Gajendragad :
ಗಜೇಂದ್ರಗಡವನ್ನ ಮಾದರಿ ತಾಲೂಕು ಮಾಡುವ ಮಹದಾಸೆ : ನೂತನ ತಹಶೀಲ್ದಾರ್ ಕಿರಣಕುಮಾರ್ ಕುಲರ್ಣಿ
ಗಜೇಂದ್ರಗಡವನ್ನ ಮಾದರಿ ತಾಲೂಕಾಗಿ ಮಾಡುವ ಮಹದಾಸೆ ಇದೆ ಎಂದು ನೂತನ ತಹಶೀಲ್ದಾರ್ ಕಿರಣಕುಮಾರ್ ಕುಲಕರ್ಣಿ ಹೇಳಿದರು. ಸೋಮವಾರ ಸಂಜೆ ತಹಶೀಲ್ದಾರ್ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡು ಮಾತನಾಡಿದ ಅವರು, ಗಜೇಂದ್ರಗಡವನ್ನ ಮಾದರಿ ತಾಲೂಕನ್ನಾಗಿ ಮಾಡುವ ಇರಾದೆ ಇದೆ. ಅಭಿವೃದ್ಧಿ ಕಾರ್ಯಗಳಿದ್ದರೇ, ಅಗತ್ಯ ವಿದ್ದಲ್ಲಿ, ಶಾಸಕರು ಮತ್ತು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಕೆಲಸ ಮಾಡುವುದಾಗಿ ತಿಳಿಸಿದರು.
ಈ ಹಿಂದೆ ತಹಶೀಲ್ದಾರ್ ಆಗಿ ಕಾರ್ಯ ನಿರ್ವಹಿಸಿದ ರಜನಿಕಾಂತ್ ಕೆಂಗೇರಿ ಅವರು ಒಳ್ಳೆಯ, ಶಾಂತ ಸ್ವಭಾವದ ಅಧಿಕಾರಿ ಎಂದು ಹೇಳಿದರು.
ಈ ವೇಳೆ ನಿರ್ಗಮಿತ ತಹಶೀಲ್ದಾರ್ ರಜನಿಕಾಂತ್ ಕೆಂಗೇರಿ ಮಾತನಾಡಿ, ಗಜೇಂದ್ರಗಡದ ಜನತೆಯ ಸಹಾಯ ಸಹಕಾರ ಮರೆಯುವುದಿಲ್ಲ. ಚುನಾವಣೆ ಸೇರಿದಂತೆ ಎಲ್ಲ ಸಂಭರ್ಧಗಳಲ್ಲಿ ಸಹಕರಿಸಿದ್ದಾರೆ ಎಂದು ಸಹಾಯವನ್ನ ಸ್ಮರಿಸಿದರು.
ಆಹಾರ ನಿರೀಕ್ಷಕ ಮಂಜು ತಳ್ಳಿಹಾಳ ಅವರು ಸಹ ಎಲ್ಲರಿತಿಯ ಸಹಕಾರ ನೀಡುವುದಾಗಿ ತಿಳಿಸಿದರ
ಬಳಿಕ ನಿರ್ಗಮಿತ ತಹಶೀಲ್ದಾರ್ ರಜನಿಕಾಂತ್ ಕೆಂಗೇರಿ ಮತ್ತು ನೂತನ ತಹಶೀಲ್ದಾರ್ ಕಿರಣಕುಮಾರ್ ಕುಲಕರ್ಣಿ ಅವರನ್ನ ಅಧಿಕಾರಿಗಳು, ಸಾರ್ವಜನಿಕರು, ಸಂಘ ಸಂಸ್ಥೆಗಳ ಮುಖಂಡರು ಸನ್ಮಾನಿಸಿ, ಗೌರವಿಸಿದರು...
Post a Comment