Gajendragad :
ಉತ್ತರ ವಲಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ - ಬಾಲಕೀಯರ ಸರ್ಕಾರಿ ಮಾದರಿ ಕೇಂದ್ರ ಶಾಲೆ ವಿದ್ಯಾರ್ಥಿನಿಯರ ಮೇಲುಗೈ
ಗಜೇಂದ್ರಗಡ :
ಗಜೇಂದ್ರಗಡದ ಬಾಲಕೀಯರ ಸರ್ಕಾರಿ ಮಾದರಿ ಕೇಂದ್ರ ಶಾಲೆ ವಿದ್ಯಾರ್ಥಿನಿಯರು, ಗಜೇಂದ್ರಗಡ ಉತ್ತರ ವಲಯದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದಲ್ಲಿ ಭಾಗವಹಿಸಿ ಅಗ್ರಸ್ಥಾನ ಪಡೆದಿದ್ದಾರೆ.
ಸರಸ್ವತಿ ಮಾಳೋತ್ತರ್ ೧೦೦ ಮೀಟರ್ ಓಟದಲ್ಲಿ ದ್ವಿತೀಯ, ಜ್ಯೋತಿ ಮಾದರ ೨೦೦ ಓಟದಲ್ಲಿ ದ್ವೀತಿಯ ಮತ್ತು ೪೦೦ ಮೀಟರ್ ಓಟದಲ್ಲಿ ತೃತೀಯ ಸ್ಥಾನ, ಲಕ್ಷ್ಮೀ ಮಂಗಳೂರ ೬೦೦ ಮೀಟರ್ ಓಟದಲ್ಲಿ ದ್ವಿತೀಯ, ಸರಸ್ವತಿ ಮಾಳೊತ್ತರ ೮೦ ಮೀಟರ್ ಅಡೆತಡೆ ಓಟದಲ್ಲಿ ಪ್ರಥಮ ಹಾಗೂ ಜ್ಯೋತಿ ಮಾದರ ದ್ವಿತೀಯ ೪×೧೦೦ ಮೀಟರ್ ರೀಲೆಯಲ್ಲಿ ದಿವ್ಯಾ ಡೊಳ್ಳಿನ, ಜ್ಯೋತಿ ಮಾದರ, ಸರಸ್ವತಿ ಮಾಳೋತ್ತರ, ಸಂಜನಾ ಕೇಶಣ್ಣವರ್, ಪ್ರಥಮ ಸ್ಥಾನ ಪಡೆದಿದ್ದಾರೆ. ಜಯಾ ಬಾಗವಾನ ಗುಂಡು ಎಸೆತದಲ್ಲಿ ಪ್ರಥಮ ಮತ್ತು ಚಕ್ರ ಎಸೆತದಲ್ಲಿ ಪ್ರಥಮ ಅಕ್ಷತಾ ವಾಲಿಕಾರ ದ್ವಿತೀಯ ಸ್ಥಾನ ಪಡೆದಿದ್ದಾರೆ. ದಿವ್ಯಾ ಡೊಳ್ಳಿನ ಉದ್ದ ಜಿಗಿತದಲ್ಲಿ ಪ್ರಥಮ, ಎತ್ತರ ಜಿಗಿತದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಗುಂಪು ಆಟ ಕಬಡ್ಡಿಯಲ್ಲಿ ಶಾಲೆಗೆ ಪ್ರಥಮ ಸ್ಥಾನ ಲಭಿಸಿದೆ.
ಭಾಗವಹಿಸಿದ ಎಲ್ಲ ವಿದ್ಯಾರ್ಥಿನಿಯರಿಗೆ ಪ್ರಧಾನ ಗುರುಗಳಾದ ಬಿ.ಎಂ ಹಿರೇಮಠ, ಸಹ ಶಿಕ್ಷಕರಾದ ಐ. ವಿ ಕರ್ಣೇ, ಎಸ್. ಹೆಚ್ ಬಾಗವಾನ, ಟಿ.ಜಿ ಸೋನಾರ, ಕೆ.ಹೆಚ್ ಕೊತಬಾಳ, ಡಿ.ಎಂ ಬಡಿಗೇರ್, ಎಸ್.ಕೆ ಮಠದ, ಸಿ.ಕೆ ಹಾರೋಗೇರಿ, ಶಿವರುದ್ರಮ್ಮ, ವಿ.ಡಿ ಕರ್ಣೇ, ರಾಜು ಬೆನವಾಡಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಮನೋಹರ ಕಾಟ್ವಾ ಸದಸ್ಯರಾದ ಕಳಕಪ್ಪ ರಾಠೋಡ, ಸಿ.ಆರ್. ಪಿ ಕೆ.ಎಸ್ ವನ್ನಾಲ್ ಸಲ್ಲಿಸಿದ್ದಾರೆ.
ಎಸ್.ಡಿ.ಎಂ.ಸಿ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಶಿಕ್ಷಕರು ಶಾಲೆಗೆ ೩೦ ಜೊತೆ ಕ್ರೀಡಾ ಸಮವಸ್ತ್ರವನ್ನ ದೇಣಿಗೆ ರೂಪದಲ್ಲಿ ನೀಡಿದ್ದನ್ನು ಸ್ಮರಿಸಬಹುದು..
Post a Comment