಎಸ್. ಪಾಟೀಲ್ ಅವರಿಗೆ ಮನವಿ ಮಾಡಿದ್ದಾರೆ. ಗುರುವಾರ ಸಂಜೆ ಶಾಸಕರ ನಿವಾಸಕ್ಕೆ ತೆರಳಿದ ಅಭಿಮಾನಿಗಳು ಸಿದ್ದಪ್ಲ ಬಂಡಿ ಅವರು ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಶ್ರಮಿಸಿದ್ದಾರೆ. ಸಿದ್ದಪ್ಪ ಬಂಡಿ ಕ್ಷೇತ್ರದಲ್ಲಿ ತಮ್ಮದೆ ಛಾಪನ್ನ ಮೂಡಿಸಿದ್ದಾರೆ. ವೀರಶೈವ ಲಿಂಗಾಯತ ಸಮಗ್ರ ಸಮಾಜದ ಬೆಂಬಲ ಇದೆ. ಕಾಂಗ್ರೆಸ್ ಪಕ್ಷಕ್ಕೆ ಅನನ್ಯ ಸೇವೆ ಸಲ್ಲಿಸಿದ್ದಾರೆ. ಹೀಗಾಗಿ, ಹೆಚ್ಚಿನ ಸೇವೆ ಮಾಡಲು ಅವರಿಗೆ ನಿಮ್ಮ ಸರ್ಕಾರದಲ್ಲಿ ಯಾವುದೇ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಒದಗಿಸಿಕೊಡಬೇಕೆಂದು ತಮ್ಮಲ್ಲಿ ಈ ಮೂಲಕ ತಿಳಿಸುತ್ತೇವೆ ಎಂದು ಸುಮಾರು ೮೦ ಜನರ ಬಳಗದೊಂದಿಗೆ ಮನವಿ ಸಲ್ಲಿಸಿದ್ದಾರೆ.
ಅಭಿಮಾನಿಗಳ ಮತ್ತು ಕಾರ್ಯಕರ್ತರ ಮನವಿ ಸ್ವೀಕರಿಸಿದ ಶಾಸಕ ಜಿ.ಎಸ್. ಪಾಟೀಲ್ ಅವರು, ನಿಮ್ಮ ಬೇಡಿಕೆಯನ್ನ ಸರ್ಕಾರದ ಮುಂದಿಡುತ್ತೇವೆ. ಜೊತೆಗೆ ಅವರಿಗೆ ಸೂಕ್ತ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡುವ ಭರವಸೆಯನ್ನ ನೀಡಿದ್ದಾರೆ.
ಪ್ರಭಾವಶಾಲಿ ಸಮಾಜ
ಪಂಚಮಸಾಲಿ ಸಮಾಜದ ಅಧ್ಯಕ್ಷರು ಹೌದು. ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷರು ಆಗಿರುವುದರಿಂದ ಸಿದ್ದಪ್ಪ ಬಂಡಿ ಅವರಿಗೆ ನಿಗಮ ಮಂಡಳಿ ಸ್ಥಾನ ಕೊಡಲೇಬೇಕಾಗಿದೆ. ಅಷ್ಟೇ ಅಲ್ಲ, ಎಲ್ಲ ಸಮುದಾಯದ ಬಾಂಧವರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುವ ಮಾಸ್ ಲೀಡರ್ ಕೂಡ ಹೌದು. ಕಾಂಗ್ರೆಸ್ ಗೆ ಇಂತಹ ನಾಯಕರ ಕೊರತೆ ಇತ್ತು. ಕೊಟ್ಟ ಜವಾಬ್ದಾರಿಯನ್ನ ನಿಭಾಯಿಸುವ, ಚಾಕಚತ್ಯತೆಯಿಂದರುವ ನಾಯಕ ಸಿದ್ದಪ್ಪ ಬಂಡಿ ಆಗಿದ್ದಾರೆ.
ಇನ್ನೂ, ಕೇವಲ ಗಜೇಂದ್ರಗಡ ತಾಲೂಕಿಗೆ ಸೀಮಿತವಾಗದೇ, ಜಿಲ್ಲೆಯಾದ್ಯಂತ ಸಿದ್ದಪ್ಪ ಬಂಡಿ ಪ್ರಭಾವ ಹೊಂದಿದ್ದಾರೆ. ರಾಜ್ಯ ರಾಜಕಾರಣದತ್ತ ಮುಖಮಾಡುವ ಲಕ್ಷಣಗಳು ಗೋಚರಿಸುತ್ತಿವೆ. ಮುಂಬರುವ ದಿನಗಳಲ್ಲಿ ಕ್ಷೇತ್ರ ಅಭಿವೃದ್ಧಿಗೆ ಸಿದ್ದಪ್ಪ ಬಂಡಿ ಅವರಿಗೆ ಸೂಕ್ತ ಸ್ಥಾನ ಮಾನ ನೀಡಲೇಕು ಎಂಬುದು ಎಲ್ಲರ ಆಶಯವಾಗಿದೆ..
52 ಸಮಾಜದ ಅಧ್ಯಕ್ಷ ಚಂಬಣ್ಣ ಚವಡಿ, ಪ್ರಭು ಚವಡಿ, ಅಪ್ಪು ಮತ್ತಿಕಟ್ಟಿ, ಶಿವಯ್ಯ ಚಕ್ಕಡಿಮಠ, ಅಶೋಕ ಶೆಟ್ಟರ, ಬಸವರಾಜ ಮ್ಯಾಗೇರಿ, ವೀರೇಶ ಸಂಗಮದ,
ರಾಜೇಶ್ವರಿ ಕಾರವಾಡಮಠ, ಲಕ್ಷ್ಮೀ ಚವ್ಹಾಣ ಸೇರಿದಂತೆ 80 ಜನರ ತಂಡ ನಿಗಮ ಮಂಡಳಿ ನೀಡುವಂತೆ ಮನವಿ ಮಾಡಿದ್ದಾರೆ.
Post a Comment