Gadag :
32 ರೈತ ಕಾರ್ಮಿಕ ವಿರೋಧಿ ನೀತಿ ಕೈಬಿಡಲು ಒತ್ತಾಯ - ಮುಖಂಡ ಮಾರುತಿ ಚಿಟಗಿ ನೇತೃತ್ವದಲ್ಲಿ ಪ್ರತಿಭಟನೆ, ಮನವಿ
ಕಳೆದ 9 ವರ್ಷಗಳ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕಡೆ ಹೊರಳಿ ನೋಡಿದರೆ ಜನಸಾಮಾನ್ಯರ ಬೇರನ ಮತ್ತು ಜೀವನೋಪಾಯದ ಮೇಲೆ ಪರಿಣಾಂತಿಕ ದಾಳಿಯನ್ನು ಎಸಗಿರುವರು ನಮಗಿಂದು ವೇದ್ಯವಾಗುತ್ತಿದೆ. ಸಂಕಷ್ಟಗಳ ಸರವಾಲೆಯನ್ನೇ `ಜನರಿಗೆ ಉಡುಗೊರೆಯಾಗಿ ಕೇಂದ್ರ ಸರ್ಕಾರ ನೀಡಿದೆ. ನಿರಾರಗ ಪಡಂಭೂತದಂತೆ ಹೆಚ್ಚುತ್ತಿದೆ. ಗೋಟುಗಳ ಅಮಾನ್ಯಿಕರಣದ ತರುವಾಯ ಜನರು ಅಂಚಿಗೆ ತಳ್ಳಿಬಿಟ್ಟರು. ಕಪ್ಪು ಹಣ ಬೆಳಿಯಾಯಿತೇ ವಿನಃ ಇನ್ನೇನ ಅಲ್ಲ. ಈ ಸತ್ಯ ಹೊರಬರಲು ಕೇಂದ್ರ ಸರ್ಕಾರ ರೈತ ಪರ ಹೊರಡಿಸಬೇಕಾಗಿದೆ. ಬಡತನ ಹೆಚ್ಚಳವಾಗಿ ಆರ್ಥಿಕ ಕುಸಿತ ತಲೆದೋರಿದ್ದು, ನಿರುದ್ಯೋಗ ಹೆಚ್ಚಳದಿಂದಾಗಿ ಯುವಕರು ಹಶಾರರಾಗಿದ್ದಾರೆ.
ಗಣನೀಯವಾದ ದರ ಏರಿಕೆ ಒಂದೆಡೆಯಾದರೆ ವೇತನ ಹೆಚ್ಚಳವಿಲ್ಲದೇ, ಹಸಿವಿಗೆ ಸೂಚ್ಯಂಕ ಅಪಾಯಕಾರಿ ಮಟ್ಟಕ್ಕೆ ಬಂದಿದೆ.
ಕೇಂದ್ರ ಸರ್ಕಾರದ ಅಧೀನದಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಬಿದ್ದಿವೆ. ಸಾರ್ವಜನಿಕ ಉದ್ದಿಮೆಗಳನ್ನು ಖಾಸಗಿಯವರಿಗೆ ಮಾರಟ ಮಾಡಲಾಗುತ್ತಿದ್ದು, ಅವರು ದೊಡ್ಡ ಸಂಖ್ಯೆಯಲ್ಲಿ ನೌಕರರನ್ನು ವಜಾಗೊಳಿಸುತ್ತಿದ್ದಾರೆ. ಗುತ್ತಿಗೆ ವ್ಯವಹಾರದಲ್ಲಿ ನೇಮಕಾತಿಯನ್ನು ಮಾಡಿಕೊಂಡು ಇತರ ಸೌಲಭ್ಯಗಳಾದ ಪಿಎಫ್, ಇಎಸ್‌ಐ ಮತ್ತು ಕನಿಷ್ಠ ವೇತನ ನೀಡಿದೆ. ಕಾರ್ಮಿಕರನ್ನು ವಂಚಿಸಲಾಗುತ್ತಿದೆ. ಕೋವಿಡ್ ನಂತರ ಜೀವನೋಪಾಯ ಕಷ್ಟಕರವಾಗಿದೆ. ಮಧ್ಯ ಪ್ರವೇಶಿಸಬೇಕಾದ ಸರ್ಕಾರ ಕೈ ಕಟ್ಟಿ ಕುಳಿತಿದೆ. ದೆಹಲಿ ಹೊರವಲಯದಲ್ಲಿ ಒಂದು ವರ್ಷಗಳ ಕಾಲ ನಡೆದ ರೈತರ ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ ಅವರಿಗೆ ಕೊಟ್ಟ ಮಾತಿನಿಂದ ಹಿಂದೆ ಸರಿದು ಸಂಬಿಕೆ ದ್ರೋಹ ಮಾಡಿ ವಚನಭ್ರಷ್ಟವಾಗಿದೆ.
ಸಮಸ್ಯೆಗಳು ಮುಗಿಲೆತ್ತರಕ್ಕೆ ಬೆಳೆದಿರುವಾಗ ಕಾರ್ಮಿಕ ವರ್ಗದ ಬೇಡಿಕೆಗಳಿಗೆ ಸ್ಪಂಧಿಸದ ಕೇಂದ್ರ ಸರ್ಕಾರ ಬಹಿರಂಗವಾಗಿ, ಕಾರ್ಪೋರೇಟ್ ಕಂಪನಿಗಳ ಪರವಾಗಿ ನಿಂತಿದೆ. ಅವರಿಗೆ ಸಹಾಯ ಮಾಡಲು ಇತ್ತೀಚೆಗೆ ಫ್ಯಾಕ್ಟರಿ ಕಾಯ್ದೆಗೆ ತಿದ್ದುಪಡಿ ತಂದು, ದಿನದ ದುಡಿತದ ಅವಧಿಯನ್ನು 12 ಗಂಟೆಗಳಿಗೆ ಹೆಚ್ಚಿಸಿದೆ. ಕಾರ್ಮಿಕ ಸಮುದಾಯ ಹಲವಾರು ಬಲಿದಾನ, ಹೋರಾಟಗಳಿಂದ ಗಳಿಸಿರುವ ಕಾರ್ಮಿಕ ಕಾಯ್ದೆಗಳನ್ನು ರದ್ದುಗೊಳಿಸಿ, ಲೇಬರ್ ಕೋಡಗಳನ್ನು ತರಲಾಗುತ್ತಿದೆ. ಇದು ಕಾರ್ಮಿಕ ವರ್ಗಕ್ಕೆ ಮಾರಕವಾಗಿದೆ. ಕಾರ್ಪೊರೇಟ್ ಕಂಪನಿಗಳಿಗೆ ಲಕ್ಷಾಂತರ ಕೋಟಿ ರೂಪಾಯಿಗಳ ರಿಯಾಯತಿಗಳನ್ನು ಘೋಷಿಸಲಾಗಿದ್ದು ಅವರ ಸಾಲಗಳನ್ನು ಮನ್ನಾ ಮಾಡಲಾಗಿದೆ.
ಇಂತಹ ಪರಿಸ್ಥಿತಿಯಲ್ಲಿ ಹೋರಾಟದ ಮುಂದುವರಿಕೆಯಾಗಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ, ವಿವಿಧ ಹಂತಗಳಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸಲು ಸಜ್ಜಾಗಿದೆ. ಇದರ ಭಾಗವಾಗಿ, ದೇಶದಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರ ಮತ್ತು ರಾಜಧಾನಿಗಳಲ್ಲಿ ಧರಣಿಯನ್ನು ನಡೆಸಿ, ಮನವಿಯನ್ನು ತಮಗೆ ಸಲ್ಲಿಸುತ್ತಿದ್ದೇವೆ, ಕಾರಣ ತಾವು ಮಧ್ಯ ಪ್ರವೇಶಿಸಿ, ಕೇಂದ್ರ ಸರ್ಕಾರ ಈ ಕೆಳಕಂಡ ಬೇಡಿಕೆಗಳನ್ನು ಡೇರಿಸುವಂತೆ ಸೂಚಿಸಬೇಕೆಂದು ವಿನಂತಿಸುತ್ತೇವೆ ಎಂದು ಮಾರುತಿ ಚಿಟಗಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಲಾಯ್ತು. ಈ ವೇಳಡ, ಕಾರ್ಮಿಕ ಸಂಘಟನೆಗಳ ಮುಖಂಡರು, ಹೋರಾಟಗಾರರು ಮಾರುತಿ ಚಿಟಗಿ ಅವರಿಗೆ ಸಾತ್ ನೀಡಿದರು.
Post a Comment