Kuknoor :
ಪ್ರಜಾ ವೀಕ್ಷಣೆ ಡಿಜಿಟಲ್ ಮಾಧ್ಯಮ : ಆಗಸ್ಟ್ ೧೫ ರಂದು ಲೋಕಾರ್ಪಣೆ
ಕೊಪ್ಪಳ ಜಿಲ್ಲೆ ಕುಕನೂರಿನ ಚಂದ್ರು ಭಾನಾಪುರ್ ಸುದ್ದಿ ಮಾಧ್ಯಮದಲ್ಲಿ ಈಗಾಗಲೇ ಗುರುತಿಸಿಕೊಂಡಿದ್ದಾರೆ. ಅವರು ಡಿಜಿಟಲ್ ಮಾಧ್ಯಮದ ಮೂಲಕ ಕ್ಷಣ ಕ್ಷಣದ ಮಾಹಿತಿ, ನೈಜತೆಯನ್ನ ಜನರಿಗೆ ತಲುಪಿಸಲು ಮುಂದಾಗುತ್ತಿದೆ. ಪ್ರಜಾ ವೀಕ್ಷಣೆ ಡಿಜಿಟಲ್ ಮಾಧ್ಯಮ ಇದೇ ಆಗಸ್ಟ್ ೧೫ ರಂದು, ಸ್ವಾತಂತ್ರ್ಯ ದಿನೋತ್ಸವದಂದೆ ಲೋಕಾರ್ಪಣೆ ಗೊಳ್ಳಲಿದೆ. ಇದು ಪ್ರಜೆಗಳಪರ ಹದ್ದಿನಕಣ್ಣು ಎಂಬ ಟ್ಯಾಗ್ ಲೈನ್ ಹೊಂದಿದ್ದು, ವಿಶೇಷವಾಗಿ ಗ್ರಾಮೀಣ ಬಾಗದ ಜನರಿಗೆ ಆರ್ಷಣೆಯ ಕೇಂದ್ರ ಬಿಂದುವಾಗಿದೆ.
ಜಿಲ್ಲಾ ವಾರ್ತಾಧಿಕಾರಿಗಳು, ಪ್ರಜಾವಾಣಿ ಪತ್ರಿಕೆಯ ಹುಬ್ಬಳ್ಳಿ ವಿಭಾಗದ ಮುಹಮ್ಮದ್ ಶರೀಫ್ ಕಾಡುಮಠ, ಸಂಸದರು, ಸಚಿವರು, ಶಾಸಕರು ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕುಕನೂರಿನ ಪ್ರವಾಸಿ ಮಂದಿರದಲ್ಲಿ ಆಗಸ್ಟ್ ೧೫ರ ಮಾಧ್ಯಾಹ್ನ ೧೨.೧೫ಕ್ಕೆ ಕಾರ್ಯಕ್ರಮ ನಡೆಯಲಿದೆ ಎಂದು ಕಿರಾ ನ್ಯೂಸ್ ಗೆ ಚಂದು ಭಾನಾಪುರ ಮಾಹಿತಿ ನೀಡಿದ್ದಾರೆ.
ಚಂದು ಭಾನಾಪು ನೇತೃತ್ವದ ಪ್ರಜಾ ವೀಕ್ಷಣೆ ಸುದ್ದಿ ಸಂಸ್ಥೆ ಮಾಧ್ಯಮ ಲೋಕದಲ್ಲಿ ಪ್ರಜ್ವಲಿಸಲಿ ಎಂದು ಶ್ಲಾಘಿಸೋಣ...
Post a Comment