-->
Bookmark

Gajendragad : ಅಕ್ರಮ ಅಕ್ಕಿ ದಾಸ್ತಾನು : ಆಹಾರ ಇಲಾಖೆ & ಸೈಬರ್ ಎಕನಾಮಿಕ್ ಆ್ಯಂಡ್ ನಾರ್ಕೋಟಿಕ್ ತಂಡ ದಾಳಿ

Gajendragad : 
ಅಕ್ರಮ ಅಕ್ಕಿ ದಾಸ್ತಾನು : ಆಹಾರ ಇಲಾಖೆ & ಸೈಬರ್ ಎಕನಾಮಿಕ್ ಆ್ಯಂಡ್ ನಾರ್ಕೋಟಿಕ್ ತಂಡ ದಾಳಿ 
ಗಜೇಂದ್ರಗಡ : 
ಸಮೀಪದ ಗೌಡಗೇರಿ ಗ್ರಾಮದ ಹತ್ತಿರದ ಗೋದಾಮಿನಲ್ಲಿ ಆಹಾರ ಇಲಾಖೆ ಮತ್ತು ಸೈಬರ್ ಎಕನಾಮಿಕ್ ಆ್ಯಂಡ್ ನಾರ್ಕೋಟಿಕ್ ೫ ಜನರ ತಂಡ ದಾಳಿ ನಡೆಸಿದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದಾರೆ. ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಪಡಿತರ ಅಕ್ಕಿ ಅಕ್ರಮ ಸಾಗಾಟ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತದೆ. ಅಕ್ರಮ ಅಕ್ಕಿ ಸಾಗಾಟಕ್ಕೆ ಗಜೇಂದ್ರಗಡ ಹಾಟ್ ಸ್ಪಾಟ್ ಆಗಿದೆ. ಹೀಗಾಗಿ, ಆಗೊಮ್ಮೆ ಈಗೊಮ್ಮೊ ಪಡಿತರ ಅಕ್ಕಿ ಸಾಗಾಟ, ಸಂಗ್ರಹದ ಸುದ್ದಿಗಳು ಬರುತ್ತಲೇ ಇವೆ. ಈಗ ಖಚಿತ ಮಾಹಿತಿ ಮೇರೆಗೆ ಆಹಾರ ಇಲಾಖೆ ಮತ್ತು ಸೈಬರ್ ಎಕನಾಮಿಕ್ & ನಾಕೋಟಿಕ್‌ನ ತಂಡ ದಾಳಿ ನಡೆಸಿದ್ದಾರೆ. 
ಈ ತಂಡದಲ್ಲಿ ಐವರು ಅಧಿಕಾರಿಗಳಿದ್ದು, ಗಜೇಂದ್ರಗಡ ಠಾಣೆಯ ಪಿಎಸ್‌ಐ ಸೋಮನಗೌಡ ಗೌಡರ ಜೊತೆಗಿದ್ದರು. ಈ ವೇಳೆ ಮಾತನಾಡಿದ, ಆಹಾರ ನಿರೀಕ್ಷಕ ಮಂಜುನಾಥ ತಳ್ಳಿಹಾಳ ತಾಲೂಕಿನಲ್ಲಿ ಅಕ್ರಮ ಅಕ್ಕಿ ದಾಸ್ತಾನು ಇದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ್ದೇವೆ. ಪಡಿತರ ಅಕ್ಕಿ ಹಾಗೆ ಇದ್ದು, ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು. 
ದಾಳಿ ನಡೆಯುತ್ತಿದ್ದಂತೆ ಗೋದಾಮಿನ ಕೀಗಾಗಿ ಅಧಿಕಾರಿಗಳ ತಂಡ ಮೂರು ತಾಸು ಕಾಯುವಂತಾಯ್ತು. ಬಳಿಕ ಗೋದಾಮಿನ ಬೀಗವನ್ನ ಒಡೆಯುವಂತಾಯಿತು. ಸಿನಿಮಿಯ ರೀತಿಯಲ್ಲಿ ಕಾರ್ಯಚರಣೆ ನಡೆಸಿದ್ದು, ಕಂಡು ಬಂತು.
Post a Comment

Post a Comment