Bengaluru :
ತೆಂಗಿನಗರಿಯಲ್ಲಿ ಪರಿಸರ ಸ್ನೇಹಿ ಸ್ಟ್ರಾ- ವಿದೇಶಗಳಲ್ಲೂ ಬೇಡಿಕೆ
ಬೆಂಗಳೂರು :
ರಾಜ್ಯದ 'ಸನ್ ಬರ್ಡ್' ಸಂಸ್ಥೆಯು ತೆಂಗಿನಗರಿಯಿಂದ ತಯಾರಿಸುತ್ತಿರುವ ಪರಿಸರ ಸ್ನೇಹಿ ಸ್ಟ್ರಾಗಳಿಗೆ 10 ದೇಶಗಳಿಂದ ಬೇಡಿಕೆ ಬಂದಿದ್ದು, 15 ದೇಶಗಳಿಗೆ ಮಾದರಿ ಕಳುಹಿಸಲಾಗಿದೆ.
ಬೆಂಗಳೂರು, ಗೋವಾದ ಸ್ಟಾರ್ ಹೋಟೆಲ್‌ಗಳು ಪೇಪರ್ ಸ್ಟ್ರಾ ಬಳಕೆ ಕೈ ಬಿಟ್ಟಿದ್ದು, ತೆಂಗಿನಗರಿಯ ಸ್ಟ್ರಾಗಳನ್ನೇ ಹೆಚ್ಚು ಬಳಸುತ್ತಿವೆ. ಈ ಹೋಟೆಲ್‌ಗಳಿಗೆ 'ಸನ್‌ಬರ್ಡ್' ಸಂಸ್ಥೆಯು ತಿಂಗಳಿಗೆ 10 ರಿಂದ 15 ಲಕ್ಷ ಸ್ವಾಗಳನ್ನು ಪೂರೈಸುತ್ತಿದೆ.
ವಿದೇಶಗಳಲ್ಲೂ ಪೇಪರ್ ಸ್ಟ್ರಾ ಬೇಡಿಕೆ ಹೆಚ್ಚುತ್ತಿದೆ. ಬೆಲ್ಲಿಯಂ, ನೆದರ್ಲೆಂಡ್, ಕೆನಡಾ, ಫಿಲಿಫೈನ್ಸ್, ಜರ್ಮನಿ, ಸ್ಪೇನ್ ದೇಶಗಳಿಂದಲೂ ಪೇಪರ್ ಸ್ಟ್ರಾ ಪೂರಸೈಸುವಂತೆ ಬೇಡಿಕೆ ಬಂದಿದೆ. ಮೂರು ತಿಂಗಳಿಗೆ 60 ಲಕ್ಷ ಸ್ಮಾ ಪೂರೈಸುವಂತೆ ವಿದೇಶಗಳಿಂದ ಬೇಡಿಕೆ ಬರುತ್ತಿದೆ. ಆದರೆ, ಸದ್ಯಕ್ಕೆ ಅಷ್ಟೊಂದು ಪ್ರಮಾಣದಲ್ಲಿ ಸ್ಟ್ರಾ ಪೂರೈಸುವ ವ್ಯವಸ್ಥೆ ನಮ್ಮಲ್ಲಿ ಇಲ್ಲ. ಮೈಸೂರು ಜಿಲ್ಲೆಯ ಬನ್ನೂರಿನಲ್ಲಿರುವ ಘಟಕದಲ್ಲಿ ಹೊಸ ಯಂತ್ರ ಅಳವಡಿಸಲಾಗಿದ್ದು ಅಲ್ಲಿ ಒಂದು ನಿಮಿಷದಲ್ಲಿ 60 ಸ್ಟ್ರಾಗಳು ತಯಾರಾಗುತ್ತಿದೆ. ಈ ಘಟಕವು ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಿದರೆ ಹೆಚ್ಚಿನ ಪ್ರಮಾಣದಲ್ಲಿ ಸ್ಮಾಗಳನ್ನು ಪೂರೈಸಲು ಸಾಧ್ಯವಾಗಲಿದೆ' ಎಂದು ಕಂಪನಿಯ ಸಹ ಸಂಸ್ಥಾಪಕ ಚಿರಾಗ್ ತಿಳಿಸಿದ್ದಾರೆ.
`ಬೆಂಗಳೂರಿನ ಡೇರಿ ವೃತ್ತದ ಬಳಿಯಿರುವ ಕ್ರೈಸ್ಟ್ ವಿ.ವಿಯ ಇಂಗ್ಲಿಷ್ ಪ್ರಾಧ್ಯಾಪಕ ಸಾಜಿ ವರ್ಗೀಸ್ ಅವರು ಕ್ಯಾಂಪಸ್‌ನಲ್ಲಿ ಬಿದ್ದಿದ್ದ ತೆಂಗಿನಗರಿಯನ್ನು ಗಮನಿಸಿ ಅದರಿಂದ ಸ್ಟ್ರಾ ತಯಾರಿಕೆಗೆ 2017ರಲ್ಲಿ ಯೋಜನೆ ರೂಪಿಸಿದ್ದರು. ಈಗ ಉತ್ಪನ್ನ ಹಾಗೂ ಯಂತ್ರಕ್ಕೆ ಪೇಟೆಂಟ್ ಲಭಿಸಿದೆ. ಅವರ ನೇತೃತ್ವದಲ್ಲಿ ಸಿಎಸ್‌ಆರ್ ನಿಧಿ ಬಳಸಿಕೊಂಡು ಸ್ಟ್ರಾ ತಯಾರಿಸುತ್ತಿದ್ದೇವೆ. ಮೂರು ವರ್ಷಗಳಿಂದ ಸಂಶೋಧನೆ ನಡೆಯುತ್ತಲೇ ಇತ್ತು. ಆರಂಭದಲ್ಲಿ ಒಂದು ಪದರದ ಸ್ಕ್ಯಾ ತಯಾರಿಸುತ್ತಿದ್ದೆವು. ಸದ್ಯ ನಾಲ್ಕು ಪದರಗಳ ಸ್ಟ್ರಾ ತಯಾರಿಸಿ ಮಾರುಕಟ್ಟೆಗೆ ಪರಿಚಯಿಸಿದ್ದೇವೆ' ಎಂದು ವಿವರ ನೀಡಿದರು.
ಬನ್ನೂರು, ಕಾಸರಗೋಡು, ತಮಿಳುನಾಡಿನ ಎರಡು ಸ್ಥಳಗಳಲ್ಲಿ ತಯಾರಿಕೆ ಘಟಕ ಸ್ಥಾಪಿಸಲಾಗಿದೆ. ಪ್ರತಿ ಸ್ಟ್ರಾದ ಬೆಲೆ 1.20 ಪೈಸೆಯಿಂದ ರಿಂದ 1 2.50 ಪೈಸೆ ವರೆಗೆ ಇದೆ.
'ಪ್ರತಿವರ್ಷ ತೆಂಗಿನಮರ ನೈಸರ್ಗಿಕವಾಗಿ ಗರಿಯನ್ನು ಕಳೆದುಕೊಳ್ಳುತ್ತದೆ. ಅವುಗಳನ್ನು ವಿಲೇವಾರಿ ಮಾಡುವುದು ರೈತರಿಗೆ ಕಷ್ಟ. ಗ್ರಾಮೀಣ ಪ್ರದೇಶದಲ್ಲಿ ಕಡ್ಡಿ ತೆಗೆದು ಪೊರಕೆ ತಯಾರಿಸುತ್ತಾರೆ. ಉಳಿದಿರುವುದನ್ನು ಬೆಂಕಿಗೆ ಹಾಕಿ ಸುಡುತ್ತಾರೆ. ನಾವು ಆ ಗರಿಗಳನ್ನೇ ಖರೀದಿಸಿ ಸ್ಟಾ ತಯಾರಿಸುತ್ತಿದ್ದೇವೆ' ಎಂದು ಸಾಜಿ ವರ್ಗೀಸ್ ಹೇಳಿದರು.
'ಸ್ಮಾವನ್ನು ಮೂರು ಗಂಟೆವರೆಗೆ ಯಾವುದೇ ಪಾನೀಯದಲ್ಲಿ ಬಳಸಬಹುದು. ಒಂದು ಬಿದಿರಿನ ಸ್ಕ್ಯಾತಯಾರಿಸಲು 730 ವೆಚ್ಚವಾಗಲಿದ್ದು ದುಬಾರಿ ಎನಿಸಿದೆ. ಈ ಸ್ಟಾಗೆ ತಯಾರಿಕೆ ಸುಲಭ' ಎಂದು ವಿವರಿಸಿದರು.
'ಮಂಡ್ಯ ತುಮಕೂರು ಹಾಸನ ಜಿಲ್ಲೆಗಳ ರೈತರಿಂದ ತೆಂಗಿನಗರಿಗಳನ್ನು ಖರೀದಿಸುತ್ತೇವೆ. ಒಂದು ಗರಿಯಿಂದ 200ರ ವರೆಗೆ ಸ್ಟ್ರಾ ತಯಾರಿಸಬಹುದು. ಅದು ಆರು ತಿಂಗಳ ಬಾಳಿಕೆ ಬರುತ್ತದೆ. ಬಳಸಿದ ಮೇಲೆ ಪರಿಸರಕ್ಕೂ ಹಾನಿ ಇಲ್ಲ' ಎಂದು ಚಿರಾಗ್ ಹೇಳಿದರು.
ಇಂತಹ ನೂತನ ಆವಿಷ್ಕಾರವಾಗಿದ್ದು, ಇದು ಪರಿಸರ ಉಳಿಸುವಲ್ಲಿ ಮತ್ತು ಪ್ಲಾಸ್ಟಿಕ್ ಬಳಕೆ ತಡೆಗಟ್ಟುವಲ್ಲಿ ಯಶಸ್ವಿಯಾಗಲಿದೆ ಎಂದೆ ಹೇಳಲಾಗುತ್ತಿದೆ.
Post a Comment