ಮುಸ್ಲಿಂ ಸಮುದಾಯದ ಭವಿಷ್ಯ ಕಂಡುಕೊಳ್ಳಲು ಸಂಘಟಿತರಾಗಬೇಕಿದೆ - ಎಸ್. ಎಂ ಆರಗಿದ್ದಿ
ಮುಸ್ಲಿಂ ಸಮುದಾಯದ ಆರ್ಥಿಕ, ಶೈಕ್ಷಣಿಕ, ಸ್ಥಿತಿ ಅತ್ಯಂತ ಶೋಚನೀಯವಾಗಿದೆ ಎಂದು ಕರ್ನಾಟಕ ಮುಸ್ಲಿಂ ಯೂನಿಟ್ ಜಿಲ್ಲಾ ಅಧ್ಯಕ್ಷ ಸುಭಾನಸಾಬ ಆರಗಿದ್ದಿ ಹೇಳಿದರು.
ನಗರದ ಶಾದಿಮಹಲ್ ನಲ್ಲಿ ನಡೆದ ಕರ್ನಾಟಕ ಮುಸ್ಲಿಂ ಯೂನಿಟ್ ತಾಲೂಕ ಮಟ್ಟದ ಸಭೆಯನ್ನುದ್ದೇಶಿ ಮಾತನಾಡಿದ ಅವರು ಮುಸ್ಲಿಂ ಸಮುದಾಯದ ಭವಿಷ್ಯ ಕಂಡುಕೊಳ್ಳಲು ಸಂಘಟಿತರಾಗಬೇಕಿದೆ.ಈ ವರದಿ ಜಾರಿಯಿಂದ ಧಾರ್ಮಿಕ ಅಲ್ಪಸಂಖ್ಯಾತರಾಗಿರುವ ಮುಸ್ಲಿಮರಿಗೆ ರಾಜಕೀಯ ಹಾಗೂ ಶೈಕ್ಷಣಿಕ ಮೀಸಲಾತಿಯ ಲಾಭ ಕಂಡುಕೊಳ್ಳಲು ಸಾಧ್ಯವಿದೆ ಎಂದರು.
ಪ್ರಸ್ತಾವಿಕವಾಗಿ ರಾಜ್ಯ ಸಂಚಾಲಕ ಆರ್ ಕೆ ಬಾಗವಾನ ಮಾತನಾಡಿ, 2005 ರಲ್ಲಿ ಕೇಂದ್ರ ಸರ್ಕಾರ ಉನ್ನತ ಮಟ್ಟದ ಸಮಿತಿಯೊಂದನ್ನು ನೇಮಿಸಿ ದೇಶದ ಮುಸ್ಲಿಮರ ಆರ್ಥಿಕ, ಸಾಮಾಜಿಕ, ರಾಜಕೀಯ, ಧಾರ್ಮಿಕ ಸ್ಥಿತಿಗತಿ ಬಗ್ಗೆ ಅಧ್ಯಯನ ನಡೆಸಿ ವರದಿಯನ್ನು ಮಂಡಿಸುವಂತೆ ಅಧಿಕಾರ ನೀಡಿತ್ತು. ಅದರಂತೆ ರಾಜೇಂದ್ರ ಸಾಚಾರ ಸಮಿತಿಯು 2006 ರಲ್ಲಿ ವರದಿಯನ್ನು ನೀಡಿತು. ಆದರೆ, ಇಲ್ಲಿಯವರೆಗೆ ವರದಿ ಜಾರಿಗೆ ತಂದಿಲ್ಲ ಇದು ಸಮುದಾಯದ ಬಗ್ಗೆ ಸರ್ಕಾರಗಳಿಗಿರುವ ಅಸಡ್ಯ ನೀತಿಯನ್ನು ತೋರಿಸುತ್ತದೆ ಎಂದು ಆರೋಪಿಸಿದರು.
ನಮ್ಮ ಹಕ್ಕು ಪಡೆಯಲು ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗಿದೆ. ದೇಶದ 15 ಕೋಟಿ ಮುಸ್ಲಿಮರು ಅನ್ಯಾಯಕ್ಕೊಳಗಾಗಿದ್ದಾರೆ.ಇದೇ ಪರಿಸ್ಥಿತಿ ಮುಂದುವರೆದರೇ ಮುಸ್ಲಿಮರ ಬದುಕು ಅತ್ಯಂತ ಶೋಚನೀ ಯವಾಗುವುದರಲ್ಲಿ ಸಂದೇಹವಿಲ್ಲ ಎಂದರು.
ಅಂಜುಮಾನ್ ಇಸ್ಲಾಂ ಕಮೀಟಿ ಮಾಜಿ ಚೇರಮನ್ನರಾದ ಎ ಡಿ ಕೋಲಕಾರ, ರೋಣ ಕೆಎಂಯು ಅಧ್ಯಕ್ಷ ಎಸ್ ಎಮ್ ಮುಲ್ಲಾ, ರಾಜು ಸಾಂಗ್ಲೀಕಾರ, ಶಾಮೀದಸಾಬ ದಿಂಡವಾಡ, ಐ ಎಚ್ ಬಾಗವಾನ, ಮಾತನಾಡಿದರು.
ಈ ವೇಳೆ ಉಮ್ರಾಕ್ಕೆ ತೆರಳುತ್ತಿರುವ ಖಾಜೆಸಾಬ ಹಾಗೂ ಮೈಬುಸಾಬ ಬಾಗವಾನ ಅವರನ್ನು ಸನ್ಮಾನಿಸಲಾಯಿತು.
ಸಭೆಯಲ್ಲಿ ಅಂಜುಮಾನ್ ಇಸ್ಲಾಂ ಕಮೀಟಿ ಚೇರಮನ್ನ ಹಸನಸಾಬ ತಟಗಾರ, ಕೆ ಎಚ್ ಅಣ್ಣಿಗೇರಿ, ಬಿ ಎ ನಧಾಪ, ಸೈಯದಸಾಬ ಮುಧೋಳ, ಸೇರಿದಂತೆ ರಾಜೂರು, ದಿಂಡೂರು, ಗೋಗೇರಿ ಜಿಲಝರಿ ಸುತ್ತಮುತ್ತಲಿನ ಸಮುದಾಯ ಭಾಂದವರು ಭಾಗವಹಿಸಿದ್ದರು. ಫಯಾಜ್ ತೋಟದ ಸ್ವಾಗತಿಸಿದರು. ಅಂಜುಮಾನ್ ಇಸ್ಲಾಂ ಕಮೀಟಿ ಕಾರ್ಯದರ್ಶಿ ದಾವಲಸಾಬ ತಾಳಿಕೋಟಿ ನಿರೂಪಿಸಿದರು.
Post a Comment