-->
Bookmark

Kotabal : ನಕಲಿ ರಸಗೊಬ್ಬರ ಪೂರೈಕೆ ಆರೋಪ - ಕೃಷಿ ಇಲಾಖೆಗೆ ಮಾಹಿತಿ ನೀಡಿದ ರೈತರು - ರಸಗೊಬ್ಬರ ಪರೀಕ್ಷೆಗೆ ಮುಂದಾದ ಉಪ ನಿರ್ದೇಶಕರು

Kotabal : 

ನಕಲಿ ರಸಗೊಬ್ಬರ ಪೂರೈಕೆ ಆರೋಪ - ಕೃಷಿ ಇಲಾಖೆಗೆ ಮಾಹಿತಿ ನೀಡಿದ ರೈತರು - ರಸಗೊಬ್ಬರ ಪರೀಕ್ಷೆಗೆ ಮುಂದಾದ ಉಪ ನಿರ್ದೇಶಕರು 
ಗದಗ ಜಿಲ್ಲೆ ರೋಣ ತಾಲೂಕಿನ ಕೊತಬಾಳ ಗ್ರಾಮ ಪಂಚಾಯತಿಯ ತಳ್ಳಿಹಾಳ ಗ್ರಾಮದಲ್ಲಿ ನಕಲಿ ರಸಗೊಬ್ಬರ ಪತ್ತೆಯಾಗಿದೆ. 
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಗ್ರಾಮದಲ್ಲಿ ಬಿಲ್ ಇಲ್ಲದೇ ರಸಗೊಬ್ಬರ ಮಾರಾಟ ಮಾಡಲಾಗಿದೆ. ಜೊತೆಗೆ ಗೊಬ್ಬರವನ್ನ ನೀರಿನಲ್ಲಿ ನೆನೆಸಿಟ್ಟಾಗ ಮೂರು ತಾಸು ಬಳಿಕವೂ ಗೊಬ್ಬರ ಕರಗಿಲ್ಲ. ಗೊಬ್ಬರ ಚೀಲದ ಮೇಲೆ ಬ್ಯಾಚ್ ನಂಬರ್ ಸಹ ಇಲ್ಲ. ಮ್ಯಾನ್ಯುಪ್ಯಾಕ್ಚರ್ ಡೇಟ್ ಸಹ ಇಲ್ಲ. D.R.C ನಂಬರ್ ಸಹ ನಮೂದಿಸಿಲ್ಲ. ಹೀಗೆ ರೈತರ ಆರೋಪಕ್ಕೆ ಹತ್ತಾರು ಸಬುಬೂಗಳು ಇವೆ‌ ಎಂದು ಫಾರ್ಮರ್ ಪ್ರೋಡ್ಯೂಸರ್ ಆರ್ಗನೈಜೇಷನ್ ನಿರ್ದೇಶಕರಾದ ಪ್ರಭುಸ್ವಾಮಿ ಚನ್ನವೀರಯ್ಯ ವೀರಕ್ತಮಠ ಆರೋಪಿಸುತ್ತಾರೆ. ಇನ್ನೂ, ಪ್ರಭುಸ್ವಾಮಿ ಅವರಿಗೆ ಸ್ಥಳೀಯ ರೈತರು ಬೆಂಬಲಿಸಿ, ನಕಲಿ ರಸಗೊಬ್ಬರ ಇರುವ ಸ್ಥಳಕ್ಕೆ ತೆರಳಿದ್ದರು. 
ಅಂದಾಜು ಸುಮಾರು ೪೦೦ ಚೀಲ ಗೊಬ್ಬರವನ್ನ ಪೂರೈಸಲಾಗಿದೆ. ಇದರ ಅಂದಾಜು ವೆಚ್ಚ ನಾಲ್ಕುವೆ ಲಕ್ಷ ಎನ್ನಲಾಗುತ್ತಿದೆ. ಇದು ನಕಲಿ ಗೊಬ್ಬರ ಎನ್ನುವುದು ಗ್ರಾಮಸ್ಥರ ಆರೋಪವಾಗಿದೆ. 

ಜೊತೆಗೆ ರೋಣ ತಾಲೂಕಿನ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ರವೀಂದ್ರಗೌಡ ಪಾಟೀಲ್ ಅವರನ್ನ ಬೇಟಿಯಾಗಿ ಅವರ ಗಮನಕ್ಕೆ ತರಲಾಗಿದ್ದು, ಕೃಷಿ ಇಲಾಖೆ ಅಧಿಕಾರಿಗಳಿಂದ ಪ್ರಯೋಗಾಲಯಕ್ಕೆ ಕಳುಹಿಸಿ, ಪರಿಶೀಲನೆ ನಡೆಸಲಾಗುವುದು ಎಂದು ಭರವಸೆ ನೀಡಿದ್ದಾರೆ. 
ಸ್ವಾತಂತ್ರ್ಯ ದಿನೋತ್ಸವ ವಾಗಿರುವುದರಿಂದ ಬುಧವಾರ ಆಗಸ್ಟ್ ೧೬ ರಂದು ಅಧಿಕಾರಿಗಳು ಗೊಬ್ಬರ ಚೀಲದಿಂದ ಗೊಬ್ಬರಗಳನ್ನ ತೆಗೆದುಕೊಂಡು ಹೋಗಿ ಪರಿಶೀಲನೆ ನಡೆಸುವುದಾಗಿ ರೈತರಿಗೆ ಭರವಸೆ ನೀಡಿದ್ದಾರೆ. 

ಎರಡು ತಿಂಗಳ ಹಿಂದೆಯೇ ಗೊಬ್ಬರ ಪೂರೈಕೆಯಾಗಿದ್ದು, ಹೊಲಗಳಿಗೂ ಸಿಂಪಡನೆ ಮಾಡಲಾಗಿದೆ. ಕಳಪೆ ಗೊಬ್ಬರದಿಂದ ಬೆಳೆ ಮತ್ತು  ಪ್ರಮಾಣಿಕೃತ ಗೊಬ್ಬರ ಬಳಕೆಯೂ ಮಾಡಿ ಬೆಳೆಯನ್ನ ಬೆಳೆಸಿದ್ದಾರೆ. ಬೆಳೆ ಬಂದ ಬಳಿಕ ವ್ಯತ್ಯಾಸವನ್ನ ಗಮನಿಸಿದ ರೈತರು ಇಂದು ಏಕಾಏಕಿ ರೈತರ ತಂಡ ತೆರಳಿ ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಇನ್ನೂ, ಕಳಪೆ ರಸಗೊಬ್ಬರವನ್ನ ರೋಣ ತಾಲೂಕಿನ ಇತರೆ ಗ್ರಾಮದಲ್ಲೂ ಪೂರೈಕೆ ಮಾಡಲಾಗುತ್ತಿದ್ದು, ಪೂರೈಕೆ ಮಾಡದಂತೆ ಮತ್ತು ರೈತರು ಈ ನಕಲಿ ರಸಗೊಬ್ಬರ ಖರೀದಿಸದಂತೆ ಮನವಿ ಮಾಡಿದ್ದಾರೆ.
ರೈತರು ಆರೋಪಿಸುವಂತೆ ನಕಲಿ ರಸಗೊಬ್ಬರವಾಗಿದ್ದಲ್ಲಿ, ಇದೊಂದು ದೊಡ್ಡ ಸಮಸ್ಯೆ ತಲೆದೋರಿದಂತಾಗುತ್ತದೆ. 

ಅದೇನೇ ಇರಲಿ ತುಂಡು ಭೂಮಿಯಲ್ಲಿ ಜೀವನ ಸಾಗಿಸುವ ರೈತರೊಂದಿಗೆ ಚಲ್ಲಾಟವಾಡಿದಂತಾಗುತ್ತದೆ. ಇದೆಲ್ಲದಕ್ಕೂ ಕೊನೆ ಬೀಳಬೇಕಿದೆ.

ಪ್ರಭು ವೀರಕ್ತಮಠ, ಕೊತಬಾಳ
Post a Comment

Post a Comment