-->
Bookmark

Gajendragad : ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ಷಣಾ ಪಡೆಗಳಿಗೆ ಸೇರಲಿ : ಅಶೋಕ ಗಾಣದಾಳ

Gajendragad : 
ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ಷಣಾ ಪಡೆಗಳಿಗೆ ಸೇರಲಿ : ಅಶೋಕ ಗಾಣದಾಳ

ಗಜೇಂದ್ರಗಡ ನಗರದ ಜಗದ್ಗುರು ತೋಂಟದಾರ್ಯ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿ ಸಂಸತ್ತು ಉದ್ಘಾಟನೆ ಕಾರ್ಯಕ್ರಮ ನಡೆಯಿತು.  ಕಾರ್ಯಕ್ರಮ ಉದ್ಘಾಟಿಸಿ ಮಾತನಾದ ಆರ್ಮಿ ಜ್ಯೂನಿಯರ್ ಕಮಿಷನರ್, ಆಫೀಸರ್ ಆಶೋಕ ಗಾಣದಾಳ, " ದೇಶ ಸೇವೆ ಈಶ ಸೇವೆ ಎನ್ನುವಂತೆ ರಾಷ್ಟ್ರಸೇವೆಯಲ್ಲಿ ಎಲ್ಲರೂ ತೊಡಗಬೇಕು ಎಂದರು. ಸೈನಿಕರ ಹಾಗೆ ವಿದ್ಯಾರ್ಥಿ ಜೀವನದಲ್ಲೂ ಶಿಸ್ತನ್ನು ಅಳವಡಿಸಿಕೊಂಡಲ್ಲಿ ಮಾತ್ರ ಸಾಧನೆ ಸಾಧ್ಯ ಎಂದು ವಿದ್ಯಾರ್ಥಿಗಳುಗೆ ಕಿವಿ ಮಾತು ಹೇಳಿದರು. 1999ರ ಕಾರ್ಗಿಲ್ ಯುದ್ಧ ನಡೆದ ಸಂದರ್ಭದಲ್ಲಿ ಎದುರಿಸಿದ ನೈಜ ಘಟನೆಗಳ ವಿವರಣೆ ನೀಡಿದ ಅವರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ಷಣಾ ಪಡೆಗಳಿಗೆ ಸೇರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. 
ಗಜೇಂದ್ರಗಡ ಪೊಲೀಸ್, ಠಾಣೆಯ ಪಿಎಸ್‌ಐ, ಸೋಮನಗೌಡ ಗೌಡರ ಮಾತನಾಡಿ "ಇಂದಿನ ಮಕ್ಕಳೆ ನಾಳೆಯ ಪ್ರಜೆಗಳು.  ವಿದ್ಯಾರ್ಥಿಗಳು ತಮಗೆ ನೀಡಿದ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸಬೇಕು. ಯಾವುದೇ ಸಂದರ್ಭದಲ್ಲಿ ತೊಂದರೆ ಎದುರಾದಾಗ ಮುಕ್ತವಾಗಿ ಠಾಣೆಗೆ ಸಂದೇಶ ನೀಡಬಹುದು ಹಾಗೂ 112 ಸಹಾಯವಾಣಿ ಬಳಸಬಹುದು ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು. 
ಈ ಕಾರ್ಯಕ್ರಮದಲ್ಲಿ ಶಾಲಾ ಮತ್ತು ಕಾಲೇಜು ಸಂಸತ್ತಿಗೆ ಆಯ್ಕೆಯಾದ ಎಲ್ಲಾ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರಮಾಣ ವಚನ ಬೋಧಿಸಿ ಎಲ್ಲಾ ಪ್ರತಿನಿಧಿಗಳಿಗೆ ಬ್ಯಾಡ್ಜಗಳನ್ನ ವಿತರಿಸಲಾಯಿತು. ಪಿ.ಯು. ಕಾಲೇಜು ಸಂಪತ್ತಿನ ಅಧ್ಯಕ್ಷರಾಗಿ ಸಾಗರ ಪವಾರ, ಕಾರ್ಯದರ್ಶಿಯಾಗಿ ಲಬ್ದಿ ಭಾಗಮಾರ ಹಾಗೂ ಸಿಬಿಎಸ್‌ಇ ಶಾಲೆಯ ವಿದ್ಯಾರ್ಥಿ ಸಂಸತ್ತಿನ ಅಧ್ಯಕ್ಷರಾಗಿ ಅಭಿಷೇಕ ಬೂದಿಹಾಳ, ಕಾರ್ಯದರ್ಶಿಯಾಗಿ ಆರ್ಶಿಯಾನಾಜ್ ಮೊಮಿನ್ ಅಯ್ಕೆಯಾಗಿದ್ದರು. ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.  ಪ್ರಾಚಾರ್ಯರಾದ ಸಂಗಮೇಶ ಬಾಗೂರ, ಮುಖ್ಯೋಪಾಧ್ಯಾಯರಾದ ಕವಿತಾ ಪಾಟೀಲ ಹಾಗೂ ಎಲ್ಲ ಶಿಕ್ಷಕ - ಶಿಕ್ಷಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿವಲೀಲಾ ಪೊಲೀಸಪಾಟೀಲ ಸ್ವಾಗತಿಸಿದರು. 
ನೀಲಾ ಗದಗೇರಿ ವಂದಿಸಿದರು. ಉಪನ್ಯಾಸಕ, ಹುತ್ತಪ್ಪ ಮಾರನಬಸರಿ ಮತ್ತು ಲಕ್ಷ್ಮಿ, ಓದಸೂರಮಠ ಸೇರಿದಂತೆ ಶಾಲಾ, ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
Post a Comment

Post a Comment