-->
Bookmark

Ron : ಸಾರ್ವಜನಿಕ ಗ್ರಂಥಾಲಯ ಉಳಿಸಿ ಬೆಳೆಸಿ - ಗ್ರಂಥ ಪಾಲಕಿ ಬಸಮ್ಮ ತಳವಾರ



Ron :

ಸಾರ್ವಜನಿಕ ಗ್ರಂಥಾಲಯ ಉಳಿಸಿ ಬೆಳೆಸಿ - ಗ್ರಂಥ ಪಾಲಕಿ ಬಸಮ್ಮ ತಳವಾರ 

ರೋಣ ಪಟ್ಟಣದ ಸಾರ್ವಜನಿಕ ಗ್ರಂಥಾಲಯ ಹಲವಾರು ದಶಕಗಳಿಂದ ಸಾರ್ವಜನಿಕರ ಸೇವೆ ಮಾಡುತ್ತಿದೆ. ಆಗಸ್ಟ್ ೧೨ ರಂದು ಗ್ರಂಥಪಾಲಕರದಿನ ಆಚರಿಸಲಾಗುತ್ತದೆ. ಅದರಂಗೆ ರೋಣದ ಸಾರ್ವಜನಿಕ ಗ್ರಂಥಾಲಯದಲ್ಲೂ ಗ್ರಂಥಪಾಲಕರ ದಿನ ಆಚರಿಸಲಾಯಿತು. ಗ್ರಂಥಪಾಲಕರಾದ ಬಸಮ್ಮ ತಳವಾರ ನೇತೃತ್ವದಲ್ಲಿ ಕಾರ್ಯಕ್ರಮ ಆಚರಿಸಲಾಯ್ತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಗ್ರಂಥಪಾಲಕಿ ಬಸಮ್ಮ ತಳವಾರ,
ದೇಶದಲ್ಲಿ ಪ್ರತಿ ವರ್ಷ ಆಗಷ್ಟ್ ೧೨ ರಂದು ಗ್ರಂಥಪಾಲಕರ ದಿನ ಆಚರಿಸಲಾಗುತ್ತದೆ. ಗ್ರಂಥಾಲಯ ಪಿತಾಮಹ ಎಂಬ ಗೌರವಕ್ಕೆ ಪಾತ್ರರಾಗಿರುವ ಎಸ್.ಎಆರ್ ರಂಗನಾಥನ್ ಅವರ ಜನ್ಮ ದಿನ. ಹೀಗಾಗಿ ಎಲ್ಲೆಡೆ ಗ್ರಂಥ ಪಾಲಕರ ದಿನ ಆಚರಿಸಲಾಗುತ್ತದೆ ಎಂದು ಬಸಮ್ಮ ತಳವಾರ ಹೇಳಿದರು. ಜೊತೆಗೆ ಸಾರ್ವಜನಿಕರು ಗ್ರಾಂಥಾಲಯದ ಲಾಭ ಪಡೆಯುವಂತೆ ಕರೆ‌ ನೀಡಿದರು.
ಹಲವಾರು ಪುಸ್ತಕಗಳಿದ್ದು, 
ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಸಾರ್ವಜನಿಕರು ಓದಿ ಜ್ಞಾನ ವೃದ್ಧಿಸಿಕೊಳ್ಳಿ ಎಂದು ಕರೆ‌ ನೀಡಿದರು. 
ಸಾರ್ವಜನಿಕರು ಹೆಚ್ಚಾಗಿ ಓದಿನೆಡೆಗೆ ಆಸಕ್ತಿ ತೋರುತ್ತಿದ್ದಾರೆ. ಇದು ಗ್ರಂಥಾಲಯ ಬೆಳವಣಿಗೆಗೆ ದಾರಿ ಮಾಡಿಕೊಡುತ್ತದೆ. ಮೊಬೈಲ್ ನಲ್ಲಿ ಓದುವುದಕ್ಕೂ, ಪುಸ್ತಕ ಪೇಪರ್ ಗಳ ಹಾರ್ಡ್ ಕಾಪಿ ಓದುವುದಕ್ಕೂ ವ್ಯತ್ಯಾಸವಿದೆ ಎಂದು ಬಸಮ್ಮ ತಳವಾರ ಅಭಿಪ್ರಾಯ ಪಟ್ಟರು. ಇದೇ ವಳೆ, ಸಾರ್ವಜನಿಕರು ಗ್ರಂಥಪಾಲಕರ ದಿನಾಚರಣೆಯಲ್ಲಿ ಭಾಗವಹಸಿ,  ಶುಭ ಹಾರೈಸಿದರು‌. 

ಮುತ್ತಣ್ಣ ಅವಳಪ್ಪನವರ್, ಪರ್ತಗೌಡ ರಾಯನಗೌಡ್ರ, ಗಣೇಶ್ ಕುಲಕರ್ಣಿ, ಬಸನಗೌಡ ಬಸನಗೌಡ್ರ, ಶಿಕ್ಷಕರಾದ ನಿರ್ಮಲಾ ನಂದಿಕೋಲಮಠ, ಹೇಮಾ ಸೋಗಿ ಹಿರೇಮಠ, ಗ್ರಾಂಥಾಲಯ ಸಿಬ್ಬಂದಿ ಶಾಂತಾ ಚಲವಾದಿ ಸೇರಿದಂತೆ‌ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು  ಭಾಗವಹಿಸಿದ್ದರು. 

ಬಸಮ್ಮ ತಳವಾರ, ಗ್ರಂಥಪಾಲಕರು ರೋಣ
Post a Comment

Post a Comment